/newsfirstlive-kannada/media/media_files/2025/10/14/viashnavi-gowda-2025-10-14-12-52-37.jpg)
/newsfirstlive-kannada/media/media_files/2025/10/14/viashnavi-gowda-6-2025-10-14-12-52-49.jpg)
ವೈಷ್ಣವಿ, ಪತಿ ಶ್ರೇಯಸ್ಸಿಗೆ ವ್ರತ, ಪೂಜೆ ಮಾಡಿ ಗಮನ ಸೇಳಿದಿದ್ದಾರೆ. ಹೌದು, ಕೆಲ ತಿಂಗಳ ಹಿಂದೆಯಷ್ಟೇ ಉತ್ತರ ಭಾರತ ಮೂಲದ ಅನುಕೂಲ್ ಮಿಶ್ರಾ ಅವರನ್ನ ವೈಷ್ಣವಿ ವರಿಸಿದ್ದರು.
/newsfirstlive-kannada/media/media_files/2025/10/14/viashnavi-gowda-2-2025-10-14-12-53-16.jpg)
ಇಲ್ಲಿ ಭೀಮನ ಅಮಾವಸ್ಯೆಗೆ ಹೆಣ್ಮಕ್ಕಳು ಪತಿ ಪಾದ ಪೂಜೆ ಮಾಡುವಂತೆ ಉತ್ತರ ಭಾರತದಲ್ಲಿ ಕರ್ವಾ ಚೌತ್ ಆಚರಿಸುತ್ತಾರೆ. ಅದೇ ರೀತಿ ವೈಷ್ಣವಿ ಅವರು ತಮ್ಮ ಮೊದಲ ಕರ್ವಾ ಚೌತ್ ಆಚರಿಸಿದ್ದಾರೆ.
/newsfirstlive-kannada/media/media_files/2025/10/14/viashnavi-gowda-7-2025-10-14-12-53-34.jpg)
ವೈಷ್ಣವಿ, ಹನಿ ನೀರು ಕುಡಿಯದೆ ಇಡೀ ದಿನ ಉಪವಾಸ ಮಾಡಿ, ಸಂಜೆ 6 ಗಂಟೆ ಸುಮಾರಿಗೆ ವ್ರತ ಮಾಡಿದ ಎಲ್ಲಾ ಹೆಣ್ಮಕ್ಕಳು ಸೇರಿ ಶ್ರದ್ಧೆಯಿಂದ ಪೂಜೆ ಮಾಡಿದ್ದು, ಚಂದ್ರನ ದರ್ಶನದವರೆಗೂ ಕಾದು, ಚಂದ್ರನಿಗೆ ಪೂಜೆ ಸಲ್ಲಿಸಿ ನಂತರ ಜಾಳಿಗೆ ಮೂಲಕ ಪತಿಯ ಮೊಗವನ್ನ ನೋಡಿದ್ದಾರೆ. ಪತಿ ಅನುಕೂಲ್ ಮಿಶ್ರಾ ನೀರು ಕುಡಿಸಿ, ಸಿಹಿ ತಿನ್ನಿಸಿದ್ದಾರೆ.
/newsfirstlive-kannada/media/media_files/2025/10/14/viashnavi-gowda-5-2025-10-14-12-53-51.jpg)
ಕೆಂಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣ್ತಿದ್ದ ನಟಿ, ನನ್ನ ಮೊದಲ ಕರ್ವಾ ಚೌತ್, ಪ್ರೀತಿ, ನಂಬಿಕೆಯನ್ನು ಆಚರಿಸುತ್ತಿದ್ದೇನೆ ಎಂದು ಬರೆದು ಫೋಟೋಸ್ ಪೋಸ್ಟ್ ಮಾಡಿದ್ದರು.
/newsfirstlive-kannada/media/media_files/2025/10/14/viashnavi-gowda-3-2025-10-14-12-54-17.jpg)
ಅಂದ್ಹಾಗೆ, ಪತಿ ಅನಕೂಲ ಕುಟುಂಬದ ಪದ್ಧತಿ ಪ್ರಕಾರ ತಾಳಿ ಧರಿಸಲ್ಲ ವೈಷ್ಣವಿ. ತಾಳಿ ಎಲ್ಲಿ ಎಂದು ಪ್ರಶ್ನಿಸಿದ ಜನರಿಗೆ ಈ ಹಿಂದೆ ಸ್ಪಷ್ಟನೆ ಕೊಟ್ಟಿದ್ದರು. ಅನಕೂಲ್ ಅವರ ಸಂಪ್ರದಾಯದ ಪ್ರಕಾರ, ವಿವಾಹಿತ ಹೆಣ್ಮಗಳು ಸಿಂಧೂರ ಧರಿಸಬೇಕು.
/newsfirstlive-kannada/media/media_files/2025/10/14/viashnavi-gowda-1-2025-10-14-12-54-43.jpg)
ಕಾಲುಂಗರ ಹಾಕಬೇಕು. ತಾಳಿ ಹಾಕುವಂತಿಲ್ಲ. ಇದು ವೈಷ್ಣವಿ ಪತಿ ಮನೆಯ ಶಾಸ್ತ್ರ ಸಂಪ್ರದಾಯ. ಒಟ್ನಲ್ಲಿ ವೈಷ್ಣವಿ ಅನುಕೂಲ್ ಮಿಶ್ರಾ ಜೋಡಿ ಸದಾ ಖುಷಿಯಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.