Advertisment

BBK: ಹೋಗುವಾಗ ಕಣ್ಣೀರಿಟ್ಟ ಮಾಜಿಗಳು.. ಭಾವುಕರಾದ ಹಾಲಿ ಸ್ಪರ್ಧಿಗಳು..! ವಿಡಿಯೋ

ಬಿಗ್​ ಬಾಸ್​ ವೇದಿಕೆಗೆ ಇರುವ ಶಕ್ತಿ ಎಂಥದ್ದು ಅನ್ನೋದನ್ನು ಸೀಸನ್ 11 ರ ಸ್ಪರ್ಧಿಗಳು ತೆರೆದಿಟ್ಟಿದ್ದಾರೆ. ಸೀಸನ್​-12ಕ್ಕೆ ಅತಿಥಿಗಳಾಗಿ ಆಗಮಿಸಿದ್ದ ತ್ರಿವಿಕ್ರಂ, ರಜತ್, ಉಗ್ರಂ ಮಂಜು, ಮೋಕ್ಷಿತಾ, ಚೈತ್ರಾ ಕುಂದಾಪುರ ತಮ್ಮ ಬದುಕು ಬದಲಿಸಿದ ಬಿಗ್​ ಬಾಸ್​ನ ಶಕ್ತಿಯನ್ನ ಕೊಂಡಾಡಿ ಭಾವುಕರಾಗಿದ್ದಾರೆ.

author-image
Ganesh Kerekuli
Chaitra Kundapura
Advertisment

ಈ ವಾರ ಬಿಗ್​ ಬಾಸ್ ಮನೆಗೆ ಸೀಸನ್ 11ರಲ್ಲಿ ಸ್ಪರ್ಧಿಗಳಾಗಿದ್ದ ತ್ರಿವಿಕ್ರಂ, ಮೋಕ್ಷಿತಾ ಪೈ, ರಜತ್ ಕಿಶನ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಬಂದಿದ್ದರು. ಉಗ್ರಂ ಮಂಜು ಅವರ ಮದುವೆ ಫಿಕ್ಸ್ ಆಗಿದೆ. ಬ್ಯಾಚುಲರ್ ಪಾರ್ಟಿ ಮಾಡಿಕೊಳ್ಳಲು ಈ ಟೀಂ ಬಿಗ್​ಬಾಸ್ ಮನೆಗೆ ದೌಡಾಯಿಸಿತ್ತು.

Advertisment

ಹಳೇ ಸ್ಪರ್ಧಿಗಳ ಆಗಮನ ಹಿನ್ನೆಲೆಯಲ್ಲಿ ಬಿಗ್​ ಬಾಸ್ ಮನೆಯನ್ನು ಅತಿಥಿಗಳ ಪ್ಯಾಲೆಸ್ ಆಗಿ ಪರವರ್ತನೆ ಮಾಡಲಾಯಿತು. ಹಾಲಿ ಸ್ಪರ್ಧಿಗಳು, ಮಾಜಿ ಸ್ಪರ್ಧಿಗಳನ್ನು ಅತಿಥಿ ಸತ್ಕಾರ ಮಾಡೋದೇ ಈ ವಾರದ ಕೇಂದ್ರ ಬಿಂದುವಾಗಿತ್ತು.  

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಲ್ಕೈದು ದಿನಗಳ ಕಾಲ ಬಿಗ್​ಬಾಸ್ ಮನೆಯಲ್ಲಿ ತಮ್ಮದೇ ಸ್ಟ್ರಾಟರ್ಜಿ ಮೂಲಕ ಎಂಟರ್ಟೈನ್ ಮಾಡಿದ್ದ ಮಾಜಿ ಸದಸ್ಯರು, ದೊಡ್ಮನೆಯನ್ನು ಖಾಲಿ ಮಾಡಿದ್ದಾರೆ. ಅದರ ಎಪಿಸೋಡ್​ ಇಂದು ರಾತ್ರಿ ಪ್ರಸಾರವಾಗಲಿದೆ. ಮನೆಯಿಂದ ಹೊರಡುವ ವೇಳೆ ಬಿಗ್​ ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ ಉಗ್ರಂ ಮಂಜು, ರಜತ್ ಕಿಶನ್ ಸೇರಿದಂತೆ ಐವರೂ ಕೂಡ ಭಾವುಕರಾದರು. ಬಿಗ್​ ಬಾಸ್ ವೇದಿಕೆಗೆ ಇರುವ ಶಕ್ತಿ ಎಂಥದ್ದು ಅನ್ನೋದನ್ನು ಮತ್ತೊಮ್ಮೆ ಅನಾವರಣ ಮಾಡಿದರು. 

ಯಾರು ಏನು ಹೇಳಿದರು..? 

ನಾವು ಸತ್ತ ಮೇಲೂ, ನಮ್ಮ ವಂಶ ಪಾರಂಪರ್ಯ ನೋಡುವಂತಹ ಮೆಮೋರಿಗಳನ್ನು ನೀಡಿದೆ. ಬಿಗ್​ ಬಾಸ್ ಲವ್ ಯೂ ಸೋ ಮಚ್. 

-ರಜತ್ ಕಿಶನ್, ಮಾಜಿ ಸ್ಪರ್ಧಿ

ಕಾರಲ್ಲಿ ಹೋಗ್ತಿರಬೇಕಾದರೆ, ಅಲ್ಲೇ ಹೋಗ್ತಿರೋ ಗವರ್ನಮೆಂಟ್ ಬಸ್ ನಿಲ್ಲಿಸ್ತಾರೆ. ಪ್ರೀತಿ ಕೊಡ್ತಾರೆ. ಎಲ್ಲೋ ಹೋಗಬೇಕಾದರೆ ಮಂಜಣ್ಣ ಅಂತಾರೆ. ಅಷ್ಟು ಕೊಟ್ಟಿದೆ ಬಿಗ್​ ಬಾಸ್. ಸೀಸನ್ 11ಕ್ಕೆ ನಾನು ಬಂದಿಲ್ಲ ಅಂದಿದ್ರೆ ನನ್ನ ಲೈಫ್​ನಲ್ಲಿ ಇಷ್ಟೊಂದು ಬದಲಾವಣೆ ಸಾಧ್ಯವೆ ಆಗ್ತಿರಲಿಲ್ಲ-ಉಗ್ರಂ ಮಂಜು, ಮಾಜಿ ಸ್ಪರ್ಧಿ

ಈ ಮನೆ ನನಗೆ ತಲೆ ಎತ್ತಿ ನಿಲ್ಲೋ ಹಾಗೆ ಮಾಡಿದೆ-ಮೋಕ್ಷಿತಾ ಪೈ, ಮಾಜಿ ಸ್ಪರ್ಧಿ

ಕರ್ಮಗಳನ್ನ ಕಳೆದಂಥ ಜಾಗ ಇದು- ತ್ರಿವಿಕ್ರಂ, ರನ್ನರ್ ಅಪ್

ಬಿಗ್​ ಬಾಸ್​ ಯಾರಿಗೆ ಏನು ಕೊಟ್ಟಿದ್ಯೋ ಗೊತ್ತಿಲ್ಲ. ನನಗೆ ಪುನರ್ಜನ್ಮವೇ ಕೊಟ್ಟಿದೆ-ಚೈತ್ರಾ ಕುಂದಾಪುರ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Bigg boss
Advertisment
Advertisment
Advertisment