/newsfirstlive-kannada/media/media_files/2025/10/13/bigg-boss-mallamma-rakshitha-2025-10-13-17-17-58.png)
Photograph: (colors kannada)
ಭಾನುವಾರದ ಕಿಚ್ಚನ ಪಂಚಾಯ್ತಿಯ ಮುಂಚೆ ಮನೆಯಲ್ಲಿ ಏನೇನಾಯ್ತು ಎಂದು ತೋರಿಸಲಾಯ್ತು. ಊಟದ ಟೇಬಲ್ ಮೇಲೆ ಕುಳಿತು ಮಲ್ಲಮ್ಮ & ರಕ್ಷಿತಾ ಗಂಜಿ ಕುಡಿಯುತ್ತಿದ್ದರು. ಇಂದು ಯಾರು ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗ್ತಾರೋ ಎಂಬ ಆತಂಕದಲ್ಲಿದ್ದ ರಕ್ಷಿತಾ ಯಾರು ಹೋಗ್ತಾರೋ ಅಂತ ಭಯ ಆಗ್ತಿದೆ ಎಂದು ಹೇಳಿದ್ದಾರೆ. ನೀನು ಸೇಫ್ ಆಗಿದ್ಯಲ್ಲ ಬಿಡು, ನೀನು ಬಂದಿರೋದು ಒಬ್ಬಳೇ, ಹೋಗೋದೂ ಒಬ್ಬಳೇ ಇಲ್ಲಿ ಯಾರ ಬಗ್ಗೆಯೂ ಕಾಳಜಿ ತೋರಿಸ್ಬೇಡಿ ಎಂದಿಲ್ವಾ ಸುದೀಪ್ ಸರ್ ಎಂದು ಮಲ್ಲಮ್ಮ ರಕ್ಷಿತಾಗೆ ಸಮಾಧಾನ ಮಾಡಿದ್ರು..
/filters:format(webp)/newsfirstlive-kannada/media/media_files/2025/10/13/rakshitha-mallamma-2025-10-13-17-19-15.png)
ಇಷ್ಟಕ್ಕೆ ಸುಮ್ಮನಾಗದ ರಕ್ಷಿತಾ ನಿಮ್ಗೆ ಕ್ಲೋಸ್ ಆಗಿರುವ ಜನ ಹೋದ್ರೆ ಬೇಜಾರಾಗುತ್ತೆ ಅಲ್ವಾ. ದಿನ ಅವರು ನೋಡೋಕೆ ಸಿಕ್ತಿದ್ರು ಇನ್ಮುಂದೆ ಸಿಗೋದಿಲ್ಲ ಅಂದ್ರೆ ಬೇಜಾರಾಗುತ್ತೆ ಅಲ್ವಾ ? ನಮ್ಮ ಅಪ್ಪ, ಅಮ್ಮ ಒಂದಲ್ಲ ಒಂದು ದಿನ ನಮ್ಮನ್ನ ಬಿಟ್ಟೋಗ್ತಾರೆ ಅಂತ ಗೊತ್ತು. ಆದ್ರೆ ಅದು ನಮ್ಗೆ ಬೇಜಾರಾಗುವ ವಿಷಯ ಅಲ್ವಾ ? ಎಷ್ಟು ದಿನ ಇರ್ತೀವೋ ಅಷ್ಟು ದಿನ ಖುಷಿಯಾಗಿರ್ಬೇಕು.
/filters:format(webp)/newsfirstlive-kannada/media/media_files/2025/10/13/bbk-rakshitha-2025-10-13-17-20-09.png)
ಒಂದು ದಿನ ಅವ್ರು ನಮ್ಮನ್ನ ಬಿಟ್ಟೋಗ್ತಾರೆ ಅಲ್ವಾ ? ಅವರ ಮುಂಚೆ ನಾವು ಹೋಗ್ಬಿಡ್ಬೇಕು ಅನ್ಸುತ್ತೆ. ಆದ್ರೆ ತಂದೆ, ತಾಯಿಯ ಮುಂದೆ ಮಕ್ಕಳು ಸತ್ರೆ ಆ ನೋವನ್ನ ತಡೆಯುವ ಶಕ್ತಿ ಅವರಿಗಿರಲ್ಲ. ಅರ್ಥ ಆಯ್ತಾ ಎಂದು ಮಲ್ಲಮ್ಮನನ್ನ ಪ್ರಶ್ನಿಸಿದ್ರು..ಈ ಮಾತು ಕೇಳ್ತಿದ್ದಂತೆ ಯಾವಾಗ್ಲೂ ಕೂಲ್​ ಆಗಿರೋ ಮಲ್ಲಮ್ಮ ಒಮ್ಮೆಲ್ಲ ಕೆರಳಿ ಕೆಂಡವಾಗಿಬಿಡ್ತಾರೆ.
/filters:format(webp)/newsfirstlive-kannada/media/media_files/2025/10/13/bbk-mallamma-2025-10-13-17-20-33.png)
ಸಂಬಂಧವೇ ಇಲ್ಲದ ಉದಾಹರಣೆ ಕೊಡುತ್ತಾ ಸಾಯುವ ಮಾತಾಡಿದ ರಕ್ಷಿತಾಳ ಮಾತಿಗೆ ಸಿಟ್ಟಾದ ಮಲ್ಲಮ್ಮ ಎಲ್ಲಾದಕ್ಕೂ ಅರ್ಥ ಆಯ್ತಾ? ಅರ್ಥ ಆಯ್ತಾ ? ಅಂತ ಕೇಳ್ಬೇಡ ಎಂದಿದ್ದಾರೆ. ಅಲ್ಲದೆ ಟೇಬಲ್ ಕುಟ್ಟಿ, ಕುಟ್ಟಿ ಏಯ್ ಇಲ್ಲಿ ಸಾಯುವ ಮಾತಾಡ್ಬೇಡ ಎಂದು ರಕ್ಷಿತಾಗೆ ಮಲ್ಲಮ್ಮ ಖಡಕ್ಕಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಉದ್ದುದ್ದ ಮಾತಾಡ್ಬೇಡ, ಎಲ್ಲಿ ಏನ್ ಮಾತಾಡ್ಬೇಕೋ ಅದನ್ನೇ ಮಾತಾಡ್ಬೇಕು ಎಂದು ಬುದ್ಧಿವಾದ ಹೇಳಿದ್ರು. ಮಲ್ಲಮ್ಮನ್ನ ರೌದ್ರಾವತಾರಕ್ಕೆ ಬೆಚ್ಚಿದ ರಕ್ಷಿತಾ ಬಾಯ್ಮೇಲೆ ಕೈ ಇಟ್ಕೊಂಡು ಸುಮ್ಮನೇ ಕುಳಿತುಕೊಂಡ್ರು.
/filters:format(webp)/newsfirstlive-kannada/media/media_files/2025/10/13/bigg-boss-rakshitha-2025-10-13-17-21-01.png)