ಬಿಗ್ ಬಾಸ್​ ಮನೆಯಲ್ಲಿ ಗಿಲ್ಲಿ ಕಾವ್ಯ ಜೋಡಿ ಸಖತ್ ಕಮಾಲ್ ಮಾಡಿತ್ತು. ಮನೆಯಲ್ಲಿದ್ದ ವೇಳೆ ಎಲ್ಲರೂ ಗಿಲ್ಲಿಯಿಂದ ಕಾವ್ಯ ಎಂದೆಲ್ಲ ಹೇಳ್ತಿದ್ದರು. ಮನೆಯವರ ಕಟು ಮಾತನ್ನು ಕಾವ್ಯ ಅರಗಿಸಿಕೊಂಡಿದ್ದು ಹೇಗೆ ಅನ್ನೋದನ್ನು ತಿಳಿಸಿದ್ದಾರೆ.
ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿರುವ ಅವರು, ಯಾರು ಏನೇ ಹೇಳಲಿ. ಅದರ ಬಗ್ಗೆ ನಾನು ತಲೆ ಕಡಿಸಿಕೊಳ್ಳಲ್ಲ. ಇನ್ನೊಂದು ಮಾತು ಹೇಳ್ತೀನಿ. ಫಸ್ಟ್​ ಜಂಟಿಯಾಗಿ ಹೋಗಿದ್ದು ನಾವಿಬ್ಬರೇ. ಕೊನೆ ಜಂಟಿಯಾಗಿ ಮನೆಯಿಂದ ಹೊರಗೆ ಬಂದಿದ್ದೂ ನಾವಿಬ್ಬರೇ.
ನನಗೆ ಬೇಜಾರು ಆಗುತ್ತಿತ್ತು. ನನಗೆ ಗಿಲ್ಲಿಯಿಂದ ಯಾವುದೇ ಪ್ರಾಬ್ಲಂ ಆಗುತ್ತಿರಲಿಲ್ಲ. ಆದರೆ ಆಟದ ಮೇಲೆ ತೊಂದರೆ ಆಗುತ್ತಿದೆ ಅನ್ನೋದು ನನಗೆ ಗೊತ್ತಾಯ್ತು. ನಾನು ಬಿಗ್ ಬಾಸ್​ಗೆ ಹೋಗಬೇಕಾದರೂ ಒಬ್ಬಂಟಿಯಾಗಿ ಹೋಗಬೇಕು ಅಂದ್ಕೊಂಡಿದ್ದೆ. ಅದೇ ರೀತಿ ಇರೋಕೆ ಟ್ರೈ ಮಾಡಿದೆ ಎಂದಿದ್ದಾರೆ.
ಇದೇ ವೇಳೆ ಗಿಲ್ಲಿ ಅಭಿಮಾನಿಗಳು ಅವರಿಗೆ ಎಷ್ಟು ಬೆಂಬಲ ನೀಡಿದರೋ, ಅಷ್ಟೇ ಬೆಂಬಲ ನಿಮಗೂ ನೀಡಿದ್ದಾರೆ. ನೀವು ಗಿಲ್ಲಿ ಅವರ ಊರಿಗೆ ಹೋಗ್ತೀರಾ ಎಂದು ಕೇಳಿದ್ದಾರೆ. ಒಮ್ಮೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us