/newsfirstlive-kannada/media/media_files/2025/10/01/big-boss-satish-2025-10-01-15-51-27.jpg)
ಮೇಕಪ್ ಪ್ರಿಯ ಸತೀಶ್ @ ಸಂತೂರ್ ಡ್ಯಾಡಿ ಸತೀಶ್
ಸಂತೂರ್ ಡ್ಯಾಡಿ ಸತೀಶ್‌ರ ಮೇಕಪ್ ಕ್ರೇಜ್ ಎಲ್ಲರಿಗೂ ಗೊತ್ತಿರೋದೆ. ಆದ್ರೆ ಇದೇ ಮೇಕಪ್ ಮನೆಯಲ್ಲಿ ದೊಡ್ಡ ಯುದ್ಧವನ್ನೇ ಸೃಷ್ಟಿಸಿದೆ. ಸತೀಶ್‌ಗೆ ಕಾದು ಕಾದು ರೋಸಿ ಹೋಗಿರುವ ಚಂದ್ರಪ್ರಭ ಈಗ ರೆಬೆಲ್ ಆಗಿದ್ದಾರೆ.
ಚಂದ್ರಪ್ರಭರ ಜಂಟಿ ಜೋಡಿಯಾಗಿ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಸತೀಶ್ ಅವರ ಆಟದಿಂದ ಎಷ್ಟು ಸುದ್ದಿಯಾಗಿದ್ದಾರೋ ಗೊತ್ತಿಲ್ಲ. ಅವರ ಮೇಕಪ್, ಬ್ಯೂಟಿ ಕಾನ್ಶಿಯಸ್‌ನಿಂದಲೇ ಎಲ್ಲರೂ ಹುಬ್ಬೇರುವಂತೆ ಮಾಡಿದ್ರು. ಇದೀಗ ಇವರ ಈ ಮೇಕಪ್ಪೇ ಜಂಟಿ ಜೋಡಿ ಚಂದ್ರಪ್ರಭ ಅವರನ್ನು ಕೆರಳುವಂತೆ ಮಾಡಿದೆ.
ಬೆಳಗ್ಗೆ ಎದ್ದಾಗಿನಿಂದ ಬಾತ್‌ರೂಂ ಎದುರಲ್ಲೇ ಕಾದು ಕಾದು ಸುಸ್ತಾದ ಚಂದ್ರಪ್ರಭ ಸತೀಶ್‌ಗೆ ಬೇಗ ಬರುವಂತೆ ರಿಕ್ವೆಸ್ಟ್ ಮಾಡಿದ್ರೂ ಕೇಳದ ಸತೀಶ್‌ರ ವರ್ತನೆ ಚಂದ್ರಪ್ರಭಗೆ ಕೋಪ ತರಿಸಿದೆ. ಕೋಪದಿಂದ ಬೆಲ್ಟ್ ಬಿಚ್ಚಿ ನೀರು ಕುಡಿಯಲು ಅಡುಗೆ ಮನೆಗೆ ಹೋಗೋ ಚಂದ್ರಪ್ರಭರನ್ನು ಸಮಾಧಾನ ಮಾಡಲು ಅಸುರ ರಾಜನೇ ಯತ್ನಿಸಿದರೂ ಆ ಪ್ರಯತ್ನವೂ ವಿಫಲವಾಗಿದೆ. ಸತೀಶ್‌ಗೆ ಬೇಗ ಬರಲು ಹೇಳಿ ಎಂದು ಚಂದ್ರಪ್ರಭ ಕೋಪದಿಂದ ನೀರು ಕುಡಿಯೋ ಗ್ಲಾಸನ್ನೇ ಒಡೆದು ಹಾಕಿದ್ದಾರೆ.
ಇದೇ ಜಗಳ ಬಾತ್‌ರೂಂನ ಎದುರಲ್ಲೂ ಮುಂದುವರಿದಿದ್ದು, ಚಂದ್ರಪ್ರಭ ಏನೇ ಹೇಳಿದರೂ ಸತೀಶ್ ಮಾತ್ರ ಕೇಳೋಕೆ ರೆಡೀನೆ ಇರಲ್ಲ. ತನ್ನ ಮೇಕಪ್ ತಮ್ಮ ರುಟೀನ್ ಕಂಪ್ಲೀಟ್ ಆಗೋವರೆಗೂ ತಾನು ಹೊರಗೆ ಬರೋದೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳ್ತಾರೆ. ಇದನ್ನು ಕೇಳಿದ ಚಂದ್ರಪ್ರಭ ಹಾಗಾದ್ರೆ ತಾನು ಹೀಗೆ ಗಂಟೆಗಟ್ಟಲೆ ಕಾಯಲೇಬೇಕಾ ಎಂದು ಕೇಳಿದ್ದಕ್ಕೆ ಕಾಯ್ಲೇಬೇಕು ಎಂದು ಹೇಳಿದ್ದಾರೆ.
ಚಂದ್ರಪ್ರಭ ಸಪೋರ್ಟ್‌ಗೆ ನಿಂತ ಧನುಷ್ ಮೇಲೆಯೂ ಸತೀಶ್ ರೇಗಾಡಿದ್ದು, ಅವರ ನಡುವೆಯೂ ಮಾತಿಗೆ ಮಾತು ಬೆಳೆದಿದೆ. ಈ ವಾಗ್ಯುದ್ದ ಯಾವ ಮಟ್ಟಕ್ಕೆ ಹೋಗಿದೆ ಅನ್ನೋದನ್ನು ಇವತ್ತಿನ ಸಂಚಿಕೆಯಲ್ಲಿ ನೋಡಬೇಕಷ್ಟೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.