/newsfirstlive-kannada/media/media_files/2025/09/28/bigg-boss-house-9-2025-09-28-15-02-22.jpg)
/newsfirstlive-kannada/media/media_files/2025/09/28/bigg-boss-house-7-2025-09-28-15-02-37.jpg)
‘ಓ ಭ್ರಮೆ..’ ಅನ್ನೋ ಟೈಟಲ್ನಿಂದಾನೇ ಸದ್ದು ಮಾಡ್ತಿರೋ ಈ ಬಾರಿಯ ಬಿಗ್ ಬಾಸ್ ಸೀಸನ್ 12 ಜನರ ಕ್ಯೂರಿಯಾಸಿಟಿಯನ್ನ ಹೆಚ್ಚು ಮಾಡಿದೆ. ಪ್ರತಿ ಬಾರಿಯೂ ಹೊಸ ಹೊಸ ಥೀಮ್ನಡಿ ನಡೆಯೋ ಈ ರಿಯಾಲಿಟಿ ಶೋ, ಈ ಬಾರಿ ಇಂಟ್ರೆಸ್ಟಿಂಗ್ ಥೀಮ್ನಡಿ ನಡೆಯುತ್ತಿದೆ. ಇದೀಗ ಬಿಗ್ಬಾಸ್ ಮನೆಗೆ ಸೆಟ್ನ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/09/28/bigg-boss-house-2025-09-28-15-03-13.jpg)
ಈ ಬಾರಿಯ ಕಲರ್ಸ್ ಕನ್ನಡದ ಬಿಗ್ ಬಾಸ್ ಶೋನ ಸೆಟ್ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇದೆ. ಇದನ್ನು ತಣಿಸುವ ಪ್ರಯತ್ನವನ್ನು ಕಲರ್ಸ್ ಕನ್ನಡ ಮಾಡಿದೆ. ಕಲರ್ಸ್ ಕನ್ನಡ ಚಾನಲ್ ಬಿಗ್ ಬಾಸ್ನ ಸೆಟ್ ವಿಡಿಯೋ ಹಾಗೂ ಫೋಟೋಗಳನ್ನ ಬಿಡುಗಡೆ ಮಾಡಿದೆ.
/newsfirstlive-kannada/media/media_files/2025/09/28/bigg-boss-house-1-2025-09-28-15-03-29.jpg)
ಕರುನಾಡನ್ನು ಬಿಂಬಿಸುವ ಬಿಗ್ ಬಾಸ್ ಅರಮನೆಗೆ ಅಧಿಪತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂತ ಟೈಟಲ್ ಕೊಟ್ಟು ವಿಡಿಯೋ ಒಂದು ಅನ್ನು ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದೆ.
/newsfirstlive-kannada/media/media_files/2025/09/28/bigg-boss-house-2-2025-09-28-15-03-43.jpg)
ಬಿಗ್ ಬಾಸ್ ಸೆಟ್ ಅನ್ನು ಮೈಸೂರು ಅರಮನೆಯ ಥೀಮ್ ನಲ್ಲಿ ನಿರ್ಮಾಣ ಮಾಡಿರುವುದು ವಿಶೇಷ. ಮೈಸೂರು ದಸರಾ ನಡೆಯುವಾಗ ಬಿಗ್ ಬಾಸ್ ಶೋ ಆರಂಭವಾಗುತ್ತಿರುವುದಕ್ಕೋ ಏನೋ ಮೈಸೂರು ಅರಮನೆಯ ಥೀಮ್ ನಲ್ಲೇ ಸೆಟ್ ನಿರ್ಮಾಣ ಮಾಡಲಾಗಿದೆ.
/newsfirstlive-kannada/media/media_files/2025/09/28/bigg-boss-house-4-2025-09-28-15-04-02.jpg)
ಬಿಗ್ಬಾಸ್ನ ಸೆಟ್ ಅನ್ನು ಪರಿಚಯಿಸುವ ವಿಡಿಯೋದಲ್ಲಿ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಮ್ಮ ಶ್ರೀಮಂತವಾಗಿರುವ ಕರ್ನಾಟಕವನ್ನು ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದ್ರೆ ನೋಡಲಿಕ್ಕೆ ಹೇಗಿರುತ್ತೆ, ಅಂತ ನೋಡಬೇಕು ಅಂದ್ರೆ, ಹೀಗಿರುತ್ತೆ.
/newsfirstlive-kannada/media/media_files/2025/09/28/bigg-boss-house-5-2025-09-28-15-04-26.jpg)
ಹೀಗೆ ಅರಮನೆಯನ್ನು ಉಳಿಸಿಕೊಳ್ಳಲಿಕ್ಕೆ ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲಿಕ್ಕೆ ಬಹಳ ಯುದ್ಧಗಳು ನಡೆಯಲಿವೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್ ಬಾಯ್ ಮನೆಯಲ್ಲಿ ಮಸ್ತಿ ಹಬ್ಬ ಈಗ ಶುರು ಎಂದು ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ.
/newsfirstlive-kannada/media/media_files/2025/09/28/bigg-boss-house-6-2025-09-28-15-04-44.jpg)
ಇಂದು ಸಂಜೆ 6 ಗಂಟೆಯಿಂದ ಬಿಗ್ ಬಾಸ್ ಶೋ ಆರಂಭವಾಗಲಿದೆ. ಶೋನಲ್ಲಿ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬ ಬಗ್ಗೆ ರಾಜ್ಯದ ಜನರಿಗೂ ಕುತೂಹಲ ಇದೆ.