/newsfirstlive-kannada/media/media_files/2025/11/22/spandana-bigg-boss-2025-11-22-12-22-48.jpg)
ಬಿಗ್​ಬಾಸ್​ ಮನೆಯಲ್ಲಿ ಯಾರಿಗೆ ಎಷ್ಟೊತ್ತಿಗೆ? ಯಾವಾಗ ಕಣ್ಣೀರು ಬರುತ್ತೆ ಎಂದು ಊಹೆ ಮಾಡೋದೇ ಕಷ್ಟ. ಇದೀಗ ದೊಡ್ಮನೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋಡಲು ತುಂಬಾನೇ ಮಜವಾಗಿದೆ.
ವಿಷ್ಯ ಏನು..?
ಗಾರ್ಡನ್ ಏರಿಯಾದಲ್ಲಿರುವ ಸೋಫಾ ಮೇಲೆ ಸ್ಪಂದನಾ ಕೂತು ಅಳುತ್ತಿರುತ್ತಾರೆ. ಇದು ಧನುಷ್ ಕಣ್ಣಿಗೆ ಬೀಳುತ್ತದೆ. ಗಾಬರಿಯಾದ ಧನುಷ್, ಸ್ಪಂದೂ.. ಏನಾಯ್ತು ಅಂತಾ ಬಂದಿದ್ದಾರೆ. ಧನುಷ್ ಅವರನ್ನು ಸಮಾಧಾನ ಮಾಡಲು ಮುಂದಾದಾಗ ಜೋರಾಗಿ ಅತ್ತಿದ್ದಾರೆ.
ಅಲ್ಲಿಗೆ ಕಾವ್ಯ ಮತ್ತು ಸೂರಜ್ ಸಿಂಗ್ ಇಬ್ಬರೂ ಬಂದಿದ್ದಾರೆ. ಯಾಕೆ? ಯಾಕೆ? ಏನಾಯ್ತು ಎಂದು ಕೇಳಿದ್ದಾರೆ. ಆಗ ಅಳುತ್ತಲೇ ಹಾಲು ಪೂರ್ತಿ ಚೆಲ್ಲಿ ಹೋಯ್ತು ಅಂತಾ ಮತ್ತೆ ಕಣ್ಣೀರು ಇಟ್ಟಿದ್ದಾರೆ. ಅದನ್ನು ಕೇಳಿದ ಧನುಷ್ ಅಷ್ಟಕ್ಕೇನಾ? ಹೋಗಲಿ ಬಿಡು ನಾನು ಕೊಡ್ತೀನಿ. ಅಳಬೇಡ ಎಂದಿದ್ದಾರೆ. ಆಗ ಸೂರಜ್ ಸಿಂಗ್ ಕೂಡ, ನಾನೂ ಕೂಡ ಕೊಡ್ತೀನಿ. ಧನು ಅವರೂ ಕೊಡ್ತಾರೆ. ಅದಕ್ಕೆಲ್ಲ ಅಳಬಾರದು ಎನ್ನುತ್ತಾರೆ. ನಂತರ ಸ್ಪಂದನಾ ಸುಮ್ಮನಾಗಿದ್ದಾಳೆ.
ಇನ್ನಷ್ಟು ಸ್ಟೋರಿಗಳಿಗಾಗಿ ಇಲ್ಲಿಕ್ಲಿಕ್ ಮಾಡಿ..
ಸ್ಪಂದನಾ ಅಳೋದು ನಿಲ್ಲಿಸುತ್ತಿದ್ದಂತೆಯೇ ಧನುಷ್, ವಿಷಯ ಹೇಳಿಕೊಂಡು ತಮಾಷೆ ಮಾಡಿದ್ದಾರೆ. ಅಲ್ಲದೇ ಕಾವ್ಯ ಕೂಡ ಜೊರಾಗಿ ನಕ್ಕಿದ್ದಾಳೆ. ಅಸಲಿಗೆ ಎನಾಯ್ತು ಅಂತಾ ತಿಳಿದುಕೊಳ್ಳಲು ಈ ವಿಡಿಯೋ ನೋಡಿ..
ಮುದ್ದು ಪೆದ್ದು ಹುಡ್ಗಿ ಸ್ಪಂದನಾ ಅಳ್ತಾ ಇರೋದು ಏನಕ್ಕೆ ಗೊತ್ತಾ?#bbk12#bbk12live#jiohotstarkannadapic.twitter.com/nW25iZetob
— JioHotStar Kannada (@JHSKannada) November 22, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us