ಮತ್ತೆ ಆರಂಭವಾಯ್ತು ಬಿಗ್‌ ಬಾಸ್‌ ಆಟ: ರೆಸಾರ್ಟ್ ನಿಂದ ಬಿಗ್ ಬಾಸ್ ಮನೆಗೆ ರೀಎಂಟ್ರಿಯಾದ ಸ್ಪರ್ಧಿಗಳು

ಮೊನ್ನೆ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಶೂಟಿಂಗ್ ಸ್ಥಗಿತವಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟೀಸ್ ನಂತೆ ಕ್ರಮ ಕೈಗೊಳ್ಳಲಾಗದೇ ಇದ್ದಿದ್ದಕ್ಕೆ ಬಿಗ್ ಬಾಸ್ ಸೇರಿದಂತೆ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಲಾಗಿತ್ತು. ಇಂದು ಮುಂಜಾನೆಯಿಂದಲೇ ಬಿಗ್ ಬಾಸ್ ಶೋ ಶೂಟಿಂಗ್ ಮತ್ತೆ ಆರಂಭವಾಗಿದೆ.

author-image
Chandramohan
Bigg-Boss-12

ಮತ್ತೆ ಆರಂಭವಾದ ಬಿಗ್ ಬಾಸ್ ಶೋ ಶೂಟಿಂಗ್‌ Photograph: (colors kannada)

Advertisment
  • ಮತ್ತೆ ಆರಂಭವಾದ ಬಿಗ್ ಬಾಸ್ ಶೋ ಶೂಟಿಂಗ್‌
  • ಇಂದು ಮುಂಜಾನೆ ಬಿಗ್ ಬಾಸ್ ಶೋಗೆ ರೀಎಂಟ್ರಿ ಕೊಟ್ಟ ಸ್ಪರ್ಧಿಗಳು
  • ಎಲ್ಲ ಸ್ಪರ್ಧಿಗಳನ್ನು ಮತ್ತೆ ಶೋಗೆ ಸ್ವಾಗತಿಸಿದ ಬಿಗ್ ಬಾಸ್‌

ಬಿಗ್‌ಬಾಸ್‌ ಮನೆಗೆ ಬೀಗವನ್ನೇ ಹಾಕಲಾಗಿದೆ. ಮುಂದೇನು? ಆಟ ಅರ್ಧಕ್ಕೇ ನಿಲ್ಲಲಿದೆಯೇ ಈ ಎಲ್ಲ ಪ್ರಶ್ನೆಗೆ ಬಿಗ್‌ಬಾಸ್‌ ಉತ್ತರ ಕೊಟ್ಟಿದ್ದಾರೆ. 

ಬಿಗ್‌ಬಾಸ್‌ ಸೀಸನ್‌ ೧೨ ಆರಂಭವಾಗಿ ಎರಡು  ವಾರವೂ ಪೂರ್ಣಗೊಂಡಿಲ್ಲ. ಅಷ್ಟರಲ್ಲೇ ಬಿಗ್‌ಬಾಸ್‌ ಮನೆಗೆ ಬೀಗ ಜಡಿಯಲಾಗಿತ್ತು. ಇನ್ನು ಆಟವೇ ನಿಂತಂತೆಯೇ ಎನ್ನುವ ಮಾತುಗಳು ಕೇಳಿ ಬಂದಿದ್ದವು. ವೀಕ್ಷಕರು ಕೂಡ ಚಿಂತಿತರಾಗಿದ್ದರು. ಬಿಗ್‌ಬಾಸ್‌ನ ಭವಿಷ್ಯವೇನು ಅನ್ನೋದು ಗೋಡೆ ಮೇಲೆ ದೀಪ  ಇಟ್ಟಂತೆ ಆಗಿತ್ತು. ಈಗ ಬಿಗ್‌ಬಾಸ್‌ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. 
ಇದು ಬಿಗ್‌ಬಾಸ್‌ ಮನೆ ಮಾತ್ರವಲ್ಲ ಕನ್ನಡಿಗರ ಹೆಮ್ಮೆ. ಕನ್ನಡಿಗರೆಲ್ಲ ಹಚ್ಚಿ ಸಂಭ್ರಮಿಸೋ ಈ ಜ್ಯೋತಿ ಆರಲು ಅಸಾಧ್ಯ. ನಿಮ್ಮ ಆಟಕ್ಕೆ ನೀಡಿದ್ದ ಅಲ್ಪವಿರಾಮ ಮುಗಿದಿದೆ.  ಹೊಸ ಹುರುಪು ಹುಮ್ಮಸ್ಸಿನಿಂದ ಆಟ ಮುಂದುವರಿಸಿ ಎಂದು ಹೇಳಿ ಸ್ಪರ್ಧಿಗಳನ್ನು ಮತ್ತೊಮ್ಮೆ ಮನೆಯೊಳಗೆ ಕರೆಸಿಕೊಂಡಿದ್ದಾರೆ. 


ಈ ಮೂಲಕ ವೀಕ್ಷಕರ ಮನದಲ್ಲಿದ್ದ ಹಲವು ಪ್ರಶ್ನೆಗಳಿಗೂ ಉತ್ತರ ಸಿಕ್ಕಿದಂತಾಗಿದೆ. 
ಬಿಗ್ ಬಾಸ್ ಶೋ ಮತ್ತೆ ಶುರುವಾಗಿದೆ. ಜಾಲಿವುಡ್‌ ಸ್ಟುಡಿಯೋಸ್ ನಲ್ಲಿ ಬಿಗ್ ಬಾಸ್ ಶೋವನ್ನು ಮುಂದುವರಿಸಲು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ  ಅವಕಾಶ ಕೊಟ್ಟಿದೆ. ಬಿಗ್ ಬಾಸ್ ಹೊರತುಪಡಿಸಿ, ಜಾಲಿವುಡ್ ಸ್ಟುಡಿಯೋ ಮಾತ್ರ ಬಂದ್ ಆಗಿದೆ.

ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿದ್ದ ಬಿಗ್ ಬಾಸ್ ಸ್ಪರ್ಧಿಗಳೆಲ್ಲಾ ಇಂದು ಮುಂಜಾನೆಯೇ ಮತ್ತೆ ಬಿಗ್ ಬಾಸ್ ಮನೆಗೆ ರೀಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ನಲ್ಲಿ ಮತ್ತೆ ಆಟ ಶುರುವಾಗಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Big boss shooting restarts
Advertisment