63 ದಿನಗಳ ಕಾಲ ಬಿಗ್​ ಬಾಸ್ ಮನೆಯಲ್ಲಿದ್ದ ಜಾನ್ವಿ ಅವರು ಆಚೆ ಬಂದಿದ್ದಾರೆ. ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಬಿಗ್​ಬಾಸ್ ಮನೆಯ ಜರ್ನಿ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದರು. ಈ ವೇಳೆ ಧ್ರುವಂತ್ ಮೇಲೆ ಗರಂ ಆಗಿದ್ದಾರೆ.
ಧ್ರುವಂತ್​ ಇದ್ದಿದ್ರಲ್ಲಿ ನೇರವಾಗಿ ಹೇಳ್ತಾನೆ. ಅದನ್ನು ನಾವು ಮೆಚ್ಚಬೇಕು. ಅವರು ನಮ್ಮನ್ನು ಡಾಮಿನೇಟ್ ಮಾಡೋಕೆ ಬರುತ್ತಾರೆ. ಅವರ ತೆಕ್ಕೆಗೆ ನಾವು ಸಿಗಲಿಲ್ಲ ಅಂದರೆ ಅವರು ಅಲ್ಲಿಂದ ಹೊರಟು ಹೋಗ್ತಾರೆ. ಅವರು ಕ್ಷಣ ಕ್ಷಣಕ್ಕೂ ಬದಲಾಗುತ್ತ ಇರುತ್ತಾರೆ. ನನ್ನ ಬಗ್ಗೆ ಅದೇನೋ ಆಸ್ತಿ, ಅಂತಸ್ತು ಎಂದಲ್ಲ ಹೇಳಿದರು. ಅವರು ಹಾಗೆ ಹೇಳಿದಾಗ ನನಗೆ ತುಂಬಾ ನಗು ಬಂತು. ಒಬ್ಬನ ಮೈಂಡ್​​ಸೆಟ್ ಈ ಲೇವೆಲ್​ಗೆ ಇರುತ್ತಾ ಅನಿಸಿಬಿಡ್ತು. ಅವರು ಅಷ್ಟೆಲ್ಲ ಯೋಚನೆ ಮಾಡಿದಾಗ ಎಷ್ಟು ಚೀಪ್ ಮೈಂಡ್​ ಸೆಟ್ ಇದೆ ಅನಿಸಿತು. ನನ್ನ ಪ್ರೊಡೆಕ್ಷನ್​​ನಲ್ಲಿ ನಾನು ಅವನಿಗೇ ಕೆಲಸ ಕೊಡ್ತೇನೆ. ಧ್ರುವಂತ್ ಆಚೆ ಬಾ. ನಿನ್ನ ಕೈಯಲ್ಲೇ ಆ್ಯಡ್ ಮಾಡಿಸ್ತೀನಿ. ನಾನು ಯಾವ, ಆಸ್ತಿ ಅಂತಸ್ತು ನೋಡಿಕೊಂಡು ಯಾರ ಸ್ನೇಹನೂ ಮಾಡಲ್ಲ. ಹಾಗೆಲ್ಲ ಇದ್ದರೆ ನನ್ನ ಜೊತೆ ಎಂತೆಂಥವರೋ ಸ್ನೇಹದಲ್ಲಿ ಇರೋರು. ನೀನು ಆಚೆ ಬಾ ಕಂದ.. ನಿನಗೆ ನನ್ನ ಪ್ರೊಡೆಕ್ಷನ್​​ನಲ್ಲೇ ಕೆಲಸ ಮಾಡ್ತೀನಿ ಎಂದಿದ್ದಾರೆ. ಜಾನ್ವಿ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us