ಬಿಗ್​ ಬಾಸ್ ಗೇಮ್​​ನಿಂದ ಔಟ್ ಆಗಿ ಆಚೆ ಬಂದಿರುವ ಜಾನ್ವಿ ಅವರು ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾದರು. ಈ ವೇಳೆ ತಮ್ಮ ಮೇಲಿನ ನೆಗೆಟೀವ್ ಟ್ರೋಲ್ ಬಗ್ಗೆ ಮಾತನ್ನಾಡಿದ್ದಾರೆ. ನನಗೆ ಬಿಗ್​ ಬಾಸ್​ನಿಂದ ಹೊರ ಬಂದ ಬಳಿಕ ಪಾಸಿಟೀವ್ ವೈಭ್ ಇದೆ. ಎಲ್ಲೋ ಒಂದು ಕಡೆ ಬೇಜಾರು ಇದೆ. ಜೊತೆಗೆ ತುಂಬಾನೇ ಖುಷಿ ಕೂಡ ಇದೆ. ಇಡೀ ಮನೆಯಲ್ಲಿ ಯಾರೂ ಕೂಡ ನಾನು ಔಟ್ ಆಗ್ತೀನಿ ಅಂದುಕೊಂಡು ಇರಲಿಲ್ಲ. ವಾರದಲ್ಲಿ ಸುದೀಪ್, ಕ್ಲಾಸ್ ತೆಗೆದುಕೊಂಡಾಗಲೇ ನನಗೆ ಅರ್ಥ ಆಗಿರೋದು. ಹೊರಗಡೆ ಏನು ಚರ್ಚೆ ಆಗಿದೆ ಅಂತಾ. ಅದನ್ನು ನಾನು ಊಹಿಸಿ ಬಿಡುತ್ತಿದ್ದೆ.. ಕೆಲವೊಂದು ತಪ್ಪುಗಳು ಉದ್ದೇಶಪೂರ್ವಕವಾಗಿ ಮಾಡಿರೋದಲ್ಲ. ಆಡುವ ಭರದಲ್ಲಿ ಆಗಿರೋದು ಅಷ್ಟೇ. ಆದರೆ ಜನ ಬಿಗ್​ ಬಾಸ್​ ಅನ್ನು ತುಂಬಾ ಸೀರಿಯಸ್​ ತೆಗೆದುಕೊಂಡು ನೋಡ್ತಾರೆ ಎಂದರು. ಜಾನ್ವಿ ಏನೆಲ್ಲ ಮಾತನ್ನಾಡಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us