/newsfirstlive-kannada/media/media_files/2026/02/19/kishan-10-2026-02-19-16-21-17.jpg)
/newsfirstlive-kannada/media/media_files/2026/02/19/kishan-2026-02-19-16-21-17.jpg)
ಕಿಶನ್ ಶಿವನ ಅವತಾರ
ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಯಾರದ್ದೇ ಜೊತೆ ಡ್ಯಾನ್ಸ್ ಮಾಡಿದ್ರು ಅಲ್ಲೊಂದು ಅದ್ಭುತ, ಕುತೂಹಲ ಇದ್ದೇ ಇರುತ್ತೆ. ಅದ್ರಂತೆ ಕಿಶನ್, ಶಿವರಾತ್ರಿ ಪ್ರಯುಕ್ತ ಶಿವನ ಅವತಾರಾದಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2026/02/19/kishan-1-2026-02-19-16-21-17.jpg)
ದಿಶಾ ಮದನ್ ಜೊತೆ ಹೆಜ್ಜೆ
ಅದ್ರಲ್ಲೂ ಕಿಶನ್ ಲಕ್ಷ್ಮೀ ನಿವಾಸ ಧಾರವಾಹಿಯ ಭಾವನಾ ಅಂದ್ರೆ ನಟಿ ದಿಶಾ ಮದನ್ ಜೊತೆ ಹೆಜ್ಜೆ ಹಾಕಿದ್ದಾರೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿ, ಕನ್ನಡ ಕಿರುತೆರೆ ನಟ ಕಿಶನ್ ಬಿಳಗಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.
/newsfirstlive-kannada/media/media_files/2026/02/19/kishan-2-2026-02-19-16-21-17.jpg)
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುವುದರಲ್ಲಿ ನಂಬರ್ ಒನ್
/newsfirstlive-kannada/media/media_files/2026/02/19/kishan-3-2026-02-19-16-21-17.jpg)
ಶಿವತಾಂಡವ
ಕಿಶನ್ ಆಗಾಗ ನಟಿಯರೊಂದಿಗೆ ಡ್ಯಾನ್ಸ್ ಮಾಡುವ ರೀಲ್ಸ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಿಶನ್ ಲಕ್ಷ್ಮೀ ನಿವಾಸ ಧಾರವಾಹಿಯ ಭಾವನಾ ಅಂದ್ರೆ ನಟಿ ದಿಶಾ ಮದನ್ ಜೊತೆ ಶಿವರಾತ್ರಿ ಪ್ರಯುಕ್ತ ಡ್ಯುಯೆಟ್ ಮಾಡಿದ್ದಾರೆ.
/newsfirstlive-kannada/media/media_files/2026/02/19/kishan-4-2026-02-19-16-21-17.jpg)
ಶಿವನ ಅವತಾರದಲ್ಲಿ ಕಿಶನ್
ಶಿವನ ಪರಮಭಕ್ತನಾಗಿರುವ ಕಿಶನ್, ಪ್ರತಿವರ್ಷವು ಶಿವನ ಅವತಾರದಲ್ಲಿ ಕಾಣಿಸಿಕೊಳ್ತಾರೆ. ಕಳೆದ ವರ್ಷ ಶಿವರಾತ್ರಿ ಪ್ರಯುಕ್ತ, ಕೊರಳಲ್ಲಿ ರುದ್ರಾಕ್ಷಿ, ಹಣೆಗೆ ವಿಭೂತಿ, ಕೈಯಲ್ಲಿ ಡಮರು ಇಟ್ಟುಕೊಂಡು ಥೇಟ್ ಶಿವನಂತೆ ಶಿವನೇ ನಿನ್ನ ಆಟ ಬಲ್ಲವರು ಯಾರು ಅಂತಾ ಡ್ಯಾನ್ಸ್ ಮಾಡಿದ್ರು.
/newsfirstlive-kannada/media/media_files/2026/02/19/kishan-9-2026-02-19-16-21-17.jpg)
ನಮ್ರತಾ ಗೌಡ ಜೊತೆಗೂ ಹೆಜ್ಜೆ
ಜೊತೆಗೆ ಶಿವ-ಪಾರ್ವತಿಯರಾಗಿ ನಮ್ರತಾ ಗೌಡ ಹಾಗೂ ಕಿಶನ್ ಅದ್ಭುತವಾಗಿ ಹೆಜ್ಜೆ ಹಾಕಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಶಿವರಾತ್ರಿಯ ಪ್ರಯುಕ್ತ ಶಿವನ ಅವತಾರದಲ್ಲಿ ಕಿಶನ್ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2026/02/19/kishan-7-2026-02-19-16-21-17.jpg)
ಮನಸೋತ ಅಭಿಮಾನಿಗಳು
ನಟಿ ದಿಶಾ ಮದನ್ರೊಂದಿಗೆ ನೃತ್ಯ ಮಾಡಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಏಳಮ್ಮಾ ತುಳಸಿ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದು, ಇಬ್ಬರ ನೃತ್ಯ ಕಂಡು ಅಭಿಮಾನಿಗಳು ಮನಸೋತಿದ್ದಾರೆ. ಇನ್ನು ಕಿಶನ್ ತೆರೆಹಿಂದಿನ ದೃಶ್ಯವನ್ನ ಕೂಡ ಹಂಚಿಕೊಂಡಿದ್ದಾರೆ..
/newsfirstlive-kannada/media/media_files/2026/02/19/kishan-8-2026-02-19-16-21-17.jpg)
ಚಿಕ್ಕಮಗಳೂರಿನ ಕಿಶನ್
ನೃತ್ಯಕ್ಕಾಗಿ ಕಿಶನ್ ಮಾಡ್ತಿರುವ ಹಾರ್ಡ್ವರ್ಕ್ನ್ನ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಡಾನ್ಸರ್ ಕಿಶನ್ ಬಿಳಗಲಿ ಕಿಶನ್ ಅವರು ಚಿಕ್ಕಮಗಳೂರಿನವರಗಿದ್ದಾರೆ. ಬಿಗ್ಬಾಸ್ 7ರಿಂದ ಸಖತ್ ಫೇಮಸ್ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ.
/newsfirstlive-kannada/media/media_files/2026/02/19/kishan-11-2026-02-19-16-26-53.jpg)
ಸಿದ್ದೇಗೌಡ್ರ ಮುದ್ದಿನ ಹೆಂಡ್ತಿ
ಅಲ್ಲದೇ ಧಾರವಾಹಿಯಲ್ಲೂ ನಟಿಸಿ ವೀಕ್ಷಕರ ಮನೆಗೆದಿದ್ದಾರೆ.ಇನ್ನು, ನಟಿ ದಿಶಾ ಮದನ್ ಅಂದ್ರೆ ಲಕ್ಷ್ಮೀನಿವಾಸ ಸೀರಿಯಲ್ ಭಾವನಾ, ಸಿದ್ದೇಗೌಡ್ರ ಮುದ್ದಿನ ಹೆಂಡ್ತಿ. ಕಳೆದ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ ಮೂಲಕ ಮಿಂಚುವ ಮೂಲಕ ಕರುನಾಡಿಗೂ ಕೀರ್ತಿ ತಂದಿದ್ರು.
/newsfirstlive-kannada/media/media_files/2026/02/19/kishan-6-2026-02-19-16-21-17.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us