/newsfirstlive-kannada/media/media_files/2025/10/29/ashwini-and-jahnvi-2-2025-10-29-16-20-50.jpg)
ಅಶ್ವಿನಿ ಮತ್ತು ಜಾಹ್ನವಿ ಮುನಿಸು ಕೇವಲ ನಾಟಕನಾ? ಅವರಿಬ್ಬರು ಕಂಟೆಂಟ್‌ಗೋಸ್ಕರ ಮಾತು ಬಿಟ್ಟಿದ್ದಾರಾ? ಬಿಗ್‌ಬಾಸ್ ಆಟದಲ್ಲಿ ಯಾವಾಗ್ಲೂ ಲೈಮ್‌ಲೈಟ್‌ನಲ್ಲಿರಲು ಹೀಗೇ ಮಾಡಿದ್ರಾ? ಇಷ್ಟೆಲ್ಲಾ ಪ್ರಶ್ನೆ ಯಾರಲ್ಲಿ ಮೂಡಿದೆ ಹೇಳಿ. ಇನ್ಯಾರಿಗೆ ಮೂಡಲು ಸಾಧ್ಯ. ಒನ್ ಅಂಡ್ ಓನ್ಲಿ ಗಿಲ್ಲಿನಟ. ಡೇ ಒನ್‌ನಿಂದಲೂ ಅಶ್ವಿನಿಗೆ ಟಾಂಗ್ ಕೊಡ್ತಿರೋ ಗಿಲ್ಲಿ ನಟ, ನಿನ್ನೆಯ ಎಪಿಸೋಡ್‌ನಲ್ಲಿ ಜಾಹ್ನವಿ ಮತ್ತು ಅಶ್ವಿನಿ ಮುನಿಸಿನ ಟಾಪಿಕ್ ಹೊಸ ರೂಪ ಕೊಟ್ಟು, ಸುದ್ದಿಯಾಗಿದ್ದಾನೆ.
ಇದನ್ನೂ ಓದಿ: BBK12: ರಕ್ಷಿತಾ ಅಸಲಿ ಆಟ ಶುರು.. ರಾಶಿಕಾ ಜೊತೆಗಿನ ಕಿತ್ತಾಟ ಅಶ್ವಿನಿಗೂ ಅರಗಿಸಿಕೊಳ್ಳಲು ಆಗಲಿಲ್ಲ..!
/filters:format(webp)/newsfirstlive-kannada/media/media_files/2025/10/29/ashwini-and-jahnvi-1-2025-10-29-16-25-05.jpg)
ಅಡುಗೆ ಮನೆಯಲ್ಲಿ ಜಾಹ್ನವಿ ಮತ್ತು ಮಲ್ಲಮ್ಮ ಅಡುಗೆ ಮಾಡ್ತಿದ್ರು. ಅದೇ ಸಮಯದಲ್ಲಿ ಅಶ್ವಿನಿ ಮತ್ತು ಕ್ಯಾಪ್ಟನ್ ರಘು ಅಲ್ಲಿಯೇ ಕುಳಿತ್ತಿದ್ದರು. ಆಗ ಎಂಟ್ರಿ ಕೊಟ್ಟ ಗಿಲ್ಲಿ, ಒಂದೊಂದೇ ಬೌನ್ಸರ್ ಹಾಕಿ, ಮುನಿಸಿ ಕಥೆಗೆ, ಹೊಸ ಟ್ವಿಸ್ಟ ಕೊಟ್ಟ. ಅಷ್ಟೇ ಅಲ್ಲ... ಕರ್ನಾಟಕ ಜನತೆಯನ್ನ ಯಾಮಾರಿಸಬೇಡಿ? ಇಬ್ಬರಿಗೂ ಸಲಹೆ ನೀಡಿದ.
ಇದನ್ನೂ ಓದಿ:
/filters:format(webp)/newsfirstlive-kannada/media/media_files/2025/10/29/ashwini-and-jahnvi-2025-10-29-16-25-27.jpg)
ಈ ಮೂವರ ನಡುವೆ ನಡದ ಸಂಭಾಷಣೆಯ ವಿವರ ಇಲ್ಲಿದೆ ಓದಿ..
- ಗಿಲ್ಲಿ: ಟೇಬಲ್ ಕುಟ್ಟಿ ಹೇಳ್ತೀನಿ ನೀವಿಬ್ಬರು ಜಗಳವಾಡಿಲ್ಲ. ’ಇನ್ನೊಂದ್ ಸ್ವಲ್ಪ ಜಾಸ್ತಿ’ ಅಂತಾ ಮಾತನಾಡಿರೋದನ್ನ ಕೇಳಿಸಿಕೊಂಡಿಲ್ವನ್ರೀ..?
- ಜಾಹ್ನವಿ: ನನ್ನ ಆಟಕ್ಕೆ ಕಳಂಕ ಬರ್ತಿದೆ. ಸ್ಟ್ರಾಟಜಿ ಅನ್ನೋ ಥರಾ ಬಿಂಬಿತವಾಗ್ತಿದೆ ಅವರಿಗೆ.
ಗಿಲ್ಲಿ: ಸ್ಟ್ರಾಟಜಿ... ನಾನಾಗಿದ್ರೆ.. ಲೈಫಲ್ಲಿ ಮುಖ ನೋಡ್ತಿರಲಿಲ್ಲ... ಇಲ್ಲಿ ಬಂದ್ ಕುತ್ತಿದ್ದಿದ್ರೆ, ಸೈಡಿಗೆ ಹೋಗಿಬಿಡ್ತಿದ್ದೇ... - ಅಶ್ವಿನಿ: ಅದು ನೀನು...
- ಜಾಹ್ನವಿ: ನಮ್ಮ ಫ್ರೆಂಡ್‌ಶೀಪ್ ರಿಯಲ್ಲು..
- ಗಿಲ್ಲಿ: ಅವರು ಉಳಿಸಿಕೊಳ್ಳಲಿಲ್ಲ ..
- ಅಶ್ವಿನಿ: ಯಾರಿಂದಲೋ ದೂರ ಆಗಿದ್ದೀವಿ ಅಂದಾಗ... ದ್ವೇಷ ಮಾಡಬಾರ್ದು. ಪ್ರೀತಿಯ ಕ್ಷಣಗಳು... ಮರೆಯಲಾರದ ನೆನಪುಗಳು.. ನೆನಪು ಮಾಡಿಕೊಂಡಾಗ ಅವರನ್ನ ಕ್ಷಮಿಸಬೇಕು ಅನಿಸುತ್ತೆ.
- ಜಾಹ್ನವಿ: ಕ್ಷಮಿಸುವಂತಹ ತಪ್ಪು ನಾನೇನು ಮಾಡಿಲ್ಲ. ಫಾರ್ ಯುವರ್ ಕೈಂಡ್ ಇನ್ಫಾರ್ಮೇಶನ್.
- ಅಶ್ವಿನಿ: ಆಮೆ ಮೊಲ ಕಥೆ ತುಂಬಾ ಲೇಟಾಗಿ ಅರ್ಥವಾಯ್ತು..
- ಗಿಲ್ಲಿ: ಯಾಕ್ ತುಂಬಾ ಲೇಟಾಗಿ ಹೇಳ್ದೆ... ಫಸ್ಟೇ ಅಲ್ಲೇ... ಮಲಗೊಂಡಿರಬೇಕಾದ್ರೆ... ಬೆಡ್‌ಶೀಟ್ ಕೆಳಗೆ ಹೇಳ್ಬೇಕು ತಾನೇ... ಪಿಸು ಧ್ವನಿಯಲಿ.
- ಅಶ್ವಿನಿ: ಸ್ಟಾರ್ಟಿಂಗ್‌ನಲ್ಲಿ...
- ಜಾಹ್ನವಿ: ಸುಮ್ನೆ ಅಂತೂ ಬಂದಿಲ್ವಲ್ಲಾ... ಯಾರನ್ನೋ ಗೆಲ್ಲಿಸಕ್ಕೆ ಬಂದಿಲ್ಲ. ಎಲ್ರೂ ಹೇಳಿದ್ರು..ಗಿಲ್ಲಿ ಅಂಡ್ ಅವರು... ಅವ್ರ ಆಟ ಫಾಸ್ಟಾಗಿದೆ. ನಾವು ಏನೂ ಬಿಟ್ಟುಕೊಟ್ಟಿಲ್ಲ. ರೇಸ್‌ನಲ್ಲಿದ್ದೀವಿ... ಆಮೆ ಥರಾ ಅಂದೇ.. ಅದರಲ್ಲಿ ಏನಿದೆ?
- ಅಶ್ವಿನಿ: ನಾನ್ ಏನ್ ನೋಡಿದ್ದಿನೋ... ಏನ್ ಕೇಳಿದ್ದಿನೋ... ಅದೇ ಸತ್ಯ..
ಇದನ್ನೂ ಓದಿ: ಬಿಗ್‌ಬಾಸ್ ಮನೆಯಿಂದ ಮಲ್ಲಮ್ಮ ಹೊರಗೆ ಬಂದಿರೋದು ನಿಜವೇ? ಸತ್ಯಾಂಶ ಏನು ಗೊತ್ತಾ ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us