/newsfirstlive-kannada/media/post_attachments/wp-content/uploads/2025/07/disha.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 12 ಇನ್ನೇನು ಸ್ವಲ್ಪ ತಿಂಗಳಲ್ಲಿ ಶುರುವಾಗಲಿದೆ. ಈ ಸಲ ಬಿಗ್ ಬಾಸ್​ಗೆ ಕಿಚ್ಚ ಸುದೀಪ ಅವರೇ ನಿರೂಪಣೆ ಮಾಡಲಿದ್ದಾರೆ. ಆದ್ರೆ ಈ ಮಧ್ಯೆ ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಹೋಗುತ್ತಾರೆ ಅಂತ ಸೋಷಿಯಲ್​ ಮೀಡಿಯಾದಲ್ಲಿ ನಟ ನಟಿಯರ ಹೆಸರುಗಳು ಓಡಾಡುತ್ತಲೇ ಇರುತ್ತವೆ. ಆದ್ರೆ, ಸೀಸನ್ 12 ಆರಂಭಗೊಂಡ ಬಳಿಕ ಈ ಬಗ್ಗೆ ಅಧಿಕೃತ ಮಾಹಿತಿ ಗೊತ್ತಾಗಲಿದೆ.
/newsfirstlive-kannada/media/post_attachments/wp-content/uploads/2025/05/Disha_Madan_NEW_2.jpg)
ಆದ್ರೆ, ಈ ಬಾರಿಯ ಬಿಗ್​ಬಾಸ್ ಸೀಸನ್ 12ಕ್ಕೆ ನಟಿ ದಿಶಾ ಮದನ್​ ಅವರು ಎಂಟ್ರಿ ಕೊಡ್ತಾ ಇದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಈ ಬಗ್ಗೆ ಖುದ್ದು ನಟಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಭಿಮಾನಿಯೊಬ್ಬರು, ದಿಶಾ ಮದನ್ ನೀವು ಬಿಗ್‌ಬಾಸ್ ಕನ್ನಡಕ್ಕೆ ಹೋಗುತ್ತಿರುವ ಸುದ್ದಿ ಸಿಕ್ಕಿತು. ನಾವು ನಿಮ್ಮನ್ನು ಬಿಗ್‌ಬಾಸ್‌ನಲ್ಲಿ ನೋಡಲು ನಿಜವಾಗಿಯೂ ಬಯಸುತ್ತೇವೆ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ನಟಿ ದಿಶಾ ಮದನ್​ ಸ್ವೀಟ್ ಬಟ್​ ನೋ.. (Sweet But No) ಅಂತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
/newsfirstlive-kannada/media/post_attachments/wp-content/uploads/2025/07/disha1.jpg)
ನಟಿ ದಿಶಾ ಮದನ್​ ಅವರು ಕನ್ನಡ ಕಿರುತೆರೆ ನಟಿ, ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ಕುಲವಧು, ಲಕ್ಷ್ಮೀ ನಿವಾಸ ಮುಂತಾದ ಧಾರಾವಾಹಿಗಳ ಮೂಲಕ ಫೇಮಸ್ ಆಗಿದ್ದಾರೆ. ಮೊನ್ನೆಯಷ್ಟೇ ನಟಿ ದಿಶಾ ಮದನ್ ಅವರು, ಫ್ರಾನ್ಸ್‌ನಲ್ಲಿ ನಡೆದ ಅತೀ ದೊಡ್ಡ ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಕನ್ನಡದ ನಟಿ ಭಾಗಿಯಾಗಿದ್ದು ಹೆಮ್ಮೆ ತಂದಿತ್ತು. 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 70 ವರ್ಷಗಳ ಹಿಂದಿನ ಅಮ್ಮನ ಕೆಂಪು ಬಣ್ಣದ ಸೀರೆಯನ್ನು ಗೌನ್​ ಆಗಿ ಮಾಡಿಕೊಂಡು ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us