RCB ಜೊತೆ ಪಂಜಾಬ್ ಫೈನಲ್​.. Qualifier- 2, ಮುಂಬೈಗೆ ಬಿಗ್ ಶಾಕ್ ಕೊಟ್ಟ ಶ್ರೇಯಸ್ ಅಯ್ಯರ್!

author-image
Bheemappa
Updated On
RCB ಜೊತೆ ಪಂಜಾಬ್ ಫೈನಲ್​.. Qualifier- 2, ಮುಂಬೈಗೆ ಬಿಗ್ ಶಾಕ್ ಕೊಟ್ಟ ಶ್ರೇಯಸ್ ಅಯ್ಯರ್!
Advertisment
  • ವಿಕೆಟ್​ ಉರುಳಿದ್ದರೂ ತಂಡವನ್ನು ಗೆಲ್ಲಿಸಿದ ನಾಯಕ ಶ್ರೇಯಸ್
  • ಮಹತ್ವದ ಪಂದ್ಯದಲ್ಲಿ ಎಡವಿದ ರೋಹಿತ್ ಶರ್ಮಾ, ಹಾರ್ದಿಕ್​
  • ಆರ್​ಸಿಬಿ ಹಾಗೂ ಪಂಜಾಬ್​ ನಡುವೆ ಫೈನಲ್ ಪಂದ್ಯ ಯಾವಾಗ?

ಮೊದಲ ಕ್ವಾಲಿಫೈಯರ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಸೋತರೂ 2ನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್​ ಜೊತೆ ಹೋರಾಡಿ ಪಂಜಾಬ್​ ಕಿಂಗ್ಸ್​ ಭರ್ಜರಿ ಗೆಲುವು ಪಡೆದಿದೆ. ಈ ಮೂಲಕ 2014ರ ಬಳಿಕ ಪಂಜಾಬ್ ಕಿಂಗ್ಸ್​ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಜೂನ್ 3 ರಂದು ಆರ್​ಸಿಬಿ ವಿರುದ್ಧ ಫೈನಲ್​ ಪಂದ್ಯವಾಡಲಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್- 2 ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮಹತ್ವದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಆರಂಭ ಚೆನ್ನಾಗಿ ಇರಲಿಲ್ಲ. ರೋಹಿತ್ ಶರ್ಮಾ ಕೇವಲ 8 ರನ್​ಗೆ ವಿಕೆಟ್​ ಒಪ್ಪಿಸಿದರು. ಇನ್ನೊಬ್ಬ ಓಪನರ್​ ಬೈರ್ಸ್ಟೋವ್ 38 ರನ್​ಗೆ ವಿಕೆಟ್ ಕಳೆದುಕೊಂಡರು.

publive-image

ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಬ್ಯಾಟಿಂಗ್​​ ತಂಡಕ್ಕೆ ಹೆಚ್ಚು ನೆರವು ಕೊಟ್ಟಿತು. ವಿಚಿತ್ರ ಎಂದರೆ ಈ ಇಬ್ಬರು ತಲಾ 44 ರನ್ ಬಾರಿಸಿ ಬ್ಯಾಕ್​ ಟು ಬ್ಯಾಕ್​ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್​ಗೆ ಬಂದ ನಾಯಕ ಹಾರ್ದಿಕ್ ಪಾಂಡ್ಯ 15, ನಮನ್ ಧೀರ್ 37, ರಾಜ್ ಭಾವ 8 ರನ್​ ಈ ಎಲ್ಲರ ಬ್ಯಾಟಿಂಗ್​ನಿಂದ ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 6 ವಿಕೆಟ್​ಗೆ 203 ರನ್​ಗಳ ದೊಡ್ಡ ಗುರಿ ನೀಡಿತ್ತು.

ಈ ಟಾರ್ಗೆಟ್​ ಹಿಂದೆ ಬಿದ್ದ ಪಂಜಾಬ್​ ಕೂಡ ಆರಂಭದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿತ್ತು. ಓಪನರ್ಸ್​ ಪ್ರಭಾಸಿಮ್ರಾನ್ 6, ಪ್ರಿಯಾಂಶ್ ಆರ್ಯ 20 ರನ್​ಗೆ ವಿಕೆಟ್​ ಕಳೆದುಕೊಂಡರು. ಬಳಿಕ ಜೋಶ್ ಇಂಗ್ಲಿಷ್ ಹಾಗೂ ನಾಯಕ ಶ್ರೇಯಸ್ ಅಯ್ಯರ್​ ಉತ್ತಮ ಜೊತೆಯಾಟ ಆಡಿದರು. ಈ ವೇಳೆ ಜೋಶ್ ಇಂಗ್ಲಿಷ್ 38 ರನ್​ಗಳಿಂದ ಆಡುವಾಗ ಬೈರ್ಸ್ಟೋವ್​ಗೆ ಕ್ಯಾಚ್​ ಕೊಟ್ಟು ನಿರ್ಗಮಿಸಿದರು. ಬಳಿಕ ಬಂದ ನೆಹಾಲ್ ವಧೇರಾ ಕ್ಯಾಪ್ಟನ್​ ಅಯ್ಯರ್​ಗೆ ಒಳ್ಳೆಯ ಸಾಥ್ ಕೊಟ್ಟರು.

ಇದನ್ನೂ ಓದಿ:ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಹೊಡೆದ ಘಟನೆ.. ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಮಹಿಳೆ, ಆಕೆಯ ಗಂಡ

publive-image

ನೆಹಾಲ್ ವಧೇರಾ ಒಳ್ಳೆಯ ಸಾಥ್ ಕೊಟ್ಟರು ಎನ್ನುವುದಕ್ಕಿಂತ ಅಬ್ಬರದ ಬ್ಯಾಟಿಂಗ್ ಮಾಡಿದರು ಎನ್ನಬಹುದು. ಏಕೆಂದರೆ 29 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ನಿಂದ 48 ರನ್​ ಸಿಡಿಸಿ ಗೆಲುವಿನ ಸಮೀಪದಲ್ಲಿ ಇರುವಾಗ ಔಟ್ ಆದರು. ಬಳಿಕ ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್​ಗೆ ಆಗಮಿಸಿದರು. ಇನ್ನೊಂದೆಡೆ ಕ್ರೀಸ್​ ಕಾಯ್ದುಕೊಂಡಿದ್ದ ಶ್ರೇಯಸ್ ಅಯ್ಯರ್ ಮುಂಬೈ ಬೌಲರ್​ಗಳ ಬೆವರಿಳಿಸಿದ್ದರು.

ಶ್ರೇಯಸ್ ಅಯ್ಯರ್ ನಾಯಕನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 27 ಬಾಲ್​ಗಳಲ್ಲೇ ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮುಂದುವರೆಸಿದ್ದರು. ಕೊನೆಗೆ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್​ಗಳಿಂದ 87 ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್​ 5 ವಿಕೆಟ್​ಗೆ 207 ರನ್​ ಗಳಿಸಿ, 5 ವಿಕೆಟ್​ಗಳಿಂದ ಗೆಲುವು ಪಡೆಯಿತು. ಶ್ರೇಯಸ್ ಅಯ್ಯರ್ ಪಡೆ ಸಂಭ್ರಮದೊಂದಿಗೆ ಫೈನಲ್​ ಟಿಕೆಟ್​ ಪಡೆದುಕೊಂಡಿದೆ. ಮುಂಬೈ ಟೀಮ್ ಸೋಲುತ್ತಿದ್ದಂತೆ ಓನರ್​ ನೀತಾ ಅಂಬಾನಿ ಹಣೆ ಮೇಲೆ ಕೈ ಇಟ್ಟುಕೊಂಡರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment