ಬಿಗ್​ ಬಾಸ್​ನಿಂದ ಹೊರ ಹೋಗಲು ನಿರ್ಧರಿಸಿದ ಧ್ರುವಂತ್.. ಕಿಚ್ಚನ ಎದುರು ಹೈಡ್ರಾಮಾ..! VIDEO

ಬಿಗ್​ ಬಾಸ್​ ಶೋನಲ್ಲಿ ಇವತ್ತು ‘ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ’ ಸಂಚಿಕೆ ಪ್ರಸಾರವಾಗಿಲಿದೆ. ಇವತ್ತಿನ ಎಪಿಸೋಡ್​​ನಲ್ಲಿ ಧ್ರುವಂತ್ ಅವರು ಶೋ ಅರ್ಧಕ್ಕೆ ಬಿಟ್ಟು ಮನೆಗೆ ಹೋಗೋದಾಗಿ ಕಿಚ್ಚನ ಎದುರು ಹೇಳಿದ್ದಾರೆ. ಇದು ವೀಕ್ಷಕರ ಎಕ್ಸೈಟ್​ಮೆಂಟ್​ ಹೆಚ್ಚಿಸಿದೆ.

author-image
Ganesh Kerekuli
Dhruvant (3)
Advertisment

ಬಿಗ್​ ಬಾಸ್​ ಶೋನಲ್ಲಿ ಇವತ್ತು ‘ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ’ ಸಂಚಿಕೆ ಪ್ರಸಾರವಾಗಿಲಿದೆ. ಇವತ್ತಿನ ಎಪಿಸೋಡ್​​ನಲ್ಲಿ ಧ್ರುವಂತ್ ಅವರು ಶೋ ಅರ್ಧಕ್ಕೆ ಬಿಟ್ಟು ಮನೆಗೆ ಹೋಗೋದಾಗಿ ಕಿಚ್ಚನ ಎದುರು ಹೇಳಿದ್ದಾರೆ. ಇದು ವೀಕ್ಷಕರ ಎಕ್ಸೈಟ್​ಮೆಂಟ್​ ಹೆಚ್ಚಿಸಿದೆ.

ಆಗಿದ್ದೇನು..? 

ಸಂಡೆ ಎಪಿಸೋಡ್​​ನ ಭಾಗವಾಗಿ ಸುದೀಪ್ ಒಂದು ಚಟುವಟಿಕೆ ನೀಡಿದರು. ಸ್ಪರ್ಧಿಗಳ ಮುಂದೆ ಪ್ರಾಣಿಗಳ ಭಾವಚಿತ್ರ ಇರುವ ಪೋಸ್ಟರ್ ಇಡಲಾಗಿತ್ತು. ಅದರ ಬಗ್ಗೆ ವಿವರಿಸಿದ ಸುದೀಪ್, ಒಂದೊಂದು ಪ್ರಾಣಿ, ಪಕ್ಷಿ ಹಾಗೂ ಸರೀಸೃಪಗಳಿಗೂ ಒಂದೊಂದು ಪರ್ಸ್ನಾಲಿಟಿ, ಕ್ಯಾರೆಕ್ಟರ್ ಇದೆ. ನಿಮಗೆ ಅದನ್ನು ಯಾರಿಗೆ ಹಾಕಬೇಕು ಅನಿಸುತ್ತೋ, ಅವರಿಗೆ ಹಾಕಿ ಎಂದಿದ್ದಾರೆ. 

ಇದನ್ನೂ ಓದಿ:ಕಳೆದ ವಾರ ಬಿಗ್​ ಬಾಸ್​​ಗೆ ವೀಕ್ಷಕರು ಕೊಟ್ಟ ಮಾರ್ಕ್ಸ್​ ಎಷ್ಟು..?

Dhruvant (2)

ಅದರಂತೆ ಗಿಲ್ಲಿ ಕೊರಳಿಗೆ ಕಾವ್ಯ ಎಮ್ಮೆ ಭಾವಚಿತ್ರವಿರುವ ಪೋಸ್ಟರ್​ ಹಾಕಿದ್ದಾರೆ. ಅದಕ್ಕೆ ಸುದೀಪ್ ಎಮ್ಮೆ ಚರ್ಮ ಎಂದಿದ್ದಾರೆ. ಇದೇ ಟಾಸ್ಕ್​ನಲ್ಲಿ ಧ್ರುವಂತ್ ಅವರ ಕೊರಳಿಗೆ ಹೆಚ್ಚು ಪೋಸ್ಟರ್​ಗಳು ಬಿದ್ದಿವೆ. ಅದರಲ್ಲಿ ಮುಖ್ಯವಾಗಿ ಧನುಷ್ ಪಾರಿವಾಳ ಹಾಕಿದರೆ ಮತ್ತು ಮಾಳು ಚೇಳು ಹಾಕಿದ್ದಾರೆ. 

ಅದಕ್ಕೆ ವಿವರಣೆ ನೀಡಿರುವ ಧನುಷ್, ನಾನು ಪಾರಿವಾಳ ಕೊಟ್ಟಿದ್ದೀನಿ. ಅಲ್ಲಿರುವ ವಿಚಾರ ಇಲ್ಲಿಗೆ ಬರುತ್ತೆ. ಇಲ್ಲಿರುವ ವಿಚಾರ ಅಲ್ಲಿಗೆ ಬರುತ್ತೆ ಎಂದಿದ್ದಾರೆ. ಇನ್ನು ಮಾಳು ತಮ್ಮ ವಿವರಣೆಯಲ್ಲಿ.. ಒಂದು ಒಳ್ಳೆಯ ಮನುಷ್ಯನ ಹಾಳು ಮಾಡುವುದ ಒಂದು ಉದ್ದೇಶ. ಇವರ ಅನಿಸಿಕೆ, ಇವರ ಅಭಿಪ್ರಾಯ ಬೇರೆಯವರಿಗೆ ಹೋಗಿ ಹೇಳಿ ಹೇಳಿ ಅವರ ತಲೆಯನ್ನೂ ಕೆಡಿಸುತ್ತಾರೆ ಎಂದಿದ್ದಾರೆ. 

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತಿಬ್ಬರು ವೈಲ್ಡ್​ ಕಾರ್ಡ್​ ಎಂಟ್ರಿ..!

ಆಗ ಧ್ರುವಂತ್, ಕೊರಳಿಗೆ ಹಾಕಿದ್ದ ಪೋಸ್ಟರ್​ಗಳನ್ನು ತೆಗೆದು ಕೈಯಲ್ಲಿ ಹಿಡಿದುಕೊಳ್ತಾರೆ. ಇದನ್ನು ಗಮನಿಸಿದ ಸುದೀಪ್, ಧ್ರುವಂತ್ ನೀವು ಅದನ್ನು ಹಾಕಿಕೊಳ್ಳಿ ಎಂದಿದ್ದಾರೆ. ಅದಕ್ಕೆ ನಾನು ಅದನ್ನು ಹಾಕಿಕೊಳ್ಳುವುದಕ್ಕಿಂತ ಶೋನಿಂದ ಹೋಗ್ತೀನಿ ಎಂದಿದ್ದಾರೆ. ಅದಕ್ಕೆ ಸುದೀಪ್ ಗರಂ ಆದಂತೆ ಕಾಣ್ತಿದೆ. ಇಂದು ರಾತ್ರಿ ಪ್ರಸಾರವಾಗಲಿದ್ದು, ಸುದೀಪ್ ಧ್ರುವಂತ್​ಗೆ ಏನು ಹೇಳ್ತಾರೆ? ಮನೆಯಿಂದ ಕಳುಹಿಸಿ ಕೊಡ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Bigg boss bigg boss dhruvanth
Advertisment