/newsfirstlive-kannada/media/media_files/2025/10/13/spandhana-malu-finalist-1-2025-10-13-14-12-41.jpg)
ಸ್ಪಂದನಾ -ಮಾಳು
ಬಿಗ್​ಬಾಸ್​ ಶೋ ವೀಕ್ಷಕರಿಗೆ ​ Expect the unexpected ಅಂತಾ ಪದೇ ಪದೇ ಸಾಬೀತು ಮಾಡಿದೆ. ನಿನ್ನೆ ನಡೆದ Super sunday with ಬಾದ್​ಷಾ ಸುದೀಪ ಎಪಿಸೋಡಿನಲ್ಲಿ ಯಾರಾಗ್ತಾರೆ ಎಲಿಮಿನೇಷನ್​ ಅಂತಾ ಎಲ್ಲರು ಕಾತುರದಿಂದ ಕಾಯುತ್ತಿದ್ದರು.
ಸುದೀಪ್​ ಒಬ್ಬರನ್ನೆ ಸೇವ್​ ಮಾಡ್ತಾ ಬಂದಿದ್ದಾರೆ..ಕೊನೆಯಲ್ಲಿ ಉಳಿದ ಜಂಟಿಗಳಾದ ಮಾಳು ಹಾಗೂ ಸ್ಪಂದನಾ ಇನ್ನೇನು ಮನೆಯಿಂದ ಹೊರಗೆ ಬಂದರು. ಅನ್ನುವಷ್ಟರಲ್ಲಿ ಸುದೀಪ್​ ತಮ್ಮ ಮುಂದಿನ ಇಟ್ಟಿದ Expect the unexpected ಸೂಟ್​ಕೇಸ್​ ಓಪನ್​ ಮಾಡಲು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/13/spandhana-malu-finalist-2025-10-13-14-14-21.jpg)
ಆ ಬಾಕ್ಸಿನಲ್ಲಿ FINALIST ಬರೆದಿತ್ತು. Expect the unexpected ಸೂಟ್​ಕೇಸ್ ನೋಡಿ ಸ್ಪಂದನಾ ಮಾಳು ಸೇರಿ ಮನೆ ಮಂದಿ ಶಾಕ್​ ಆಗಿದ್ದರು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸೋಕೆ ಈ ವಾರದ ಮಾಡಿದ ನಿಮ್ಮ ವೋಟ್​ಗಳನ್ನ ಮುಂದಿನ ವಾರದ ಫಿನಾಲೆಗೆ ಫೈನಲಿಸ್ಟ್​​ಗಳನ್ನ ಆರಿಸಲು ಜನರ ವೋಟ್​ಗಳನ್ನ ಪರಿಗಣಿಸಲಾಗಿದೆ ಎಂದು ಸುದೀಪ್​ ಹೇಳಿದ್ದಾರೆ.
ನಾಮಿನೇಟ್​ ಆದವರಲ್ಲಿ ಫೈನಲಿಸ್ಟ್​ಗೆ ಸೆಲೆಕ್ಟ್​ ಮಾಡೋಕೆ ಜನರೇ ವೋಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಜಂಟಿಗಳಾದ ಮಾಳು -ಹಾಗೂ ಸ್ಪಂದನಾ ಅವರಿಗೆ ಜನರು ಹೆಚ್ಚು ವೋಟ್​ ಮಾಡಿ ಮೂರನೇ ಫೈನಲಿಸ್ಟ್ ಆಗಿ ಸೆಲೆಕ್ಟ್ ಮಾಡಿದ್ದಾರೆ. ಈ ಬಿಗ್​ ಬಾಸ್​ ಕಾರ್ಯಾಕ್ರಮ ಮತ್ತೆ ಮತ್ತೆ Expect the unexpected ಟ್ವಿಸ್ಟ್ ಟರ್ನಿಂಗ್ಸ್​​ಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ಮಿಡ್ ಸೀಸನ್ ಫಿನಾಲೆ: ಅಕ್ಟೋಬರ್ 18, 19 ರಂದು ಮಿಡ್ ಸೀಸನ್ ಫಿನಾಲೆೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.