/newsfirstlive-kannada/media/media_files/2025/10/25/gilli-vs-ashwini-2025-10-25-16-46-13.png)
Photograph: (colors kannada)
ಕೆಲಸದ ವಿಚಾರವಾಗಿ ಗಲಾಟೆ ಮಾಡುವಾಗ ಅಶ್ವಿನಿ ಗೌಡ ಕಾವ್ಯಾಗೆ ನೀನು ಗಿಲ್ಲಿಯ ಬಕೆಟ್ ಎಂದು ನಿಂದಿಸಿದ್ದರು. ಈ ವಿಚಾರವಾಗಿ ನಿನ್ನೆಯ ಸಂಚಿಕೆಯಲ್ಲಿ ಯಾವ ಅರ್ಥದಲ್ಲಿ ಕಾವ್ಯಾ ನನ್ಗೆ ಬಕೆಟ್ ಹಿಡಿತಾಳೆ ಅಂತ ಹೇಳಿದ್ರಿ ? ಯಾಕೆ ಆ ಮಾತನ್ನ ಹೇಳಿದ್ರಿ ನೀವು ? ಎಂದು ಗಿಲ್ಲಿ ಡೈರೆಕ್ಟಾಗಿ ಅಶ್ವಿನಿ ಗೌಡರನ್ನ ಪ್ರಶ್ನಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/25/gilli-nata-2025-10-25-16-46-59.png)
ನಾನು ಕ್ಲ್ಯಾರಿಟಿ ಕೊಟ್ಮೇಲೂ ನೀನ್ಯಾಕೆ ಮಾತಾಡಿದ್ಯಾ? ನಾನು ನನ್ನ ಪಾಡಿಗೆ ಚಂದ್ರಣ್ಣನ ಜೊತೆ ಮಾತಾಡ್ತಿದ್ದೀನಿ. ಗಿಲ್ಲಿ ವಿಚಾರವನ್ನ ನಾನು ಮಾತಾಡ್ತಿಲ್ಲ ಅಂತ ಹೇಳುದ್ರೂ ಕಾವ್ಯಾ ಯಾಕೆ ಮಾತಾಡ್ಬೇಕು ಎಂದು ಅಶ್ವಿನಿ ಗೌಡ ಕೆಂಡಕಾರಿದ್ದಾರೆ.
/filters:format(webp)/newsfirstlive-kannada/media/media_files/2025/10/25/bigg-boss-kavya-2025-10-25-16-48-22.png)
ನಿಮ್ಮಿಬ್ಬರ ಗಲಾಟೆಯಲ್ಲಿ ನನ್ನ ಟಾಪಿಕ್ ಯಾಕೆ? ಗಿಲ್ಲಿಗೆ ನೀನು ಬಕೆಟ್ ಹಿಡಿತೀಯಾ ಅಂತ ಹೇಳಿದ್ಯಾಕೆ ? ಎಂದು ಗಿಲ್ಲಿ ಕೇಳಿದ್ದು, ಯಾರದ್ದೇ ವಿಚಾರ ನಡೆಯುತ್ತಿದ್ರು ನೀವು ಮಧ್ಯಕ್ಕೆ ಹೋಗ್ತೀರಾ, ಹಾಗಂತ ನೀವು ಎಲ್ರಿಗೂ ಬಕೆಟ್ ಹಿಡಿತಿದ್ದೀರಾ ? ಎಂದು ಅಶ್ವಿನಿ ಗೌಡಗೆ ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ.
ಇನ್ನು ಎಲ್ಲರ ಪರವಾಗಿ ನನ್ಗೆ ನೋವಾಯ್ತು. ಆ ವಿಚಾರಕ್ಕೆ ನಾನು ಸ್ಟ್ಯಾಂಡ್ ತೊಗೊಂಡು ರಘು ಜೊತೆ ಗಲಾಟೆ ಮಾಡ್ದೆ ಎಂದ ಅಶ್ವಿನಿಗೆ ನಿಮ್ಮ ರೀತಿಯೇ ಕಾವ್ಯಾ ನನ್ನ ವಿಚಾರಕ್ಕೆ ಸ್ಟ್ಯಾಂಡ್ ತೆಗೆದುಕೊಂಡಿದ್ದಾರೆ ಸಿಂಪಲ್ ಎಂದು ವಾದಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/25/bigg-boss-gilli-2025-10-25-16-47-29.png)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us