Advertisment

ತ್ರಿನಯನಿ ಖ್ಯಾತಿಯ ಕನ್ನಡದ ನಟಿ ಆಶಿಕಾ ಹಿಂದಿ ಭಾಷೆಗೆ ಅದ್ಧೂರಿ ಎಂಟ್ರಿ..!

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿನಯನಿ' ಧಾರವಾಹಿಯಲ್ಲಿ ಕನ್ನಡದ ನಟಿ ಆಶಿಕಾ ಪಡುಕೋಣೆ ನಟನೆ ಮೂಲಕ ಎಲ್ಲಾರ ಮನೆ ಮಾತಾಗಿದ್ದಾರೆ. ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ ಕನ್ನಡತಿ ಆಶಿಕಾ ಪಡುಕೋಣೆಗೆ ಮತ್ತೊಂದು ಅವಕಾಶ ಒಲಿದು ಬಂದಿದೆ.

author-image
Ganesh Kerekuli
ashika
Advertisment

ತ್ರಿನಯನಿ ಧಾರಾವಾಹಿಯಲ್ಲಿ ನಾಯಕಿ ನಯನಿ ಪಾತ್ರದಲ್ಲಿ ಕನ್ನಡತಿ ಆಶಿಕಾ ಪಡುಕೋಣೆ ನಟಿಸಿ ಜನರನ್ನ ಮೋಡಿ ಮಾಡುತ್ತಿದ್ದಾರೆ. ಉಡುಪಿ ಮೂಲದ ಆಶಿಕಾ ಹುಟ್ಟಿದ್ದು ಬೆಳದಿದ್ದು ಎಲ್ಲಾ ಕರ್ನಾಟಕದಲ್ಲೇ. ಇವರ ಕುಟುಂಬ ಈಗಲೂ ಉಡುಪಿಯಲ್ಲಿದೆ. ಇಂಜಿನಿಯರ್ ಓದಿರೋ ಆಶಿಕಾ ಕಾಲೇಜು ದಿನಗಳಲ್ಲೇ ಅಭಿನಯದ ಕುರಿತು ಒಲವು ಹೊಂದಿದ್ರು. ಅವರ ಮೊದಲ ಧಾರಾವಾಹಿ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ 'ತ್ರಿವೇಣಿ ಸಂಗಮ'. ನಮ್ಮನೆ ಯುವರಾಣಿ ಖ್ಯಾತಿಯ ನಟ ದೀಪಕ್​ ಗೌಡ ಹಾಗೂ ಆಶಿಕಾ ಜೋಡಿಯಾಗಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ರು. 

Advertisment

ashika 1

ನಂತರ ಆಶಿಕಾಗೆ ತೆಲುಗು ಇಂಡಸ್ಟ್ರಿ ಕೈಬೀಸಿ ಕರೆಯಿತು. ಸ್ಟಾರ್​ ಮಾ ವಾಹಿನಿಯ 'ರಾಜಕುಮಾರಿ' ಧಾರಾವಾಹಿಯ ಮೂಲಕ ತೆಲುಗು ಕಡೆ ಮುಖ ಮಾಡಿದ ನಟಿ, ಹಿಂದುರಿಗಿ ನೋಡಲೇ ಇಲ್ಲ. ಕನ್ನಡದಲ್ಲಿ ಬೆರಳಣಿಕೆಷ್ಟು ಧಾರಾವಾಹಿಗಳನ್ನ ಮಾಡಿರೋ ನಟಿ ಹೆಚ್ಚು ತೆಲುಗಿನಲ್ಲೇ ಶಾಶ್ವತಾವಾಗಿ ನೆಲೆ ಉರಿದ್ರು. ಮುಂದೆ ತೆಲುಗಿನ ತ್ರಿನಯಿನಿ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಈ ಧಾರಾವಾಹಿ ಕನ್ನಡ, ತಮಿಳು ಭಾಷೆಗೆ ಡಬ್ ಕೂಡ ಆಯ್ತು. ಈ ಮೂಲಕ ಮತ್ತಷ್ಟು ವೀಕ್ಷಕರನ್ನ ಸಂಪಾದಿಸಿದ್ರು ನಟಿ ಆಶಿಕಾ ಪಡುಕೋಣೆ. 

ಸದ್ಯ ಆಶಿಕಾ ಹಿಂದಿ ಭಾಷೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್​ ಪ್ಲಸ್​ ವಾಹಿನಿಯಲ್ಲಿ ಶಹಜಾದಿ ಹೈ ತೂ ದಿಲ್​ ಕೀ ಧಾರಾವಾಹಿಗೆ ನಾಯಕಿ ಆಗಿ ಹೊಸ ಜರ್ನಿ ಶುರುಮಾಡಿದ್ದಾರೆ ನಟಿ. ಇದು ಕನ್ನಡದ ಶಾರದೆ ಧಾರಾವಾಹಿ ಕಥೆ ಹೊಂದಿದ್ದು, ಈ ಮೂಲಕ ಆಶಿಕಾ ಅಧಿಕೃತವಾಗಿ ಹಿಂದಿ ಕಿರುತೆರೆ ಪ್ರವೇಶ ಮಾಡಿದ್ದಾರೆ.

ತಮ್ಮ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆದ ಆಶಿಕಾ ಪಡುಕೋಣೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ಛಾಪು ಮೂಡಿಸಿ, ಸದ್ಯ ಹಿಂದಿ ಭಾಷೆ ಮೂಲಕ ದೇಶದ ಮನೆ ಮಾತಾಗೋ ಪ್ರಯತ್ನದಲ್ಲಿದ್ದಾರೆ. ನಮ್ಮ ಕನ್ನಡತಿ ಪರಭಾಷೆಯಲ್ಲಿ ಮಿಂಚ್ತಿರೋದು ನಿಜಕ್ಕೂ ಹೆಮ್ಮೆಯ ವಿಚಾರ. 

Advertisment

ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

zee kannada zee telugu ashika padukone trinayani hindi serial
Advertisment
Advertisment
Advertisment