/newsfirstlive-kannada/media/media_files/2025/09/13/anu_1-2025-09-13-23-22-07.jpg)
ಆ್ಯಂಕರ್ ಅನುಶ್ರೀ.. ಇಷ್ಟು ದಿನ ಸಿಂಗಲ್ ಆಗಿದ್ದ ನಿರೂಪಕಿ ಗೆಳೆಯ ರೋಷನ್ ಜೊತೆ ಸಪ್ತಪದಿ ತುಳಿದು ನವ ಬದುಕಿಗೆ ಅಡಿಯಿಟ್ಟಿದ್ದರು. ಸ್ಯಾಂಡಲ್ವುಡ್ ಸ್ಟಾರ್ಸ್ ಸೇರಿದಂತೆ ಕಿರುತೆರೆಯ ನಟ ನಟಿಯರು ಅನುಶ್ರೀ ಮದುವೆ ಬಂದು ಹಾರೈಸಿದರು. ಈಗ ಜೀ ಕನ್ನಡದ ಮಹಾ ಸಂಗಮದಲ್ಲೂ ಅನುಶ್ರೀಗೆ ಅಭಿಮಾನದ ಪುಷ್ಪಾಂಜಲಿ ಸಲ್ಲಿಸಲಾಗಿದೆ.
ಡಿಕೆಡಿ ಹಳೆ ಸ್ಪರ್ಧಿಗಳು ಶ್ರೀಗಂಧದ ಹಾಡಿಗೆ ಹೆಜ್ಜೆ ಹಾಕೋ ಮೂಲಕ ಅನುಶ್ರೀಗೆ ಅಭಿಮಾನದ ಪುಷ್ಪಾಂಜಲಿಯನ್ನೆ ಸಲ್ಲಿಸಿದ್ದಾರೆ. ಇಂಟ್ರಸ್ಟಿಂಗ್ ಏನಂದ್ರೆ ತರುಣ್ ಮತ್ತು ಶರಣ್ ಇಬ್ಬರೂ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದು ಕಂಡು ಅನುಶ್ರೀ ಕೂಡ ಚಕಿತಗೊಂಡಿದ್ದರು. ನವ ವಧವಿಗೆ ಜೀ ಕುಟುಂಬ ಶುಭಾ ಹಾರೈಸಿದೆ. ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಲಾಡಲಾಗಿದೆ.
ಆಂಕರ್ ಅನುಶ್ರೀ ಅವರು 2025ರ ಆಗಸ್ಟ್ 28ರಂದು ಕೊಡಗು ಮೂಲದ ಉದ್ಯಮಿ ರೋಷನ್ ರಾಮಮೂರ್ತಿ ಅವರನ್ನು ಬೆಂಗಳೂರಿನಲ್ಲಿ ವಿವಾಹವಾದರು. ಅವರ ವಿವಾಹ ಸಮಾರಂಭವು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸರಳವಾಗಿ ನಡೆಯಿತು. ಇದರಲ್ಲಿ ಶಿವರಾಜ್‌ಕುಮಾರ್, ರಚಿತಾ ರಾಮ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ತಮ್ಮ ಮದುವೆ ಮುಗಿದ ಬೆನ್ನಲ್ಲೇ ಅನುಶ್ರೀ ಆ್ಯಂಕರಿಂಗ್ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ