/newsfirstlive-kannada/media/media_files/2025/12/07/gilli-4-2025-12-07-10-39-30.jpg)
ಬಿಗ್​ ಬಾಸ್​​ ಮನೆಯಲ್ಲಿ ರೂಲ್ಸ್​​ ಬ್ರೇಕ್​ ಮಾಡೋದೇ ಕೆಲ ಸ್ಪರ್ಧಿಗಳ ಆಟವಾಗಿದೆ. ಎಷ್ಟೇ ವಾರ್ನ್​ ಮಾಡಿದ್ದರೂ ಸ್ಪರ್ಧಿಗಳು ಎಚ್ಚೆತ್ತುಕೊಳ್ತಿಲ್ಲ. ಕೆಲವು ಬಾರಿ ಕಿಚ್ಚ ಸುದೀಪ್ ಕೂಡ ಸೂಕ್ಷ್ಮವಾಗಿ ಹೇಳಿದ್ದರು. ಪದೇ ಪದೆ ನಿಯಮ ಮೀರುತ್ತಿರುವ ಹಿನ್ನೆಲೆಯಲ್ಲಿ ಕ್ಯಾಪ್ಟನ್ಸಿ ರೂಮ್​​ಗೆ ಸುದೀಪ್ ಬೀಗ ಜಡಿದಿದ್ದಾರೆ.
ಗಿಲ್ಲಿಯಿಂದ ಕ್ಯಾಪ್ಟನ್ಸಿ ರೂಮ್​​ಗೆ ಬಿತ್ತು ಬೀಗ
ಬಿಗ್​ ಬಾಸ್​ನಲ್ಲಿ ಕ್ಯಾಪ್ಟನ್ಸಿ ರೂಮ್​​ಗೆ ವಿಶೇಷ ಸ್ಥಾನಮಾನ ಇದೆ. ಕೆಲವು ಸ್ಪರ್ಧಿಗಳಿಗೆ ಈ ರೂಮ್​ನ ಮೌಲ್ಯ ತಿಳಿದಂತಿಲ್ಲ. ಅವರಲ್ಲಿ ಗಿಲ್ಲಿ ಕೂಡ ಒಬ್ಬರು. ಕ್ಯಾಪ್ಟನ್ ಆಗದೆ ಇದ್ದರೂ ರೂಂ ಬಳಸಿರೋದು ಬಿಗ್ ಬಾಸ್ ಮಾತ್ರವಲ್ಲ, ಕಿಚ್ಚ ಸುದೀಪ್ ಕೋಪಕ್ಕೂ ಕಾರಣವಾಗಿದೆ. ಅದೇ ಕಾರಣಕ್ಕೆ ಮುಂದಿನ ವಾರ ಕ್ಯಾಪ್ಟನ್ ಆಗುವರೆಗೂ ನಾಯಕನ ರೂಮ್​​ಗೆ ಬಾಗಿಲು ತೆರೆಯುವಂತಿಲ್ಲ ಎಂದು ಸುದೀಪ್ ಹೇಳಿದ್ದಾರೆ.
ಏನಾಗಿತ್ತು..?
ಮನೆಗೆ ಯಾರೇ ಕ್ಯಾಪ್ಟನ್ ಆದರೂ ಗಿಲ್ಲಿ, ಕ್ಯಾಪ್ಟನ್ ರೂಂಗೆ ನುಗ್ಗುತ್ತಿದ್ದರು. ಈ ವಾರವೂ ಅದನ್ನೇ ಮಾಡಿದ್ದರು. ಸ್ಪಂದನಾ ಮತ್ತು ಅಭಿಷೇಕ್ ಅವರು ಕ್ಯಾಪ್ಟನ್ ಆದಾಗ ಗಿಲ್ಲಿ, ಕ್ಯಾಪ್ಟನ್ ರೂಂ ಪ್ರವೇಶ ಮಾಡಿದ್ದರು. ಆ ನಂತರ ಗಿಲ್ಲಿ ಬೆಡ್ ಪಕ್ಕದ ಚೇರ್ ಮೇಲೆ ಕುಳಿತಿದ್ದರು, ನಂತರ ಹಾಸಿಗೆ ಮೇಲೆ ಮಲಗಿದ್ದರು. ಅಲ್ಲಿದ್ದ ಅಭಿಷೇಕ್, ಧನುಷ್ ಹೊರಗೆ ಹೋಗುವಂತೆ ಹೇಳಿದರೂ ಕೇಳಲಿಲ್ಲ. ಇದೇ ವಿಚಾರಕ್ಕೆ ಇದೀಗ ಬಿಗ್​ ಬಾಸ್ ಮನೆಗೆ ಬೀಗ ಬಿದ್ದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕ್ಯಾಪ್ಟನ್ ರೂಮ್ಗೆ ಬೀಗ!!
— Colors Kannada (@ColorsKannada) December 6, 2025
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/Sq0K9LF8to
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us