/newsfirstlive-kannada/media/post_attachments/wp-content/uploads/2024/10/Kerala-CM-Serial-Accident.jpg)
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬೆಂಗಾವಲು ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕೇರಳ ಸಿಎಂ ಇದ್ದ ಕಾರು ಕೂಡ ಜಖಂ ಆಗಿದೆ.
ತಿರುವನಂತಪುರಂ ವಾಮನಪುರಂನಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಪಿಣರಾಯಿ ವಿಜಯನ್ ತೆರಳುತ್ತಿದ್ದಾಗ ವಾಮನಪುರಂ ಪಾರ್ಕ್​ ಜಂಕ್ಷನ್​ ಬಳಿ ಈ ಅಪಘಾತ ನಡೆದಿದೆ.
ಕೇರಳ ಸಿಎಂ ಬೆಂಗಾವಲು ವಾಹನಗಳ ಜೊತೆ ತೆರಳುತ್ತಿದ್ದಾಗ ಪೈಲಟ್ ವಾಹನ ಸ್ಕೂಟರ್​ಗೆ ಡಿಕ್ಕಿ ತಪ್ಪಿಸಲು ದಿಢೀರನೇ ಬ್ರೇಕ್ ಹಾಕಿದೆ. ಮುಂದಿನ ವಾಹನ ಸಡನ್ ಬ್ರೇಕ್ ಹಾಕಿದ್ದರಿಂದ ಕೇರಳ ಸಿಎಂ ಬೆಂಗಾವಲಿಗಿದ್ದ 5 ವಾಹನಗಳು ಹಿಂದಿನಿಂದ ಡಿಕ್ಕಿಯಾಗಿವೆ.
Kerala: The escort vehicles of Kerala Chief Minister Pinarayi Vijayan met with an accident in Vamanapuram, Thiruvananthapuram after a scooter rider abruptly crossed in front of the vehicles. The Chief Minister's vehicle sustained minor damage pic.twitter.com/fHPMgnLLvw
— Raajeev Chopra (@Raajeev_Chopra)
Kerala: The escort vehicles of Kerala Chief Minister Pinarayi Vijayan met with an accident in Vamanapuram, Thiruvananthapuram after a scooter rider abruptly crossed in front of the vehicles. The Chief Minister's vehicle sustained minor damage pic.twitter.com/fHPMgnLLvw
— Raajeev Chopra (@Raajeev_Chopra) October 28, 2024
">October 28, 2024
ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿಯಾಗುತ್ತಿದ್ದ ಅನಾಹುತ ತಪ್ಪಿಸಲು ಈ ಘಟನೆ ನಡೆದಿದೆ. ಅದೃಷ್ಟವಶಾತ್ ಸಿಎಂ ಪಿಣರಾಯ್ ವಿಜಯನ್​ಗೆ ಯಾವುದೇ ಗಾಯಗಳಾಗಿಲ್ಲ. ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಸರಣಿ ಅಪಘಾತದ ದೃಶ್ಯ ಕ್ಯಾಮೆರಾದ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us