/newsfirstlive-kannada/media/media_files/2025/10/26/tanvi-balaraj-mother-9-2025-10-26-20-50-29.jpg)
/newsfirstlive-kannada/media/media_files/2025/10/26/tanvi-balaraj-mother-1-2025-10-26-20-50-52.jpg)
ಅಂತರಪಟ ಧಾರಾವಾಹಿ ನಾಯಕಿ ಆಗಿ ಜನಪ್ರಿಯತೆ ಪಡೆದ ನಟಿ ತನ್ವಿ ಬಾಲರಾಜ್. ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ಛಾಪು ಮೂಡಿಸ್ತಿರೋ ನಟಿ. ಮಗಳು ನಟಿ ಆಗಿ ಮಿಂಚ್ತಿದ್ರೂ ತಾಯಿ ಇವತ್ತಿಗೂ ಹೂವು ಮಾರಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.
/newsfirstlive-kannada/media/media_files/2025/10/26/tanvi-balaraj-mother-2025-10-26-20-51-15.jpg)
ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು ತನ್ವಿ ಬಾಲರಾಜ್. ತಂದೆ ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಡ್ತಾರೆ. ತಾಯಿ ಹೂವು ಮಾರಿ ಬದುಕು ಕಟ್ಟಿಕೊಂಡವ್ರು. ನಟಿಯಾಗುವ ಮುನ್ನ ಬ್ಯಾಕ್ ಸ್ಟೇಜ್ ಡ್ಯಾನ್ಸರ್ ಆಗಿ ತನ್ವಿ ಬಾಲರಾಜ್ ಕೆಲಸ ಮಾಡುತ್ತಿದ್ದರು.
/newsfirstlive-kannada/media/media_files/2025/10/26/tanvi-balaraj-mother-5-2025-10-26-20-51-34.jpg)
ನಾಯಕಿಯಾಗುವುದರ ಹಿಂದೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸದ್ಯ ಕಿರುತೆರೆಯ ಕೆಲಸ ಮಾಡಿ ಸಂಪಾದನೆ ಮಾಡ್ತಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ಸ್ವಲ್ಪ ಫೇಮಸ್ ಆದ್ರೂ ಸಾಕು ಮೂಲ ಕಾಯಕವನ್ನೇ ಮರೆತು ಬಿಡ್ತಾರೆ. ತನ್ವಿ ಅಮ್ಮನ ವಿಚಾರದಲ್ಲಿ ಹಾಗಲ್ಲ. ಈಗ್ಲೂ ಮನೆ ಮನೆಗೂ ಹೋಗಿ ಹೂವು ಮಾರ್ತಾರೆ.
/newsfirstlive-kannada/media/media_files/2025/10/26/tanvi-balaraj-mother-6-2025-10-26-20-52-03.jpg)
ತನ್ವಿ ಚಿಕ್ಕ ಮಗು ಇರ್ಬೇಕಾದ್ರೇ ಕುಟುಂಬದ ಕಲಹಕ್ಕೆ ಆತ್ಮಹತ್ಯೆ ಮಾಡ್ಕೊಬೇಕು ಅಂತ ಹೋಗಿದ್ರಂತೆ ತಾಯಿ. ಮಗು ಮುಖ ನೋಡಿ ಬದುಕುಬೇಕು ಅಂತ ನಿರ್ಧಾರ ಮಾಡಿ, ಹೂವು ಮಾರೋ ಕಾಯಕ ಶುರು ಮಾಡ್ತಾರೆ. ಈ ಕುರಿತು ವರ್ಷದ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ತನ್ವಿ ಮಾತ್ನಾಡಿ ಭಾವುಕರಾಗಿದ್ದಾರೆ.
/newsfirstlive-kannada/media/media_files/2025/10/26/tanvi-balaraj-mother-2-2025-10-26-20-52-21.jpg)
ತಲೆ ಮೇಲೆ ಹೂವಿನ ಬುಟ್ಟಿ ಹೊತ್ತು ಮನೆ ಮನೆಗೂ ಹೋಗಿ ಹೂವು ಮಾರುತ್ತಿರೋ ವಿಶ್ವಲ್ ನಮಗೆ ಲಭ್ಯವಾಗಿದೆ. ಮಂಡ್ಯದ ಚಿಕ್ಕೆನದೊಡ್ಡಿ ಹಳ್ಳಿಯಲ್ಲಿ ಈ ದೃಶ್ಯ ಕಂಡು ಬಂದಿದ್ದು. ಇವ್ರ ಸ್ವಾಭಿಮಾನದ ಬದುಕು ಅದೇಷ್ಟೋ ಜನಕ್ಕೆ ಸ್ಫೂರ್ತಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us