ಈ ಸಲ ಕಪ್ ಯಾರದ್ದು..? ‘ಬಿಗ್’​ ವೀಕ್ಷಕರು ಏನು ಹೇಳ್ತಿದ್ದಾರೆ..?

ಯಾರ ಬಾಯಲ್ಲಿ ಕೇಳಿದ್ರೂ ಗಿಲ್ಲಿ. ಬಿಗ್​ ಮನೆಯಲ್ಲಿ ಗಿಲ್ಲಿಯನ್ನ ಸಿಲ್ಲಿ ಮಾಡಿ, ಹಳ್ಳಿಗೆ ಕಳ್ಸ್​ಬೇಕು ಅನ್ನೋ ಘಟಾನುಘಟಿಗಳು ಒಬ್ರಲ್ಲ ಇಬ್ರಲ್ಲ. ಅಂಥವರನ್ನೇ ಹಿಂದಿಟ್ಟು, ಗಿಲ್ಲಿ ಮಾಡಿದ ದಂಡಯಾತ್ರೆ ಮಾಮೂಲಿಯದ್ದಲ್ಲ. ಕರುನಾಡ ಜನರ ಬಾಯಲ್ಲಿ ಗಿಲ್ಲಿ ಹೆಸ್ರು ದಾಳಿ ನಡೆಸ್ತಿರೋದ್ಯಾಕೆ?

author-image
Ganesh Kerekuli
Advertisment

ಬಿಲ್ಲು ಬಾಣಗಳನ್ನ ಹಿಡಿದು ಗೆದ್ದವರಿದ್ದಾರೆ. ಬುಲೆಟ್ಸು ಬಾಂಬ್ಸ್​​​ಗಳನ್ನ ಹಿಡಿದು ಗೆದ್ದವರಿದ್ದಾರೆ. ಬಟ್​ ಗಿಲ್ಲಿ ಮಾತ್ರ ಪಂಚ್​ಗಳ ಬಾಣಗಳಿಂದ.. ಡೈಲಾಗ್ಸ್​ಗಳ ಬಾಂಬ್ಸ್​ಗಳಿಂದ ಗೆಲ್ಲುವ ಹಂತಕ್ಕೆ ಬಂದಿದ್ದಾನೆ. ಬಟ್​ ಫಿನಾಲೆ ಎಂಡ್​ ಟೈಮ್​ನಲ್ಲಿ ಗಿಲ್ಲಿ ಯಡವಟ್ಟು ಮಾಡ್ತಿದ್ದಾರಾ? ಈ ಯಡವಟ್ಟಿನ ಆಟ ಗಿಲ್ಲಿಯನ್ನ ಸೋಲಿನ ಕಡೆ ವಾಲಿಸುತ್ತಾ? 

ಗಿಲ್ಲಿ ಗಿಲ್ಲಿ ಗಿಲ್ಲಿ.. ಯಾರ ಬಾಯಲ್ಲಿ ಕೇಳಿದ್ರೂ ಗಿಲ್ಲಿ. ಬಿಗ್​ ಮನೆಯಲ್ಲಿ ಗಿಲ್ಲಿಯನ್ನ ಸಿಲ್ಲಿ ಮಾಡಿ, ಹಳ್ಳಿಗೆ ಕಳ್ಸ್​ಬೇಕು ಅನ್ನೋ ಘಟಾನುಘಟಿಗಳು ಒಬ್ರಲ್ಲ ಇಬ್ರಲ್ಲ. ಅಂಥವರನ್ನೇ ಹಿಂದಿಟ್ಟು, ಗಿಲ್ಲಿ ಮಾಡಿದ ದಂಡಯಾತ್ರೆ ಮಾಮೂಲಿಯದ್ದಲ್ಲ. ಅಷ್ಟಕ್ಕೂ ಈಗ ಕರುನಾಡ ಜನರ ಬಾಯಲ್ಲಿ ಗಿಲ್ಲಿ ಹೆಸ್ರು ದಾಳಿ ನಡೆಸ್ತಿರೋದ್ಯಾಕೆ? ಗಿಲ್ಲಿನೇ ಗೆಲ್ಲೋದು ಅಂತಿರೋದಕ್ಕೆ ಕಾರಣ ಏನು? 

ಟಾಸ್ಕ್​ ಗೆಲ್ಲಲೇಬೇಕು ಅಂತ ಅಖಾಡಕ್ಕೆ ಇಳಿದಿದ್ದ ಗಿಲ್ಲಿ ಮಕಾಡೆ ಮಲಗಿಬಿಟ್ಟಿದ್ದ. ಬಟ್​ ಬಿಗ್​ಬಾಸ್​ ಮನೆಯಲ್ಲಿ ಈ ಟಾಸ್ಕ್​ ಗಿಲ್ಲಿ ಸೋತಿರ್ಬೋದು ಬಟ್​ ಕರುನಾಡ ಜನ ಮಾತ್ರ ಈ ಬಾರಿ ಬಿಗ್​ಬಾಸ್​ ಕಪ್​ ಗಿಲ್ಲಿದೇ ಅಂತಿದಾರೆ. ಗಿಲ್ಲಿ ಈ ಬಾರಿಯ ಬಿಗ್​ಬಾಸ್​ಗೆ ಬಂದಿದ್ದು ಶೋಗೆ ಶೋಭೆ ತಂದಿದೆ ಎನ್ನಲಾಗ್ತಿದೆ. ಯಾಕಂದ್ರೆ ಹಳ್ಳಿ ಹಳ್ಳಿಗೂ ಬಿಗ್​ಬಾಸ್ ಹೌಸ್​​​ ಮನೆಯಾಗಿಬಿಟ್ಟಿದೆ. ಈ ಬಾರಿ ಗಿಲ್ಲಿನೇ ಕಪ್​ ಗೆಲ್ಬೇಕು ಅನ್ನೋದು ಜನರ ಅಭಿಪ್ರಾಯವಾಗಿದೆ. 

ಬಟ್ ಮಾತಿಂದ ಅಭಿಮಾನದ ಕೋಟೆ ಕಟ್ಬೋದು ಅಂತ ​ ಗಿಲ್ಲಿ ನಿದರ್ಶನ ಕೊಟ್ಟಿದಾರೆ. ದೊಡ್ಡ ದೊಡ್ಡ ಕಲಾ ಶೂರರನೇ ಸರಿಗಟ್ಟಿ ಮುನ್ನುಗ್ಗುತಿರೋ ಗಿಲ್ಲಿ.. ಜನರ ಎಕ್ಸ್​​ಪೆಕ್ಟೇಷನ್​ನನ್ನ ಮುಟ್ತಾರಾ? ನಿರಾಸೆ ಉಳಿಸ್ತಾರಾ?.. ಗುಡ್ಡ್ ಆಗಿ ಎಂಟ್ರಿ ಕೊಟ್ಟು.. ಬ್ಯಾಡ್​ ಆಗಿ ಆಡಿ.. ಅಗ್ಲಿಯಾಗಿ ಹೊರಬಂದ್ಬಿಡ್ತಾರಾ? ಕೆಲವೇ ದಿನಗಳಲ್ಲಿ ರಿವಿಲ್​ ಆಗಲಿದೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bigg Boss Kannada 12 Ashwini Gowda Bigg Boss Gilli Nata Bigg boss Ashwini Gowda
Advertisment