/newsfirstlive-kannada/media/media_files/2025/10/18/bigg-boss-dog-satish-2025-10-18-07-08-43.png)
Photograph: (Colors kannada)
ಮಿಡ್​ವೀಕ್ ಎಲಿಮಿನೇಷನ್​ನಿಂದ ರಾತ್ರೋರಾತ್ರಿ ಬಿಗ್​ಬಾಸ್​ನಿಂದ ಹೊರ ಬಂದ ಸತೀಶ್ ಕಡಬಮ್ ನ್ಯೂಸ್​ಫಸ್ಟ್ ಸಂದರ್ಶನ ನೀಡಿದ್ದಾರೆ. ಈ ವೇಳೆ ಬಿಗ್​ ಮನೆಯಲ್ಲಿರುವ ಸ್ಪರ್ಧಿಗಳು ಯಾರ್ಯಾರು ? ಹೆಂಗೆಂಗೆ ಎಂಬ ಪ್ರಶ್ನೆಗೆ ಸಖತ್ ಇಂಟ್ರೆಸ್ಟಿಂಗ್ ಆಗಿ ಉತ್ತರಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/13/jhanavi-2025-10-13-11-35-40.png)
- ಕರಿ ಬಸಪ್ಪ - ತುಂಬಾ ಟ್ಯಾಲೆಂಟೆಡ್ ಆದ್ರೆ ಪಾಪ ಅವರಿಗೆ ಏನೂ ಅವಕಾಶ ಸಿಗಲಿಲ್ಲ.
- ಅಮಿತ್ - ತುಂಬಾ ಟ್ಯಾಲೆಂಟೆಡ್ ಆದ್ರೆ 1% ಕೂಡ ಬಿಗ್​ಬಾಸ್​ ಮನೆಯಲ್ಲಿ ಅದನ್ನ ಯೂಸ್ ಮಾಡ್ಕೊಳ್ಲಿಲ್ಲ.
- ಕಾಕ್ರೋಚ್ ಸುಧಿ - ತುಂಬಾ ಟ್ಯಾಲೆಂಟೆಡ್, ಅವ್ರು ಫೈನಲಿಸ್ಟ್ ಆಗಿ ಬರ್ತಾರೆ ಅಂದ್ಕೊಂಡಿದ್ದೀನಿ.
- ಕಾವ್ಯಾ - ಗಿಲ್ಲಿ ಜೊತೆ ಇದ್ದಾಗ ಸೈಲೆಂಟ್ ಆಗಿದ್ರು, ಈಗ ಚುರುಕಾಗಿದ್ದಾರೆ.
- ಗಿಲ್ಲಿ - ಬಿಗ್​ಬಾಸ್​ನ ವಿನ್ನರ್ ಆಗುವಂತ ಸ್ಪರ್ಧಿ.
- ಜಾಹ್ನವಿ - ಸೆಂಟ್ರಲ್ಲೇ ಆಚೆ ಬರ್ತಾರೆ ಅಂದ್ಕೊಂಡಿದ್ದೀನಿ.
- ಅಶ್ವಿನಿ ಗೌಡ - ಕಾಂಟ್ರವರ್ಸಿ ಮಾಡ್ಕೊಂಡು ಆಚೆ ಬರ್ತಾರೆ ಅನ್ಸುತ್ತೆ!
- ಅಶ್ವಿನಿ S.N - ಬರೀ ಜಗಳ, ಜಗಳ. ಅವರಿಗೆ ಏನೂ ಟ್ಯಾಲೆಂಟ್ ಇಲ್ಲ. ಮನೆಯ ನೆಮ್ಮದಿ ಹಾಳು ಮಾಡ್ತಿದ್ದಾರೆ.
- ಅಭಿಷೇಕ್ - ನಾನೇ ಕಿಲಾಡಿ ಅಂತ ಫ್ಲರ್ಟ್​ ಮಾಡ್ಕೊಂಡು ಕೆಟ್ಟ ಹೆಸರು ತಗೊಂಡಿದ್ದಾರೆ.
- ಧನುಷ್ ಗೌಡ - ತುಂಬಾ ಆ್ಯಟಿಟ್ಯೂಡ್, ಅಷ್ಟೊಂದು ದುರಹಂಕಾರ ನಾನು ನೋಡೇ ಇಲ್ಲ !
- ಧ್ರುವಂತ್ - ಸುಮ್ನೆ ರೇಗಿಸೋಕೆ ಮಿಸ್ಟರ್ ಪರ್ಫೆಕ್ಟ್ ಅಂತೀವಿ. ಆದ್ರೆ ಅವರು ಒಂದು ಕೆಲಸವನ್ನೂ ಮಾಡಲ್ಲ.
- ಮಲ್ಲಮ್ಮ - ತುಂಬಾ ಇನೋಸೆಂಟ್, ಅವರಿಗೆ ಏನೂ ಕಲ್ಮಷವೇ ಇಲ್ಲ. ಎಲ್ಲರನ್ನೂ ಸಮನಾಗಿಯೇ ನೋಡ್ತಾರೆ.
- ರಕ್ಷಿತಾ ಶೆಟ್ಟಿ - ತುಂಬಾ ಬ್ರಿಲಿಯಂಟ್, ಚೆನ್ನಾಗಿ ಜನರನ್ನ ಹೊಂದುತಾಳೆ, ಸಖತ್ ಎಂಟರ್​ಟೈನ್ಮೆಂಟ್. ಅವಳು ಕೂಡ ಫೈನಲ್​ಗೆ ಬರ್ಬೋದು.
- ಮಂಜು ಭಾಷಿಣಿ - ಶಕುನಿ. ಎಲ್ಲಾ ಕಡೆ ಪಿನ್ ಹೊಡಿತಾರೆ!
- ರಾಶಿಕಾ ಶೆಟ್ಟಿ - ಟ್ಯಾಲೆಂಟ್, ಚೆನ್ನಾಗಿ ಗೇಮ್ಸ್ ಆಡ್ತಾರೆ, ಆದ್ರೆ ಮುಂಗೋಪಿ.
- ಮಾಳು - ಟ್ಯಾಲೆಂಟ್ ಇದೆ ಆದ್ರೆ ಅವ್ರು ತುಂಬಾ ಸೈಲೆಂಟ್.
- ಸ್ಪಂದನಾ - ಎಲ್ಲಾ ವಿಷಯದಲ್ಲೂ ಒಳ್ಳೆಯವಳು. ಆದ್ರೆ ಆಟದಲ್ಲಿ ವೀಕ್.
- ಚಂದ್ರಪ್ರಭ - ತುಂಬಾ ಒಳ್ಳೆಯವರು. ನಾನು ಇವತ್ತಿಗೂ ಅವರನ್ನ ಬಿಟ್ಕೊಡೋದಿಲ್ಲ. ಅವರನ್ನ ಕಂಡ್ರೆ ನನ್ಗೆ ತುಂಬಾ ಇಷ್ಟ.
ಬಿಗ್​ಬಾಸ್​ ವ್ಯಕ್ತಿತ್ವದ ಆಟ. ನಮ್ಗೆ ಆಚೆ ಕಾಣಿಸೋದೇ ಬೇರೆ. ಮನೆ ಒಳಗಡೆ ಇರೋದೇ ಬೇರೆ. ಯಾರನ್ನೂ ಸುಲಭಕ್ಕೆ ಜಡ್ಜ್ ಮಾಡೋಕಾಗಲ್ಲ. ಬದಲಿಗೆ ಬಿಗ್​ಬಾಸ್​ನ ನೋಡಿ ಮನರಂಜನೆಯನ್ನಷ್ಟೇ ಪಡಿಬೇಕು. ಇನ್ನು ಇದಾಗಿತ್ತು ಬಿಗ್​ಬಾಸ್​ ಸ್ಪರ್ಧಿಗಳೊಂದಿಗೆ ಸತತ 3 ವಾರಗಳಿದ್ದ ಸತೀಶ್ ಕಡಬಮ್ ಅವರ ಅಭಿಪ್ರಾಯ.