/newsfirstlive-kannada/media/media_files/2025/10/19/big-boss-19-2025-10-19-08-56-22.jpg)
ಬಿಗ್‌ಬಾಸ್‌ನಲ್ಲಿ ಬಿಬಿ ಫೆಸ್ಟ್ ಕಳೆ ಕಟ್ಟಿದೆ. ಎಲ್ಲ ಸ್ಪರ್ಧಿಗಳು ತಮ್ಮ ಬೆಸ್ಟ್ ತೋರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಈ ನಡುವೆ ಸ್ಟೂಡೆಂಟ್ ಆಫ್ ದಿ ವೀಕ್ ಅನಿಸಿಕೊಳ್ಳಲು ಎಲ್ಲರೂ ಯತ್ನಿಸುತ್ತಿದ್ದು, ಇದೇ ಮಿತ್ರರನ್ನೂ ಶತ್ರುಗಳನ್ನಾಗಿ ಮಾಡುತ್ತಾ? 
ಬಿಗ್‌ಬಾಸ್‌ನಲ್ಲಿ ಕೆಲ ಟಾಸ್ಕ್‌ಗಳ ಮೂಲಕ ಸ್ಟೂಡೆಂಟ್ ಆಫ್ ದಿ ವೀಕ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಮನೆಯವರಿಗೆ ನೀಡಿತ್ತು, ಇದೀಗ ಅಭ್ಯರ್ಥಿಗಳಿಗೆ ಸ್ಟೂಡೆಂಟ್ ಆಫ್ ದಿ ವೀಕ್ ಟಾಸ್ಕ್‌ನ್ನು ನೀಡಿದ್ದು, ಇದ್ರಲ್ಲಿ ಗೆಲ್ಲೋರೆ ಸ್ಟೂಡೆಂಟ್ ಆಫ್ ದಿ ವೀಕ್ ಅನಿಸಿಕೊಳ್ಳಲಿದ್ದಾರೆ 
ಇದಕ್ಕಾಗಿಯೇ ಬಿಗ್‌ಬಾಸ್ ಸ್ಪೆಷಲ್ ಟಾಸ್ಕ್‌ನ್ನು ನೀಡಿದ್ದು, ಎಲ್ಲ ಅಭ್ಯರ್ಥಿಗಳು ತಮ್ಮ ಎರಡೆರಡು ಫೋಟೋವನ್ನು ಬೇರೆ ಯಾರಿಗೂ ಸಿಗದ ರೀತಿಯಲ್ಲಿ ಬಚ್ಚಿಡಬೇಕು. ಅಭ್ಯರ್ಥಿಗಳ ಬೆಂಬಲಿಗರು ಈ ಫೋಟೋಗಳನ್ನು ಹುಡುಕಿ ತಂದು ಫ್ರೇಮ್‌ನೊಳಗೆ ಹಾಕಬೇಕು. ಎಕ್ಸ್ ಮಾರ್ಕ್‌ನೊಳಗೆ ಫೋಟೋ ಇರುವ ಅಭ್ಯರ್ಥಿಗಳು ಓಟದಿಂದ ಔಟಾದರೆ ಖಾಲಿ ಫ್ರೇಮ್‌ನಲ್ಲಿ ಯಾರ ಫೋಟೋ ಇರುತ್ತದೆಯೋ ಅವರು ಸ್ಟೂಡೆಂಟ್ ಆಫ್ ದಿ ವೀಕ್ ಆಗಿ ಆಯ್ಕೆಯಾಗುತ್ತಾರೆ. 
ಸ್ಪರ್ಧಿಗಳು ಹಾಗೂ ಅವರ ಬೆಂಬಲಿಗರು ತಮ್ಮ ಸ್ಪರ್ಧಿಯನ್ನು ಗೆಲ್ಲಿಸಲು ಎಲ್ಲ ಪ್ರಯತ್ನವನ್ನೂ ಮಾಡುತ್ತಾರೆ. ಆದ್ರೆ ದ್ರುವಂತ್‌ನ್ನು ತಡೆಯುವ ಯತ್ನದಲ್ಲಿ ಮಾಳು ಹಾಗೂ ಸೂರಜ್ ಅವರನ್ನು ಎಳೆದು ಕಿತ್ತಾಡಿ ಬಿಡುತ್ತಾರೆ. ಇಷ್ಟೆಲ್ಲ ಕಿತ್ತಾಟಗಳ ಬಳಿಕ ಈ ಗೇಮ್‌ನಲ್ಲಿ ಗೆದ್ದು ಸ್ಟೂಡೆಂಟ್ ಆಫ್ ದಿ ವೀಕ್ ಅನಿಸಿಕೊಂಡಿದ್ದು ಯಾರು? ಇದನ್ನು ಇಂದಿನ ಎಪಿಸೋಡ್‌ನಲ್ಲಿ ನೋಡಿ. 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


