/newsfirstlive-kannada/media/media_files/2025/10/13/ashwini-rr-2025-10-13-11-02-30.jpg)
ಅಶ್ವಿನಿ ಗೌಡ Photograph: (ಕಲರ್ಸ್ ಕನ್ನಡ)
ಅಶ್ವಿನಿ ಗೌಡ (Ashwini Gowda) ರಕ್ಷಿತಾ ಶೆಟ್ಟಿಯನ್ನು (Rakshitha Shetty) ಕಾರ್ಟೂನ್ ಎಂದು ನಿಂದಿಸಿದ್ದರು. ಇದೀಗ ಕಿಚ್ಚನ ಎದುರು ಅಶ್ವಿನಿ ಗೌಡ ಯೂ-ಟರ್ನ್​ ಹೊಡೆದಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್​, ಅಶ್ವಿನಿ ಗೌಡಗೆ ಸೂಕ್ಷ್ಮವಾಗಿ ಬಿಸಿ ಮುಟ್ಟಿಸಿದ್ದಾರೆ!
ಬಿಗ್​​ಬಾಸ್​ನಲ್ಲಿ ಕಳೆದ ವಾರ ಒಂಟಿ ಮತ್ತು ಜಂಟಿ ನಡುವೆ ಭಾರೀ ದೊಡ್ಡ ಪ್ರಮಾಣದಲ್ಲಿ ಕಿತ್ತಾಟ ನಡೆಯಿತು. ಈ ಗಲಾಟೆ ಕಿತ್ತಾಟದ ಮಧ್ಯೆ ರಕ್ಷಿತಾ ಶೆಟ್ಟಿ ತಮ್ಮ ಪಾಡಿಗೆ ತಾವಿದ್ದು ಓಡಾಡಿಕೊಂಡು ಇದ್ದರು. ಇದನ್ನು ನೋಡಿದ ಅಶ್ವಿನಿ ಗೌಡ ರೋಸಿ ಹೋಗಿದ್ದರು. ರಕ್ಷಿತಾ ಅವರತ್ತ ಕೈತೋರಿಸುತ್ತ ಈ ಕಾರ್ಟೂನ್ ಯಾವ ಕಡೆ ಎಂದು ಆವೇಶಭರಿತರಾಗಿ ಮಾತನ್ನಾಡಿದ್ದರು.
ನಿನ್ನೆಯ ಸೂಪರ್​ ಸಂಡೇ ​ವಿತ್​ ಬಾದ್​ ಷಾ ಸುದೀಪ ಎಸಿಸೋಡಿನ ‘S​ or No’ ರೌಂಡಿನಲ್ಲಿ ಸುದೀಪ್​ ರಕ್ಷಿತಾ ಈ ಮನೆಯ ‘ಕಾರ್ಟೂನ್​’ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಅಶ್ವಿನಿ ಗೌಡ ‘No’ ಅನ್ನೋ ಬೋರ್ಡ್​ ತೋರಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/13/ashwin-gowda-utern-2025-10-13-10-49-25.jpg)
ಕೊನೆಗೆ ಸುದೀಪ್, ನೋ ಯಾಕೆ ಎಂದು ಅಶ್ವಿನಿಯನ್ನು ಕೇಳಿದ್ದಾರೆ. ನನಗೆ ರಕ್ಷಿತಾ ಕಾರ್ಟೂನ್ ಎಂದು ಅನಿಸೋದಿಲ್ಲ. ಅವಳ ಇನ್ನೂ ಚಿಕ್ಕ ವಯಸ್ಸಿನವಳು. ನಾವೆಲ್ಲಾ ಹಿರಿಯರಿದ್ದೇವೆ. ನನ್ನ ಪ್ರಕಾರ ಅವಳು ತಿಂಬಾ ಸೂಕ್ಷ್ಮ. ಅವಳು ಕಾರ್ಟೂನ್ ಅಲ್ಲ ಎಂದಿದ್ದಾರೆ. ನಂತರ ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿರುವ ಕಿಚ್ಚ ಸುದೀಪ್, ನಾವು ಇಲ್ಲಿ ಕೇಳುವ ‘S​ or No’ ಪ್ರಶ್ನೆಗಳು ಒಂದು ಜನರ ನಿರೀಕ್ಷೆಗಳು ಆಗಿರಬಹುದು ಅಥವಾ ನಿಮ್ಗಳಲ್ಲೇ ಒಂದು ಸ್ಟೇಟ್​ಮೆಂಟ್ ಆಗಿರಬಹುದು. ಅದಕ್ಕೆ ನೀವು ವ್ಯತಿರಿಕ್ತ ಉತ್ತರ (contradicting answers) ಕೊಟ್ಟಾಗ ನೀವು ಬಹಳ ವಿಚಿತ್ರವಾಗಿ ಹೊರಗಡೆ ಕಾಣಿಸುತ್ತೀರಿ ಅನ್ನೋದನ್ನು ಮರೀಬೇಡಿ ಅನ್ನೋ ಮೂಲಕ ತೀಕ್ಷ್ಣವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಗರ್ಲ್​ಫ್ರೆಂಡ್​ ಜೊತೆ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ - VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ