/newsfirstlive-kannada/media/media_files/2025/12/10/karna-serial-6-2025-12-10-15-48-33.jpg)
ಕರ್ಣ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್​ ಜೊತೆಗೆ ವೀಕ್ಷಕರನ್ನ ರಂಜಿಸುತ್ತಿದೆ. ಸದ್ಯ ಬಾವನ ಎಂಟ್ರಿಯಿಂದ ನಿಧಿ, ನಿತ್ಯಾ, ಕರ್ಣ ಬದುಕಲ್ಲಿ ತಂಗಾಳಿ ಬಿಸೋ ಸೂಚನೆ ಸಿಕ್ಕಿದೆ.
ನಿಧಿಗೆ ಕರ್ಣ ಹಾಗೂ ನಿತ್ಯ ಮದುವೆ ಆಗಿಲ್ಲ ಅನ್ನೋ ಸತ್ಯ ಗೊತ್ತಾಗಿದೆ. ನಿತ್ಯಾ-ತೇಜಸ್​ ಮಗುವಿಗೆ ಕರ್ಣ ಅಪ್ಪನಾಗಿ ನಿಲ್ಲೋ ಭರವಸೆ ಮೂಡಿಸಿರೋದು ನಿಧಿ ಮನಸ್ಸು ಕರಗುವಂತೆ ಮಾಡಿದೆ. ಈ ಮೂವರ ನೆಮ್ಮದಿ ಕೆಡಸೋಕೆ ಅಂತಾನೇ ಕುತಂತ್ರಿಗಳು ಹೊಸ ಪ್ಲ್ಯಾನ್​ ಮಾಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ರಿಯಾಲಿಟಿ ಕಿಂಗ್, ಕಾವ್ಯ ಬೆಂಕಿ! ಬಿಗ್​ ಬಾಸ್​ನಲ್ಲಿ ಯಾರು ಹೆಂಗೆಂಗೆ..?
ನಿತ್ಯ ಕೊರಳಿದ್ದ ತಾಳಿಯನ್ನ ಕತ್ತರಿಸಿರೋ ಸಂಜು, ಕರ್ಣ ಎಲ್ಲರ ಮುಂದೆ ತಾಳಿ ಕಟ್ಟುವಂತೆ ತಂತ್ರ ರೂಪಿಸಿದ್ದಾರೆ. ಈ ನಡುವೆ ತೇಜಸ್​ ನಿಧಿ ಕಣ್ಣೀಗೆ ಬಿದ್ದಿದ್ದು, ಭಾವನನ್ನ ಕಂಡು ಶಾಕ್​ನಲ್ಲಿದ್ದಾಳೆ ನಿಧಿ.
ತೇಜಸ್​ ಎಂಟ್ರಿ ರಮೇಶನ ಹೊಸ ದಾಳ. ಈ ದಾಳ ಹೇಗೆ ವರ್ಕ್​ ಆಗುತ್ತೆ? ನಿತ್ಯಾ-ಕರ್ಣ ಮರು ಮಾಂಗಲ್ಯ ಧಾರಣೆ ನಡೆಯುತ್ತಾ? ನಿಧಿ ಕರ್ಣನನ್ನ ಉಳಿಸಿಕೊಳ್ತಾಳ ಎಂಬ ಕುತೂಹಲದ ಜೊತೆಗೆ ಈ ವಾರ ಪೂರ್ತಿ ಕರ್ಣ ಪ್ರಸಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us