/newsfirstlive-kannada/media/post_attachments/wp-content/uploads/2024/09/CHANDAN_KUMAR.jpg)
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದರಿಂದ ಎರಡು ಫ್ಯಾಮಿಲಿಯಲ್ಲೂ ಖುಷಿ ದುಪ್ಪಟ್ಟಾಗಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ​ ಖ್ಯಾತಿ ಪಡೆದುರುವ ಈ ಸ್ಟಾರ್​ ಜೋಡಿ ಚೊಚ್ಚಲ ಗಂಡು ಮಗುವಿಗೆ ವೆಲ್​​ಕಮ್​ ಹೇಳಿದ್ದಾರೆ.
ಮುದ್ದು ಕಂದ ಧರೆಗೆ ಆಗಮಿಸಿದ ಎಂದು ಚಂದನ್ ಕುಮಾರ್ ತಮ್ಮ ಇನ್​ಸ್ಟಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮಗುವಿನ ಬೆಳ್ಳಗಿನ ಕಾಲುಗಳು ಮಾತ್ರ ಕಾಣುತ್ತಿದ್ದು ಚಂದನ್ ಕುಮಾರ್ ಮುಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಮಗುವಿನ ಮುಖವನ್ನು ರಿವೀಲ್ ಮಾಡಿಲ್ಲ. ನಮ್ಮ ಮುದ್ದು ಕಂದಮ್ಮ ಧರೆಗೆ ಇಳಿದಿದ್ದಾನೆ ಎಂದು ಟ್ಯಾಗ್ ಲೈನ್ ಬರೆದಿದ್ದಾರೆ. ಸದ್ಯ ತಾಯಿ ಕವಿತಾ ಗೌಡ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಲಕ್ಷ್ಮೀ ಬಾರಮ್ಮ ಸೀರಿಯಲ್​ ಕವಿತಾ ಗೌಡಗೆ ಅದ್ದೂರಿ ಸೀಮಂತ ಶಾಸ್ತ್ರ; ಯಾರೆಲ್ಲಾ ಬಂದಿದ್ರು?
View this post on Instagram
ಇನ್​ಸ್ಟಾದಲ್ಲಿ ಶೇರ್ ಮಾಡಿರುವ ವಿಡಿಯೋಗೆ ಅಭಿಮಾನಿಗಳೆಲ್ಲ ಶುಭಾಶಯಗಳನ್ನು ಕೋರುತ್ತಿದ್ದಾರೆ. ಕಂಗ್ರಾಟ್ಸ್​, ಲಿಟ್ಲ್ ಚಂದು ಎಂದೆಲ್ಲ ಫ್ಯಾನ್ಸ್ ಕಮೆಂಟ್​​ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕವಿತಾ ಗೌಡ ಅವರ ಸೀಮಂತ ಶಾಸ್ತ್ರ ಸಂಭ್ರಮದಿಂದ ನೆರವೇರಿತ್ತು. ಮೇ 5ರಂದು ಇನ್​ಸ್ಟಾ​ ಖಾತೆಯಲ್ಲಿ ಮುದ್ದಾದ ಫೋಟೋವನ್ನು ಶೇರ್​ ಮಾಡಿಕೊಂಡು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದ್ದರು. ಅದರಂತೆ ಕವಿತಾ ಗೌಡ ಹಾಗೂ ಚಂದನ್ ನಿವಾಸಕ್ಕೆ ಹೊಸದೊಂದು ನಗು ಆಗಮನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ