/newsfirstlive-kannada/media/post_attachments/wp-content/uploads/2023/11/mohan.jpg)
ಹೈದರಾಬಾದ್: ಹಿರಿಯ ನಟ ಚಂದ್ರಮೋಹನ್ ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ದಿಗ್ಭ್ರಮೆ ವ್ಯಕ್ತಪಡಿಸಿದೆ. 1966ರಲ್ಲಿ ರಂಗುಲ ರತ್ನಂ ಚಿತ್ರದ ಮೂಲಕ ಚಂದ್ರಮೋಹನ್ ತೆಲುಗು ಸಿನಿಮಾ ರಂಗ ಪ್ರವೇಶಿಸಿದ್ದರು. ಹಲವು ಹಿರಿಯ, ಕಿರಿಯ ನಟರ ಸೂಪರ್ ಹಿಟ್ ಸಿನಿಮಾದಲ್ಲಿ ಚಂದ್ರಮೋಹನ್ ಅವರ ಅಭಿನಯ ಅದ್ಭುತವಾಗಿದೆ.
ತೆಲುಗು ಚಿತ್ರರಂಗದಲ್ಲಿ ಚಂದ್ರ ಮೋಹನ್ ಎಲ್ಲರೊಂದಿಗೆ ಒಳ್ಳೆ ಸ್ನೇಹ ಬಾಂಧವ್ಯವನ್ನು ಹೊಂದಿದ್ದರು. ತಮಿಳು ನಟ ಎಂ.ಜಿ ರಾಮಚಂದ್ರನ್ ಅಭಿನಯದ ನಾಲೈ ನಮದೇ ಚಿತ್ರದಲ್ಲೂ ಚಂದ್ರಮೋಹನ್ ಅಭಿನಯಿಸಿದ್ದರು. ಚಂದ್ರಮೋಹನ್ ಅವರಿಗೆ ಟಾಲಿವುಡ್‌ನ ಪ್ರತಿಷ್ಠಿತ ನಂದಿ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಅವಾರ್ಡ್ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2023/11/mohan-1.jpg)
ಹಿರಿಯ ನಟ ಚಂದ್ರಮೋಹನ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಬೆಳಗ್ಗೆ 9:45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟ ಚಂದ್ರಮೋಹನ್ ಅವರ ನಿಧನಕ್ಕೆ ಟಾಲಿವುಡ್‌ನ ಹಲವು ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಇಂದು ಮತ್ತು ನಾಳೆ ಚಂದ್ರಮೋಹನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2023/11/mohan-2.jpg)
ಚಂದ್ರ ಮೋಹನ್ ಅವರು 1966 ರಲ್ಲಿ ರಂಗುಲ ರತ್ನಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮನಸಂತ ನುವ್ವೆ, ಶಂಕರಭರಣಂ, ನಿನ್ನೇ ಪೆಲ್ಲದಾತ, ಪ್ರೇಮಂತೆ ಇದೆರ, ನೀನು ನಾಕು ನಾಚವ್, ತಮ್ಮುಡು, ದೂಕುಡು, ವಸಂತಂ, ಡಾರ್ಲಿಂಗ್, 7ಜಿ ಬೃಂದಾವನ ಕಾಲೋನಿ, ದೇಸಮುದುರು, ಮತ್ತು ಧೀ ಮುಂತಾದ ಹಲವು ಯಶಸ್ವಿ ಚಿತ್ರಗಳಲ್ಲಿ ಚಂದ್ರಮೋಹನ್ ಅದ್ಬುತವಾಗಿ ಅಭಿನಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us