newsfirstkannada.com

ನಟನೆಗೆ ಗುಡ್ ಬೈ, ಬ್ಯುಸಿನೆಸ್​ಗೆ ಹಾಯ್​ ಎಂದ ನಟಿ! ಈಗ 830 ಕೋಟಿ ಮೌಲ್ಯದ ಕಂಪನಿ ಒಡತಿ

Share :

Published July 13, 2024 at 6:53pm

Update July 13, 2024 at 6:55pm

    ನೆಗೆಟಿವ್ ರೋಲ್​ಗಳಲ್ಲಿ ಅಭಿಮಾನಿಗಳ ಮನಗೆದಿದ್ದ ನಟಿ

    ಕಾಸ್ಮೆಟಿಕ್ ಬ್ರಾಂಡ್​ನ ಸ್ಥಾಪಿಸಿ ಭರ್ಜರಿ ಸಕ್ಸಸ್ ಕಂಡ ತಾರೆ

    ಈಕೆ ಮಹಿಳಾ ಉದ್ಯಮಿಗಳಿಗೆ ಇನ್ಸ್​ಪಿರೇಷನ್ ಅಂದ್ರೆ ತಪ್ಪಾಗಲ್ಲ

ಯಾಱರಿಗೆ ಲಕ್ ಎಲ್ಲೆಲ್ಲಿ ಖುಲಾಯಿಸುತ್ತೆ ಅನ್ನೋದನ್ನ ಅಷ್ಟು ಸುಲಭವಾಗಿ ತಿಳ್ಕೊಳೋಕೆ ಆಗಲ್ಲ ಅನಿಸುತ್ತೆ. ಯಾಕಂದ್ರೆ, ಯಾವುದೋ ಒಂದು ಫೀಲ್ಡ್​ನಲ್ಲಿ ಸಕ್ಸಸ್ ಆಗ್ದೇ ಇದ್ದೋರು ಇನ್ನೆಲ್ಲೋ ಯಾರೂ ಊಹಿಸೋಕೂ ಆಗದಿರುವಂತಹ ಎತ್ತರಕ್ಕೆ ಬೆಳಿಯಬಹುದು. ಇನ್ನು ಕೆಲವರಿಗೆ ಅದೃಷ್ಟ ದೇವತೆ ಅವ್ರ ಕೈನಲ್ಲೇ ಕುಣಿತಿರ್ತಾಳೆ ಅನಿಸುತ್ತೆ. ಅವ್ರು ಮುಟ್ಟಿದ್ದೆಲ್ಲಾ ಚಿನ್ನ. ಅದರಂತೆಯೇ ಈ ನಟಿಯ ಜೀವನ ಕೂಡ. ಸಕ್ಸಸ್​ಫುಲ್​ ನಟಿ ಮಾತ್ರವಲ್ಲದೆ, ಸಕ್ಸಸ್​ಫುಲ್​ ವುಮೆನ್​ ಆಗಿ ಮೆರೆದ ಈ ನಟಿ ಬಗ್ಗೆ ತಿಳಿದುಕೊಳ್ಳಲೇಬೇಕು.

ವಿಲನ್ ಪಾತ್ರದಲ್ಲಿ ಮಿಂಚಿದ್ದ ನಟಿ

ಹಿಂದಿ ಸೀರಿಯಲ್​ಗಳನ್ನ ನೋಡಿದವರಿಗೆ, ಅದರಲ್ಲೂ ‘ನಾಗಿನ್’ ಸೀರಿಯಲ್​ ನೋಡಿದವರಿಗೆ ಈ ನಟಿಯ ಪರಿಚಯ ಇದ್ದೇ ಇರುತ್ತೆ. ಹಿಂದಿಯ ‘ನಾಗಿನ್’ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದ ನಟಿ ಆಶ್ಕಾ ಗೊರಾಡಿಯಾ. 2002ರಲ್ಲಿ ತನ್ನ ನಟನಾ ವೃತ್ತಿಯನ್ನ ಆರಂಭಿಸಿದ ‘ಆಶ್ಕಾ’, ‘ಕುಸುಮ್’ ಸೀರಿಯಲ್​ನಲ್ಲಿ ಕುಮುದ್ ಪಾತ್ರವನ್ನ ಮಾಡಿ ಖ್ಯಾತಿ ಪಡೆದಿದ್ರು. ಇವ್ರ ಪಾಪ್ಯುಲಾರಿಟಿಯನ್ನ ಉತ್ತುಂಗಕ್ಕೆ ಏರಿಸಿದ್ದು, ನಾಗಿನ್​ನ ವಿಲನ್ ಕ್ಯಾರೆಕ್ಟರ್. ‘ಸಿಂಧೂರ್ ತೇರೆ ನಾಮ್ ಕಾ’, ‘ವಿರುದ್ಧ್’, ‘ಮೇರೆ ಅಪ್ನೆ’, ‘ಡಯಾನ್’ ಸೇರಿದಂತೆ ಹಲವು ಸೋಪ್ ಒಪೆರಾಗಳಲ್ಲಿ ನಟಿಸಿದ ಆಶ್ಕಾ, ಹಿಂದಿಯ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್​ನ 6ನೇ ಸೀಸನ್​ನಲ್ಲೂ ಸ್ಪರ್ಧಿಯಾಗಿದ್ರು.

ಇದನ್ನೂ ಓದಿ: ಸಿಕಂದರ್​ ರಾಜಾಗೆ ನಿರಾಸೆ! ಟೀಂ ಇಂಡಿಯಾಗೆ 152 ರನ್​​ಗಳ ಟಾರ್ಗೆಟ್​ ನೀಡಿದ ಜಿಂಬಾಬ್ವೆ

ನಟನೆಗೆ ಟಾಟಾ, ಗುಡ್​ ಬೈ.. ಬ್ಯುಸಿನೆಸ್​ಗೆ ಹಾಯ್​

2019ರಲ್ಲಿ ನಟನೆಗೆ ಟಾಟಾ, ಗುಡ್​ ಬೈ ಹೇಳಿದ ನಟಿ ಆಶ್ಕಾ ಗೊರಾಡಿಯಾ, ನಂತರ ತಮ್ಮ ಚಿತ್ತ ಹರಿಸಿದ್ದು ಬ್ಯುಸಿನೆಸ್​ನತ್ತ. ಖ್ಯಾತಿಯ ಉತ್ತುಂಗದಲ್ಲಿ ಇದ್ದಾಗಲೇ ಆಶ್ಕಾಗೆ ಯೋಗ ಹಾಗೂ ಬ್ಯುಸಿನೆಸ್​ನಲ್ಲಿ ಆಸಕ್ತಿ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ನಟನೆಗೆ ಫುಲ್ ಸ್ಟಾಪ್ ಇಟ್ರು. ಇನ್ನು, ಌಕ್ಟಿಂಗ್​ನಲ್ಲಿ ಪಳಗಿದ್ದ ಆಶ್ಕಾಗೆ, ಮೇಕಪ್, ಕಾಸ್ಮೆಟಿಕ್ಸ್ ಬಗ್ಗೆ ಎಲ್ಲವೂ ಗೊತ್ತಿತ್ತು. ಅಲ್ಲದೆ, ಮೇಕಪ್ ಹಾಕ್ಕೊಂಡ್ರೆ ಹಲವರಲ್ಲಿ ಕಾನ್ಫಿಡೆನ್ಸ್ ಹೆಚ್ಚಾಗೋದನ್ನ ಕೂಡ ತಮ್ಮ ಕಣ್ಣಾರೆ ಕಂಡಿದ್ದರು ಆಶ್ಕಾ. ಇದ್ರ ಜೊತೆಯಲ್ಲೇ ಭಾರತದಲ್ಲಿ ಮೇಕಪ್ ಬಗ್ಗೆ ಇರೋ ಜನರ ಅಭಿಪ್ರಾಯವನ್ನ ಬದಲಿಸಬೇಕು ಅನ್ನೋ ಹಂಬಲ. ಭಾರತೀಯರು ಎಂದೂ ನೋಡದ ಕಾಸ್ಮೆಟಿಕ್ ಪ್ರಾಡಕ್ಟ್​​ಗಳನ್ನ ತರಬೇಕು. ಅದೂ ಕೂಡ ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಪ್ರೊಫೆಷನಲ್ ಮೇಕಪ್​ನ ಸೌಲಭ್ಯ ಸಿಗಬೇಕು ಅನ್ನೋ ಉದ್ದೇಶವಿತ್ತು. ಹೀಗಾಗಿಯೇ ತಮ್ಮ ಕಾಲೇಜಿನ ಸ್ನೇಹಿತರಾದ ಪ್ರಿಯಾಂಕ್ ಶಾ ಹಾಗೂ ಅಶುತೋಷ್ ವಲಾನಿ ಜೊತೆಗೂಡಿ ರೆನೆ ಕಾಸ್ಮೆಟಿಕ್ಸ್ ಸಂಸ್ಥೆಯನ್ನ ಹುಟ್ಟು ಹಾಕಿದ್ರು.

ರೆನೆ ಕಾಸ್ಮೆಟಿಕ್ಸ್ ಸಂಸ್ಥೆ ಸ್ಥಾಪನೆ

ರೆನೆ ಕಾಸ್ಮೆಟಿಕ್ಸ್ ಶುರುವಾಗಿ ಈಗ 4 ವರ್ಷಗಳಷ್ಟೇ ಆಗಿರೋದು. ಅಷ್ಟರಲ್ಲೇ 830 ಕೋಟಿ ರೂಪಾಯಿಯ ಮಾರುಕಟ್ಟೆ ಮೌಲ್ಯವನ್ನ ಹೊಂದಿದೆ. ಗುಜರಾತ್​ನ ಅಹ್ಮದಾಬಾದ್​ನಲ್ಲಿ ರೆನೆ ಕಾಸ್ಮೆಟಿಕ್ಸ್​ನ ಹೆಡ್ ಆಫೀಸ್ ಇದೆ. ಆಫ್ ಲೈನ್ ಹಾಗೂ ಆನ್ ಲೈನ್ ಮಾರುಕಟ್ಟೆಯಲ್ಲಿ ರೆನೆ ಕಾಸ್ಮೆಟಿಕ್ಸ್​ನ 200ಕ್ಕೂ ಹೆಚ್ಚು ಪ್ರಾಡಕ್ಟ್​ಗಳು ಮಾರಾಟವಾಗ್ತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಗೂ ಲಗ್ಗೆ ಇಟ್ಟಿದ್ದು ಅಮೆರಿಕಾ, ಆಸ್ಟ್ರೇಲಿಯಾ, ಯುಎಇನಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅಲ್ಲದೆ, ಭಾರತದಲ್ಲಿ ಲೀಡ್ ಕಾಸ್ಮೆಟಿಕ್ ಬ್ರಾಂಡ್​ಗಳ ಜೊತೆ ರೆನೆ ಕಾಸ್ಮೆಟಿಕ್ಸ್ ಸ್ಪರ್ಧೆಯೊಡ್ಡುತ್ತಿದೆ.

ಇದನ್ನೂ ಓದಿ: ‘ಅಮೃತಾಂಜನ’ ತಲೆ ನೋವಿಗೆ ಪರಿಹಾರ.. ಈ ಸಂಸ್ಥೆಯ ಸ್ಥಾಪಕ ಯಾರು ಗೊತ್ತಾ? ಹಿನ್ನೆಲೆ ಮಾತ್ರ ಅದ್ಭುತ

ರೆನೆ ಕಾಸ್ಮೆಟಿಕ್ಸ್​ನ ವಿಶೇಷತೆ ಏನು ಗೊತ್ತಾ?

ರೆನೆ ಕಾಸ್ಮೆಟಿಕ್ಸ್​ನ ಮತ್ತೊಂದು ವಿಶೇಷತೆ ಅಂದ್ರೆ ಇವ್ರ ಬಹುತೇಕ ಪ್ರಾಡಕ್ಟ್​ಗಳು ವೀಗನ್ ಆಗಿರುತ್ತೆ. ಯಾವುದೇ ರೀತಿಯ ಪ್ರಾಣಿ ಹಿಂಸೆ ಮಾಡಲ್ಲ ಅಂತ ಹೇಳಲಾಗುತ್ತೆ. ಶೀಘ್ರದಲ್ಲೇ 500 ಕೋಟಿಗೂ ಹೆಚ್ಚು ರೆವೆನ್ಯೂನ ನಿರೀಕ್ಷೆಯಲ್ಲೂ ರೆನೆ ಕಾಸ್ಮೆಟಿಕ್ಸ್ ಸಂಸ್ಥೆ ಇದೆ. ಸಂಸ್ಥೆಯಲ್ಲಿ ಪ್ರಿಯಾಂಕ್ ಹಾಗೂ ಆಶುತೋಷ್ ಫೈನಾನ್ಸ್, ಆಪರೇಷನ್ ಹಾಗೂ ಡಿಸ್ಟ್ರಿಬ್ಯೂಷನ್​ನ ನೋಡಿಕೊಳ್ತಾರೆ. ಆಶ್ಕಾ ಗೊರಾಡಿಯಾ, ತಮ್ಮ ಪ್ರಾಡಕ್ಟ್​ಗಳ ತಯಾರಿ ಹಾಗೂ ಕ್ವಾಲಿಟಿ ಮೇಲೆ ಗಮನ ಹರಿಸೋದ್ರ ಜೊತೆಗೆ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ವಿಭಾಗ ನೋಡಿಕೊಳ್ತಾರೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ ಬರಲಿದೆ ಈ ವೈಶಿಷ್ಟ್ಯ.. ಏನದು?

ಮಹಿಳಾ ಉದ್ಯಮಿಗಳಿಗೆ ಇನ್ಸ್​ಪಿರೇಷನ್

ನಟಿಯಾಗಿ ಮಿಂಚಬೇಕು ಅಂತ ಹಿಂದಿ ಟೆಲಿವಿಷನ್​ನ ರಂಗೀನ್ ದುನಿಯಾಕ್ಕೆ ಎಂಟ್ರಿ ಕೊಟ್ಟು, ಅಲ್ಲೂ 17 ವರ್ಷಗಳ ಕಾಲ ತಮ್ಮ ಛಾಪು ಮೂಡಿಸಿದ್ದರು ಆಶ್ಕಾ. ಆಮೇಲೆ ದಿಢೀರ್ ಅಂತ ನಟನೆಯಿಂದ ದೂರಾಗಿ, ಉದ್ಯಮ ಲೋಕಕ್ಕೆ ಪದಾರ್ಪಣೆ ಮಾಡಿ, ಅಲ್ಲೂ ಕೂಡ ಭರ್ಜರಿ ಯಶಸ್ಸನ್ನ ಕಂಡಿದ್ದು, ನಿಜಕ್ಕೂ ಸ್ಟಾರ್ಟಪ್ ಕನಸು ಕಾಣೋರಿಗೆ, ಅದ್ರಲ್ಲೂ ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಬರಲು ತುದಿಗಾಲಲ್ಲಿ ಇರುವ ಮಹಿಳಾ ಉದ್ಯಮಿಗಳಿಗೆ ಇನ್ಸ್​ಪಿರೇಷನ್.

ವಿಶೇಷ ವರದಿ: ನವೀನ್​ ಕುಮಾರ್​ ಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟನೆಗೆ ಗುಡ್ ಬೈ, ಬ್ಯುಸಿನೆಸ್​ಗೆ ಹಾಯ್​ ಎಂದ ನಟಿ! ಈಗ 830 ಕೋಟಿ ಮೌಲ್ಯದ ಕಂಪನಿ ಒಡತಿ

https://newsfirstlive.com/wp-content/uploads/2024/07/aashka-goradia.jpg

Load More