/newsfirstlive-kannada/media/media_files/2025/09/28/rakshitha-2025-09-28-16-05-08.jpg)
ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ ರಕ್ಷಿತಾ?
ಬಿಗ್‌ಬಾಸ್ ಆರಂಭವಾದಾಗಿನಿಂದ ಹೊಸ ಹೊಸ ಟ್ವಿಸ್ಟ್‌ಗಳನ್ನು ನೋಡುತ್ತಿರುವ ವೀಕ್ಷಕರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಟರ್ನಿಂಗ್ ಬರಬಹುದು ಅನ್ನೋ ಹಿಂಟ್ ಕೊಟ್ಟಿದ್ದಾರೆ ಸುದೀಪ್. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಹೇಳಿದ್ದೇನು?
ಬಿಗ್‌ಬಾಸ್‌ನ ಈ ಸೀಸನ್ ಹಿಂದಿನ ಸೀಸನ್‌ಗಳಂತಲ್ಲ ಇಲ್ಲಿ ಯಾವಾಗ ಯಾವ ರೀತಿಯ ಟ್ವಿಸ್ಟ್‌ಗಳು ಬೇಕಾದರೂ ಬರಬಹುದು ಅನ್ನೋದನ್ನು ಸ್ವತಃ ಸುದೀಪ್ ಹೇಳಿದ್ದಾರೆ.
ವಾರದ ಪಂಚಾಯ್ತಿಯಲ್ಲಿ ಬಿಗ್‌ಬಾಸ್‌ನ ಸ್ಪರ್ಧಿಗಳ ಜೊತೆಗೆ ಮಾತನಾಡಿರುವ ಸುದೀಪ್ ಆವತ್ತು ಸೀಸನ್ ಆರಂಭವಾದಾಗ ಯಾರು ಒಂಟಿಯಾಗಬೇಕು ಯಾರು ಜಂಟಿಯಾಗಬೇಕು ಎಂದು ಜನರೇ ವೋಟ್ ಮಾಡಿದ್ರು. ಅವರ ನಿರ್ಧಾರ ಸರಿ ಇದೆಯಾ ಅನ್ನೋ ಅನುಮಾನ ಮೂಡಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಸ್ಪರ್ಧಿಗಳ ಸ್ಟ್ರಾಟಜಿ ಅವರ ಆಟ ಎಲ್ಲವೂ ಸಮಾಧಾನಕರವಾಗಿ ಇದೆಯಾ ಅನ್ನೋ ಪ್ರಶ್ನೆಯೂ ಇದೆ ಎಂದಿದ್ದಾರೆ.
ಹಿಂದಿನ ಹನ್ನೊಂದು ಸೀಸನ್ನೇ ಬೇರೆ ಈ ಸೀಸನ್ನೇ ಬೇರೆ ಇಲ್ಲಿ ಯಾವ ಕ್ಷಣ ಯಾವ ಬದಲಾವಣೆಯಾದರೂ ಆಗಬಹುದು. ಬಿಗ್‌ಬಾಸ್ ಮನೆಯೊಳಗಿರೋ ಶೇ.೫೦ ಸ್ಪರ್ಧಿಗಳ ರಿಪ್ಲೇಸ್‌ಮೆಂಟ್ ಕೂಡ ಸಿದ್ಧವಿರಬಹುದು ಎಂದು ಹೇಳಿ ಮುಂದೇನೋ ದೊಡ್ಡ ಟ್ವಿಸ್ಟ್ ಕಾದಿದೆ ಅನ್ನೋದಿಕ್ಕೆ ಹಿಂಟ್ ಕೊಟ್ಟಿದ್ದಾರೆ.
ವಾರದ ಪಂಚಾಯ್ತಿಯಲ್ಲಿ ಸುದೀಪ್, ಬಿಗ್‌ಬಾಸ್‌ಗೆ ಎಂಟ್ರಿ ನೀಡಿದ ಮೊದಲ ದಿನವೇ ಎಲಿಮಿನೇಷನ್ ಆಗಿ ಹಿಸ್ಟರಿಯನ್ನೇ ಬರೆದಿದ್ದ ರಕ್ಷಿತಾ ಶೆಟ್ಟಿಯನ್ನೂ ಭೇಟಿ ಮಾಡಿದ್ದಾರೆ. ಇದು ಇನ್ನಷ್ಟು ಕುತೂಹಲ ಕೆರಳಿಸಿದ್ದು ಓರ್ವ ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗುವಾಗ ರಕ್ಷಿತಾ ರೀ ಎಂಟ್ರಿ ಆಗುತ್ತಾರಾ ಅನ್ನೋ ಅನುಮಾನ ಹುಟ್ಟುಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.