/newsfirstlive-kannada/media/media_files/2025/10/08/manjubhashini_rashika_bigggbosskannada-2025-10-08-18-15-41.png)
Photograph: (Colors Kannada)
ಕನ್ನಡ ಬಿಗ್ ಬಾಸ್ ಸೀಸನ್ 12 ಶುರುವಾಗಿ ಒಂದು ವಾರ ಕಳೆದಿದೆ. ಈ ಬಾರಿ ಒಂದರ ವಿರುದ್ಧ 2 ಎಂಬ ಕಾನ್ಸೆಪ್ಟ್​ನ ಅಡಿ ಬಿಗ್ ಬಾಸ್ ಶುರುವಾಗಿದ್ದು ಪ್ರೇಕ್ಷಕರಿಗೆ ಒಂಟಿ, ಜಂಟಿಗಳ ಕಾಳಗ ಒಳ್ಳೆ ಕಿಕ್ ಕೊಡುತ್ತಿದೆ. ಇನ್ನು ಕಾಕ್ರೋಚ್ ಸುಧಿ ಮೊದಲ ಫೈನಲಿಸ್ಟ್ ಆಗಿದ್ದು, ಅಸುರನ ರೂಪ ತಾಳಿ ಸ್ಪರ್ಧಿಗಳಿಗೆ ಮನಸೋ ಇಚ್ಛೆ ಶಿಕ್ಷೆ ನೀಡುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಸರ್ವೋಚ್ಛ ಅಧಿಪತಿ ಆಗಿ ಮೆರೆಯುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/08/cockroach_sudhi_biggbosskannada12-2025-10-08-18-16-05.png)
ಬಿಗ್ ಬಾಸ್ ಮನೆಯಲ್ಲಿ ಈಗ ಏನು ಮಾಡುವುದಕ್ಕೂ ಅಸುರ ಕಾಕ್ರೋಚ್​ ಸುಧಿಯ ಅನುಮತಿ ಪಡೆಯಲೇ ಬೇಕಾಗಿದೆ. ರಾಶಿಕಾ ಶೆಟ್ಟಿಗೆ ವಾಶ್ ರೂಂಗೆ ಹೋಗುವುದಕ್ಕೂ ಅನುಮತಿ ಕೊಡದೆ ಸತಾಯಿಸಿದ್ದಾರೆ.
ಅಲ್ಲದೆ ಅಕ್ಕ-ತಂಗಿಯಂತೆ ಇದ್ದ ರಾಶಿಕಾ-ಮಂಜು ಭಾಷಿಣಿ ನಡುವಿನ ಜಗಳ ಜ್ವಾಲಾಮುಖಿಯಂತಾಗಿದೆ. ಎಲ್ಲರೂ ಒಂದೆಡೆ ಕುಳಿತಿದ್ದಾಗ ಮಂಜು ಭಾಷಿಣಿ ಈ ಬಾಲಕಿ ಆಗಾಗ ವಾಶ್ ರೂಂ.. ವಾಶ್​ ರೂಂ ಅಂತ ನನ್ನ ಪ್ರಾಣ ತಿನ್ನುತ್ತದೆ ಎಂದು ಅಸುರ ಕಾಕ್ರೋಚ್ ಸುಧಿಗೆ ಕಂಪ್ಲೇಂಟ್ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಕ್ರೋಚ್ ಸುಧಿ ನಾವು ಹೇಳಿದಾಗಲೇ ನೀವು ವಾಷ್ ರೂಂಗೆ ಹೋಗ್ಬೇಕು. ಸುಮ್ಮನೆ ನೀವು ನಾಟಕ ಆಡುತ್ತಿರಬಹುದು ಎಂದು ತಡೆಯಾಜ್ಞೆ ಹೂಡಿದ್ದಾರೆ.
/filters:format(webp)/newsfirstlive-kannada/media/media_files/2025/10/08/biggboss12_contestants_in_house-2025-10-08-18-16-35.png)
ಕಾಕ್ರೋಚ್ ಸುಧಿಯ ಮಾತಿಗೆ ಸಿಟ್ಟಾದ ರಾಶಿ ಪರ್ಸನಲ್ ವಿಷಯಕ್ಕೆ ವಾಶ್ ರೂಂಗೆ ಹೋಗ್ಬೇಡ ವೇಟ್ ಮಾಡು ಅಂದ್ರೆ ಹೆಂಗೆ? ಅಷ್ಟು ಸೆನ್ಸ್ ಇಲ್ವಾ? ಕಾಮನ್ ಸೆನ್ಸ್ ಅಲ್ವಾ ಅದು ? ನಿಮ್ಗೆ ಯಾರೂ ಆ ಸರ್ವಾಧಿಕಾರ ಕೊಟ್ಟಿಲ್ಲ ಎಂದು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ನಾನು ಸುಳ್ಳು ಹೇಳ್ತಿದ್ದೀನಿ ಅಂತ ಹೇಳಿದ್ದೀರಾ ಎಂದು ರಾಶಿ ಮಂಜು ಭಾಷಿಣಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಸಿಟ್ಟಾದ ಮಂಜು ಭಾಷಿಣಿ ಫಾಲ್ಸ್ ಅಲಿಗೇಷನ್ ಮಾಡ್ಬೇಡ ಎಂದ ಗರಂ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/10/08/jahnavi_ashiwinigowda_biggboss-kannada-12-2025-10-08-18-17-19.png)
ಇನ್ನು ಇದೆಲ್ಲವನ್ನ ನೊಡುತ್ತಾ ಸೋಫಾ ಮೇಲೆ ಕುಳಿತು ಮಜಾ ತೆಗೆದುಕೊಳ್ಳುತ್ತಿದ್ದ ಒಂಟಿಗಳ ಗುಂಪಿನ ಮಹಾರಾಣಿಯರಾದ ಅಶ್ವಿನಿ ಗೌಡ ವೆರಿ ಗುಡ್ ರಾಶಿ.. ವೆರಿ ಗುಡ್.. ಎಂದು ಚಪ್ಪಾಳೆ ಹೊಡೆದಿದ್ದಾರೆ. ಅಲ್ಲದೆ ಜಾಹ್ನವಿ & ಅಶ್ವಿನಿ ಗೌಡ ಚೆನ್ನಾಗಿದೆ ಚೆನ್ನಾಗಿದೆ ಎಂದು ಗೇಲಿ ಮಾಡಿದ್ದಾರೆ.