/newsfirstlive-kannada/media/media_files/2025/08/04/anchor-anushree2-2025-08-04-13-52-40.jpg)
ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಪ್ರತಿ ಬಾರಿ ಅನುಶ್ರೀ ಮದುವೆ ಪ್ರಸ್ತಾಪ ಆದಾಗ ಮುಂದಿನ ವರ್ಷ ಆಗ್ತೀನಿ, ಖಂಡಿತ ಈ ವರ್ಷ ಪಕ್ಕಾ ಆಗ್ತೀನಿ ಅಂತಿದ್ರು. ಅಭಿಮಾನಿಗಳು ಅಕ್ಕಾ ಯಾವಾಗ ಹಾಕ್ಸುತೀರಾ ಮದುವೆ ಊಟ ಅಂತ ಪ್ರಶ್ನೆ ಮಾಡ್ತಿದಿದ್ರು. ಅಂತೂ ಅನುಗೆ ಕಂಕಣ ಕೂಡಿ ಬಂದಿದೆ.
ಇದನ್ನೂ ಓದಿ: ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ.. ಸುದೀಪ್ ಹೊಸ ಲುಕ್ನ ಸಿಕ್ರೇಟ್ ಏನು..?
ಇದೇ ಆಗಸ್ಟ್ 28 ರಂದು ಅನುಶ್ರೀ ಅವ್ರು ರಾಜ್ ಕುಟುಂಬದ ಆಪ್ತರಾದ ಐಟಿ ಉದ್ದೋಗಿ ರೋಷನ್ ಎಂಬುವವರ ಕೈ ಹಿಡಿಯಲಿದ್ದಾರೆ. ಈ ಬಗ್ಗೆ ಇನ್ನು ಅನುಶ್ರೀ ಅವರು ಅಧಿಕೃತವಾಗಿ ರಿವೀಲ್ ಮಾಡಿಲ್ಲ. ಆದ್ರೇ ಮದುವೆ ಫಿಕ್ಸ್ ಆಗಿರೋದು ಪಕ್ಕಾ ಎನ್ನುವುದು ತರುಣ್ ಅವರ ಮಾತಿನ ಶೈಲಿಯಿಂದ ಗೊತ್ತಾಗ್ತಿದೆ. ಇಷ್ಟು ದಿನ ಅನುಶ್ರೀ ಸೋನಲ್ ವಿಚಾರ ಇಟ್ಕೊಂಡು ತರುಣ್ ಅವರ ಕಾಲ್ ಎಳಿತಿದ್ರು.
ಈಗ ಮಹಾನಟಿ ವೇದಿಕೆಯಲ್ಲಿ ತರುಣ್ ಅನುಶ್ರೀ ಅವರನ್ನ ರೇಗಿಸ್ತಿದ್ದಾರೆ. ಪದೇ ಪದೇ ಮದುವೆ ವಿಚಾರ ಪ್ರಸ್ತಾಪಿಸ್ತಿದ್ದಾರೆ. ಅನುಶ್ರೀ ಲವ್ ಪ್ರಪೋಸ್ ಮಾಡಿದ್ರೇ ಹೆಂಗಿರುತ್ತೆ? ಆ ಮೂಮೆಂಟ್ ಮಹಾನಟಿ ವೇದಿಕೆ ಮೇಲೆ ಕ್ರಿಯೇಟ್ ಮಾಡಲಾಗಿದೆ. ಇದುವರೆಗೂ ನನ್ನ ಜೀವನದಲ್ಲಿ ಅರ್ಧ ಚಂದ್ರ ಇತ್ತು, ಪೂರ್ಣ ಚಂದ್ರನಾಗಿ ನೀ ಬೇಗ ಬಾ ಎಂದು ಪ್ರೀತಿನ ಹೇಳಿ ಬಿಟ್ಟಿದ್ದಾರೆ ಅನುಶ್ರೀ. ಅನುಶ್ರೀ ಲೈಫ್ನ ಮತ್ತೊಂದು ಹೊಸ ಅಧ್ಯಾಯ ತೆರೆದುಕೊಳ್ತಿರೋದು ಸ್ನೇಹಿತರಿಗೆ ಖುಷಿನೋ ಖುಷಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ