/newsfirstlive-kannada/media/media_files/2025/09/30/bigg-boss-1-2025-09-30-08-45-39.jpg)
ಮೊದಲ ದಿನವೇ ಓರ್ವ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿದ್ದ ಬಿಗ್​ಬಾಸ್, ಎರಡನೇ ದಿನವಾದ ಇವತ್ತು ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಬಿಗ್​ಬಾಸ್​ನ ಈ ಟ್ವಿಸ್ಟ್​ಗೆ ವೀಕ್ಷಕರೂ ಎಕ್ಸೈಟ್ ಆಗಿದ್ದಾರೆ. ವಿಷಯ ಏನಪ್ಪ ಅಂದ್ರೆ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆಯಂತೆ.
ಯಾರು ಗೆಲ್ತಾರೆ ಎಂದು ಕಾದು ನೋಡೋದಕ್ಕೆ ನೀವು 100 ದಿನ ಕಾಯಬೇಕಾಗಿಲ್ಲ. ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್​ಬಾಸ್​ ಘೋಷಣೆ ಮಾಡಿದ್ದಾರೆ. ಇಂದು ಬೆಳಗ್ಗೆ ಕಲರ್ಸ್ ಕನ್ನಡ, ವಿಶೇಷ ಪ್ರೊಮೋ ಒಂದನ್ನ ರಿಲೀಸ್ ಮಾಡಿದೆ. ಅದರಲ್ಲಿ ಈ ವಿಚಾರವನ್ನು ಬಿಗ್​ಬಾಸ್​ ತಿಳಿಸಿದ್ದಾರೆ. ಈ ವಿಷಯವನ್ನು ತಿಳಿದ ಸ್ಪರ್ಧಿಗಳು ಗಾಬರಿ ಆಗಿದ್ದಾರೆ. ಇನ್ನು ಪ್ರೊಮೋದಲ್ಲಿ 2 ಫಿನಾಲೆ ಎಂದು ಬರೆಯಲಾಗಿದೆ.
‘ಈ ಸೀಸನ್​​ನಲ್ಲಿ ಯಾರು ಗೆಲ್ತಾರೆ ಎಂದು ನೋಡೋದಕ್ಕೆ 100 ದಿನಗಳ ಕಾಲ ಕಾಯಬೇಕಿಲ್ಲ. ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ. ನಿಮ್ಮಲ್ಲಿ ಯಾರು, ಯಾವಾಗ, ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು. ಗುಂಪು ಗುಂಪಾಗಿಯೂ ಎಲಿಮಿನೇಟ್ ಆಗಬಹುದು. ಎಲಿಮಿನೇಷನ್​​ನಿಂದ ಮುಕ್ತರಾಗಬೇಕು ಅಂದರೆ.. ಅದಕ್ಕೆ ಇರೋದು ಒಂದೇ ದಾರಿ..’ ಎಂದು ಬಿಗ್​ಬಾಸ್ ಹೇಳಿದ್ದಾರೆ.
ಮನೆಯಲ್ಲಿ ಉಳಿದುಕೊಳ್ಳಲು ಇರುವ ದಾರಿಯನ್ನ ಬಿಗ್​ಬಾಸ್ ಹೇಳಿಲ್ಲ. ಸ್ಪರ್ಧಿಗಳು ಚೆನ್ನಾಗಿ ಎಂಟರ್ಟೈನ್​ ಮಾಡಿದ್ರೆ, ಗೇಮ್​​ಗಳನ್ನ ಚೆನ್ನಾಗಿ ಆಡಿದ್ರೆ ಮಾತ್ರ ಉಳಿದುಕೊಳ್ತೀರಿ. ಮಾಡು ಇಲ್ಲವೇ ಮಡಿ ಅನ್ನೋದು ಬಿಗ್​ಬಾಸ್​ನ ಕಿವಿಮಾತಾಗಿದೆ.
ಬಿಗ್ ಬಾಸ್ ಈ ಸೀಸನ್ ಟ್ವಿಸ್ಟ್ ಮಾಸ್ಟರ್.
— Colors Kannada (@ColorsKannada) September 30, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/NeYX5m4IbT
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ