newsfirstkannada.com

ಸೆಪ್ಟೆಂಬರ್​​ ತಿಂಗಳಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿವೆ 3 ಕಾರುಗಳು.. ಒಂದಕ್ಕಿಂತ ಒಂದು ಅದ್ಭುತ!

Share :

Published September 2, 2024 at 7:39am

    ಹಬ್ಬದ ಸೀಸನ್​ನಲ್ಲಿ ಮಾರುಕಟ್ಟೆಗೆ ಬರುತ್ತಿರುವ ಕಾರುಗಳಿವು

    ಸೆಪ್ಟೆಂಬರ್​ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ ಈ ಕಾರುಗಳು

    ಒಂದಕ್ಕಿಂತ ಒಂದು ಅದ್ಭುತ.. ಕಾರಿನ ಬೆಲೆ, ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

ಆಗಸ್ಟ್​​ ತಿಂಗಳು ಕಳೆದು ಸೆಪ್ಟೆಂಬರ್​ ತಿಂಗಳು ಬಂತು. ಈ ತಿಂಗಳಿನಲ್ಲಿ ಕೆಲವು ಮೋಟಾರು ವಾಹನ ತಯಾರಿಕ ಕಂಪನಿಗಳು ನೂತನ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಅದರಂತೆಯೇ ಹಬ್ಬದ ಸೀಸನ್​ನಲ್ಲಿ ಯಾವೆಲ್ಲಾ ಕಾರುಗಳನ್ನು ಮಾರುಕಟ್ಟೆಗೆ ಬರಲಿದೆ ಎಂದು ನೋಡೋಣ.

ಟಾಟಾ ಕರ್ವ್​​​ ICE

ಟಾಟಾ ಕಳೆದ ತಿಂಗಳು ಟಾಟಾ ಕರ್ವ್​​​ ಹೆಸರಿನಲ್ಲಿ ಎಲೆಕ್ಟ್ರಿಕ್​ ಆವೃತ್ತಿಯನ್ನು ಪರಿಚಯಿಸಿತ್ತು. ಆದರೆ ಟಾಟಾ ಕರ್ವ್​​​ ICE ಹೆಸರಿನ ಇಂಧನ ಚಾಲಿತ ರೂಪಾಂತರವನ್ನು ಪರಿಚಯಿಸುತ್ತಿದೆ. ಅಂದಹಾಗೆಯೇ ಈ ನೂತನ ಕಾರು ಇಂದು ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ.

ನೂತನ ಕಾರಿನ ಬೆಲೆ 12-18 ಲಕ್ಷ ರೂಪಾಯಿ ಎಂದು ನಿರೀಕ್ಷಿಸಲಾಗಿದೆ. ಖರೀದಿದಾರರಿಗೆ ಈ ಕಾರಿನ ಮೇಲೆ ಹಲವು ಆಯ್ಕೆಗಳಿವೆ. ಅಟ್ಲಾಸ್​​ ಫ್ಲಾಟ್​​ಫಾರ್ಮ್​ನಲ್ಲಿ ಕಾರನ್ನು ತಯಾರಿಸಲಾಗಿದೆ. ಮೊದಲು ಎಲೆಕ್ಟ್ರಿಕ್​ ರೂಪಾಂತರದಲ್ಲಿ ಪರಿಚಯಿಸಲಾಯಿತು. ಇದೀಗ ಎರಡು ಟರ್ಬೋ ಪೆಟ್ರೋಲ್​​​ ಎಂಜಿನ್​ ಆಯ್ಕೆ ಮತ್ತು ಡೀಸೆಲ್​​ ಆಯ್ಕೆಯೊಂದಿಗೆ ಬರುತ್ತಿದೆ.

2024 ಹುಂಡೈ ಅಲ್ಕಾಜರ್

ಹುಂಡೈ ಅಲ್ಕಾಜರ್​ 2024ನೇ ವರ್ಷದಲ್ಲಿ ಹಲವು ನವೀಕರಣವನ್ನು ತರುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿ ಮಾದರಿಯಾಗಿ ಗುರುತಿಸಿಕೊಂಡ ಈ ಕಾರು ಸೆಪ್ಟೆಂಬರ್​ 9ರಂದು ಬಿಡುಗಡೆಯಾಗುತ್ತಿದೆ. ಸುಧಾರಿತ ತಂತ್ರಜ್ಞಾನ ಮತ್ತು ಆಧುನಿಕ ಸೌಕರ್ಯವನ್ನು ನೂತನ ಕಾರು ಹೊಂದಿದೆ. ಅಂದಹಾಗೆಯೇ ಇದು ಎಸ್​ಯುವಿಯ ಫೇಸ್​ಲಿಫ್ಟ್​ ಮಾದರಿಯಾಗಿದೆ.
​​​
ಹುಂಡೈ ಅಲ್ಕಾಜರ್ 1.5 ಲೀಅರ್​ ಟರ್ಬೋ ಎಂಜಿನ್​ನೊಂದಿಗೆ ಬರುತ್ತಿದೆ. 157.8ಬಿಹೆಚ್​ಪಿ ಮತ್ತು 23ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. 6 ಸ್ಪೀಡ್​​ ಮ್ಯಾನುವೆಲ್​ 7 ಸ್ಟೀಡ್​​ ಡ್ಯುಯೆಲ್​​​ ಕ್ಲಚ್​​ ಅಟೋಮ್ಯಾಟಿಕ್​​ ಟ್ರಾನ್ಸ್​​ಮಿಷನ್​​ನೊಂದಿಗೆ ಬರುತ್ತಿದೆ.

ಎಂಜಿ ವಿಂಡ್ಸರ್​ ಇವಿ

ಸೆಪ್ಟೆಂಬರ್​ನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿರುವ ಮತ್ತೊಂದು ಕಾರು ಇದಾಗಿದೆ. ಇಂಡೋನೇಷ್ಯಾದಲ್ಲಿ ಕ್ಲೌಡ್​​ ಇವಿ ಎಂದು ಪರಿಚಯಗೊಂಡಿರುವ ಈ ಕಾರು ಭಾರತದಲ್ಲಿ MG ವಿಂಡರ್ಸ್​​ ಇವಿ ಎಂದು ಪರಿಚಯಗೊಳ್ಳಲಿದೆ. ಇಂದೇ ತಿಂಗಳು 11ನೇ ತಾರೀಖು ಮಾರುಕಟ್ಟೆಗೆ ಬರಲಿದೆ.

ನೂತನ ಕಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ. ಇದರಲ್ಲಿ ಸುರಕ್ಷತೆಗಾಗಿ 360 ಡಿಗ್ರಿ ಕ್ಯಾಮೆರಾ, EBD ಮತ್ತು ABS, ಪಾರ್ಕಿಂಗ್​ ಸಂವೇದಕ ಒಳಗೊಂಡಿದೆ. ಮಾತ್ರವಲ್ಲದೆ, ಪ್ರಯಾಣಿಕರಿಗೆ ಸಂಪೂರ್ಣ ವಿಶಾಲವಾದ ಹಿಂಬದಿಯ ಆಸನ ವ್ಯವಸ್ಥೆ, 15.6 ಟಚ್​ಸ್ಕ್ರೀನ್​​ ಇನ್ಫೋಟೈನ್​ಮೆಂಟ್​​ ಸೇರಿ ಹಲವು ವೈಶಿಷ್ಟ್ಯಗಳು ಇದರಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಪ್ಟೆಂಬರ್​​ ತಿಂಗಳಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿವೆ 3 ಕಾರುಗಳು.. ಒಂದಕ್ಕಿಂತ ಒಂದು ಅದ್ಭುತ!

https://newsfirstlive.com/wp-content/uploads/2024/09/cars.jpg

Load More