/newsfirstlive-kannada/media/media_files/2025/11/08/bigg-boss-2025-11-08-18-02-42.jpg)
ಬಿಗ್‌ಬಾಸ್‌ನಲ್ಲಿ ಈ ವಾರದ ಆಟವೇ ಬೇರೆ ರೀತಿಯಿತ್ತು. ಟಾಸ್ಕುಗಳೇ ಇಲ್ಲದೆ ಒಂದು ವಾರವಿಡೀ ಸ್ಪರ್ಧಿಗಳು ಕಳೆದಿದ್ದರು. ಹೌದು ಟಾಸ್ಕ್ ಏನೋ ಇರಲಿಲ್ಲ ಆದರೆ ಅದಕ್ಕಿಂತಲೂ ಟಫ್ ಆದ ವ್ಯಕ್ತಿತ್ವದ ಪರೀಕ್ಷೆ ನಡೆದಿತ್ತು ಇದರಲ್ಲಿ ಪಾಸ್ ಯಾರು? ಫೇಲ್ ಯಾರು?
ಸುದೀಪ್ ಕಳೆದ ಕಿಚ್ಚನ ಪಂಚಾಯ್ತಿಯಲ್ಲಿ ಹೇಳಿದಂತೆ ಕಳೆದ ಒಂದು ವಾರ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್ ಇರಲಿಲ್ಲ. ಅಲ್ಲದೇ ಎಲ್ಲ ಸ್ಪರ್ಧಿಗಳೂ ನಾಮಿನೇಟ್ ಆಗಿದ್ದರು. ಹೀಗಿರುವಾಗ ನಾಮಿನೇಷನ್‌ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರು.
ಆದ್ರೆ ಈ ಅವಕಾಶಗಳು ಸ್ಪರ್ಧಿಗಳು ಎಲಿಮಿನೇಷನ್‌ನಿಂದ ಉಳಿದುಕೊಳ್ಳಲಿ ಎಂದು ಮಾತ್ರವಲ್ಲ ಇದೊಂದು ವ್ಯಕ್ತಿತ್ವ ಪರೀಕ್ಷೆಯೂ ಆಗಿತ್ತು. ಮುಖಕ್ಕೆ ಮಸಿ ಬಳಿದು ಬಿಗ್‌ಬಾಸ್ ಮನೆಯಲ್ಲಿರಲು ಯಾರು ಅರ್ಹರಲ್ಲ ಎಂದು ಹೇಳಬೇಕಾಗಿದ್ದು ಇರಬಹುದು, ಸ್ಪರ್ಧಿಗಳ ಮನೆಯಿಂದ ಬಂದ ಪತ್ರಗಳನ್ನು ಬಿಟ್ಟುಕೊಡುವ ಅವಕಾಶವೂ ಇರಬಹುದು. ಎಲ್ಲವೂ ವ್ಯಕ್ತಿತ್ವ ಪರೀಕ್ಷೆಯೇ ಆಗಿತ್ತು. ಇದರಲ್ಲಿ ಪಾಸ್ ಆಗಿದ್ದು ಯಾರು? ಫೇಲ್ ಆಗಿ ಮನೆ ಕಡೆ ಮುಖ ಮಾಡ್ತಿರೋರು ಯಾರು? ನೋಡಿ ಕಿಚ್ಚನ ವಾರದ ಕಥೆಯಲ್ಲಿ.
ಇದನ್ನೂ ಓದಿ:ರಕ್ಷಿತಾ ನಿಜವಾಗಿಯೂ ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ಮತ್ತೊಮ್ಮೆ ಅಶ್ವಿನಿ ಗೌಡರ ಮುಖವಾಡ ಕಳಚಿದ ಸುದೀಪ್..! VIDEO
ವ್ಯಕ್ತಿತ್ವದ ಪರೀಕ್ಷೆಯಲ್ಲಿ ಯಾರು ಪಾಸ್? ಯಾರಿಗೆ ಗೇಟ್ಪಾಸ್?
— Colors Kannada (@ColorsKannada) November 8, 2025
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/FF1cTgq5Gj
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us