Advertisment

ಧಾರವಾಡಕ್ಕೆ ಗುಡ್​ನ್ಯೂಸ್​; ಪಟಾಕಿ ಸಿಡಿಸಿ, ಫೇಮಸ್​ ಪೇಡ ತಿನ್ನಿಸಿ.. ಈ ಸಂಭ್ರಮಾಚರಣೆ ಯಾಕೆ ಗೊತ್ತಾ?

author-image
Bheemappa
Updated On
ಧಾರವಾಡಕ್ಕೆ ಗುಡ್​ನ್ಯೂಸ್​; ಪಟಾಕಿ ಸಿಡಿಸಿ, ಫೇಮಸ್​ ಪೇಡ ತಿನ್ನಿಸಿ.. ಈ ಸಂಭ್ರಮಾಚರಣೆ ಯಾಕೆ ಗೊತ್ತಾ?
Advertisment
  • ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ, ಧಾರವಾಡಿಗರ ಹರ್ಷ
  • ಜಿಲ್ಲೆಗಾಗಿ ಚಿಂತಕರು, ಸಾಹಿತಿಗಳು, ನಾಯಕರು ಪಕ್ಷಾತೀತ ಹೋರಾಟ
  • ಅದೊಂದು ಬೇಡಿಕೆಗಾಗಿ ದಶಕಗಳ ಕಾಲ ನಡೆದ ಹೋರಾಟಕ್ಕೆ ಜಯ

ವಿದ್ಯಾಕಾಶಿ ಧಾರವಾಡ ಹುಬ್ಬಳ್ಳಿಗಿಂತ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಸರ್ಕಾರದಿಂದ ಬರುವ ಭಾಗಶಃ ಅನುದಾನ ಹುಬ್ಬಳ್ಳಿಗೆ ಮೀಸಲಿಡಲಾಗುತ್ತಿದೆ. ಹೀಗಾಗಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಿ ಧಾರವಾಡವನ್ನೂ ಅಭಿವೃದ್ಧಿ ಮಾಡಬೇಕು ಎಂದು ಚಿಂತಕರು, ಸಾಹಿತಿಗಳು ಹಾಗೂ ಪಕ್ಷಾತೀತ ಕಾರ್ಯಕರ್ತರು ದಶಕಗಳ ಕಾಲ ಹೋರಾಟ ಮಾಡುತ್ತ ಬಂದಿದ್ದರು. ಆ ಹೋರಾಟಕ್ಕೆ ಜಯ ಸಿಕ್ಕಿದೆ.

Advertisment

publive-image

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಅನುಮತಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಸಿಹಿ ಹಂಚಿ ಸಂತಸ ವ್ಯಕ್ತಪಡಿಸುತ್ತಿರುವ ಹಿರಿಯ ನಾಯಕರು. ಇದು ಸುದೀರ್ಘವಾಗಿ ನಡೆದ ಹೋರಾಟಕ್ಕೆ ಸಿಕ್ಕ ಫಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸ ವರ್ಷಕ್ಕೆ ಬಂಪರ್.. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ

ಅಂದ್ಹಾಗೆ ಧಾರವಾಡದಲ್ಲಿ 26 ವಾರ್ಡ್​ಗಳಿವೆ. ಧಾರವಾಡ ಕೂಡ ಹುಬ್ಬಳ್ಳಿಯಂತೆ ಅಭಿವೃದ್ಧಿ ಕಾಣಬೇಕಾದರೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲೇಬೇಕು ಎಂದು ದಶಕಗಳ ಕಾಲ ಹೋರಾಟ ನಡೆದಿತ್ತು. ಇತ್ತೀಚಿನ 3 ವರ್ಷಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹೋರಾಟದಿಂದ ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಬಂಪರ್ ಕೊಡುಗೆ ನೀಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಇದು ಧಾರವಾಡಿಗರ ಹರ್ಷವನ್ನು ಇಮ್ಮಡಿಗೊಳಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಪ್ರತ್ಯೇಕ ಪಾಲಿಕೆ ಘೋಷಣೆಯಾಗುತ್ತಿದ್ದಂತೆ ಹೋರಾಟಗಾರರು ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು ಜಮಾಯಿಸಿ ವಿಜಯೋತ್ಸವ ಆಚರಿಸಿದರು. ಪರಸ್ಪರ ಧಾರವಾಡ ಪೇಡಾ ತಿನ್ನಿಸಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ರು.

Advertisment

ಇತ್ತೀಚೆಗಷ್ಟೇ ಹೋರಾಟಗಾರರು ನಿಯೋಗವೊಂದನ್ನು ತೆಗೆದುಕೊಂಡು ಹೋಗಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದರು. ಶಾಸಕ ವಿನಯ್ ಕುಲಕರ್ಣಿ, ಸಚಿವ ಸಂತೋಷ ಲಾಡ್, ಪ್ರಸಾದ್ ಅಬ್ಬಯ್ಯ ಹಾಗೂ ಅರವಿಂದ ಬೆಲ್ಲದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಆಗಲೇಬೇಕು ಎಂದು ಒತ್ತಡ ಹಾಕಿದ್ದರು. ಈ ಹಿಂದೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕೂಡ ಪ್ರತ್ಯೇಕ ಪಾಲಿಕೆ ಮಾಡುವ ಸಂಬಂಧ ಸಾಧಕ ಬಾಧಕಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಎಲ್ಲ ಬೆಳವಣಿಗೆ ನಂತರ ಇದೀಗ ರಾಜ್ಯ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿ ಬಂಪರ್ ಕೊಡುಗೆ ನೀಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೋಟೆನಾಡಲ್ಲಿ ಸಿನಿಮಾವನ್ನೂ ಮೀರಿಸೋ ಅಪಹರಣ ಕತೆ.. ಇಬ್ಬರು ಮಕ್ಕಳ ಯಡವಟ್ಟು ಕಿಡ್ನಾಪ್

publive-image

ಧಾರವಾಡಕ್ಕೆ ಡಿಎಂಸಿ ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ಸದ್ಯ ಧಾರವಾಡದಲ್ಲಿ 26 ವಾರ್ಡ್ ಸದಸ್ಯರಿದ್ದು, ಮುಂದೆ ವಾರ್ಡ್‌ಗಳು ವಿಂಗಡಣೆಗೊಳ್ಳಲಿವೆ. ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಹೋರಾಟಗಾರರು ಹೊಸ ವರ್ಷಕ್ಕೆ ಖುಷ್​ ಆಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment