/newsfirstlive-kannada/media/media_files/2025/10/18/cadaboms-satish-2025-10-18-07-33-50.png)
Photograph: (Newsfirst kannada)
ಮಿಡ್​ವೀಕ್​ನಲ್ಲಿ ನಡೆದ ಎಲಿಮಿನೇಷನ್​ ಭೂತಕ್ಕೆ ಬಲಿಯಾಗಿ ಸತೀಶ್ ಕಡಬಮ್ ಬಿಗ್​ಬಾಸ್​ನಿಂದ ಹೊರ ಬಂದಿದ್ದಾರೆ. ಸತೀಶ್ ಕಡಬಮ್​ ದುಬಾರಿ ಬೆಲೆಯ ಡಾಗ್​ಗಳ ಖರೀದಿ & ಮಾರಾಟದಿಂದಲೇ ಫೇಮಸ್ ಆಗಿದ್ದಾರೆ. ಅಲ್ಲದೇ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಸಂಜನಾ ಗಲ್ರಾನಿ ಸೇರಿದಂತೆ ಅನೇಕ ಸ್ಟಾರ್ ನಟ, ನಟಿಯರಿಗೆ ನಾನು ನಾಯಿ ಕೊಟ್ಟಿದ್ದೀನಿ ಎಂದು ಹೇಳಿಕೊಳ್ಳುತ್ತಾರೆ.
ಇನ್ನು ಹೊರಗಡೆ ಸತೀಶ್ ಕಡಬಮ್ ಬಳಿ 100 ಕೋಟಿ ಬೆಲೆಯ ನಾಯಿ ಇದ್ಯಾ? ED ರೇಡ್ ಆದಾಗ ಸತೀಶ್ ಅಕೌಂಟ್​ನಲ್ಲಿ ದುಡ್ಡೇ ಇರಲಿಲ್ವಂತೆ ? ಆತ ಹೇಳೋದೆಲ್ಲ ಸುಳ್ಳು ಎಂಬ ವದಂತಿಗಳಿವೆ. ಈ ಕುರಿತು ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಸ್ವತಃ ಸತೀಶ್ ಸ್ಪಷ್ಟನೆ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/10/18/dog-satish-2025-10-18-07-24-26.png)
ನಾಯಿಗಳನ್ನ ಖರೀದಿಸೋದು, ಮಾರಾಟ ಮಾಡೋದೇ ನನ್ನ ಬ್ಯುಸಿನೆಸ್. ED ರೇಡ್ ಆದಾಗ ನನ್ನ ಎಲ್ಲಾ ಡಾಕ್ಯೂಮೆಂಟ್ಸ್​ನ ತೋರಿಸಿದ್ದೀನಿ. ಟಿಫನ್ ತಂದ್ಕೊಟ್ಟೆ ತಿಂದ್ರು, ಅವರ ಪಾಡಿಗೆ ಅವರು ಹೋದ್ರು. ನನ್ನನ್ನ ಅರೆಸ್ಟ್ ಮಾಡಿ ದೆಹಲಿಗೆ ಕರ್ಕೊಂಡೋಗಿದ್ದಾರೆ. 3 ದಿನ ನನ್ನನ್ನ ಕೂಡಾಕಿದ್ದಾರೆ ಅನ್ನೋದೆಲ್ಲ ಸುಳ್ಳು. ED ರೇಡ್ ಆದ ಸಾಯಂಕಾಲವೇ ನಾನು, ನನ್ನ ಮಗ ಒಂದು ಹೀರೋಯಿನ್ ಜೊತೆ ಪಾರ್ಟಿ ಮಾಡ್ತಿದ್ವಿ ಎಂದು ಸತೀಶ್ ಉತ್ತರಿಸಿದ್ದಾರೆ.
ಇನ್ನು ರೇಡ್ ಆದಾಗ ನನ್ನ ಮನೆಯಲ್ಲಿ ನಾಯಿ ಇರಲೇ ಇಲ್ಲ, ಆದ್ರಿಂದ ನಾನು ಸೇಫ್. ಅಲ್ಲದೆ 10 ಸಾವಿರಕ್ಕೆ ನಾಯಿನ ಬಾಡಿಗೆಗೆ ತರ್ತೀನಿ ಅಂತ ಸುದ್ದಿ ಹಬ್ಬಿಸಿದ್ದರು. ಆದ್ರೆ ನಾನು ನಾಯಿ ಮೇಲೆ ಇನ್ವೆಸ್ಟ್ ಮಾಡಿ ಬೇರೆಯವರ ಮನೆಯಲ್ಲಿ ಅದನ್ನ ಬಿಡ್ತೀನಿ. ನನ್ನತ್ರ ಬ್ಯಾಂಕ್ ಬ್ಯಾಲೆನ್ಸ್ ಇರಲಿಲ್ಲ. ನಾಯಿ ಇರಲಿಲ್ಲ ಅನ್ನೋದೆಲ್ಲ ಊಹಾಪೋಹ. ಇಂಥ ಸುದ್ದಿಗಳಿಂದಲೇ ನನ್ಗೆ ಬಿಗ್​ಬಾಸ್​ಗೆ ಹೋಗುವ ಆಫರ್ ಸಿಕ್ತು.
5 ಸಾವಿರ ನ್ಯೂಸ್ ​ಚಾನಲ್​ನಲ್ಲಿ ನನ್ನ ಬಗ್ಗೆ ಒಳ್ಳೆಯದು ಬಂದಾಗ ಬಿಗ್​ ಬಾಸ್​ನವರು ಕರೆಯಲಿಲ್ಲ. ED ರೇಡ್ ಆಗಿದ್ದಕ್ಕೆ, ಕೆಟ್ಟ ಸುದ್ದಿಗಳು ಪ್ರಸಾರ ಆಗಿದ್ದರಿಂದಲೇ ನನ್ಗೆ ಬಿಗ್ ​ಬಾಸ್ ಆಫರ್ ಸಿಕ್ತು, ನನ್ಗೆ ಒಳ್ಳೆಯದಾಯ್ತು. ಕೆಟ್ಟದಾಗಿ ಮಾತಾಡೋರು & ಕೆಟ್ಟ ಕಾಮೆಂಟ್ಸ್​ಗಳನ್ನ ಮಾಡೋರಿಗೆ ನಾನು ಥ್ಯಾಂಕ್ಸ್ ಹೇಳ್ತೀನಿ. ಅವರಿಂದಲೇ ನಾನು ಉದ್ಧಾರ ಆಗ್ತಿದ್ದೀನಿ, ಇನ್ನು ನನ್ನ ಬೈರಿ.. ಬೈರಿ ಅಂತ ಹೇಳ್ತೀನಿ ಎಂದಿದ್ದಾರೆ.