/newsfirstlive-kannada/media/media_files/2025/10/25/mallamma-2025-10-25-17-44-47.png)
Photograph: (colors kannada)
ಅಂತು ಇಂತು ನಾಲ್ಕು ವಾರಗಳ ಬಳಿಕ ಬಿಗ್​ ಬಾಸ್​ಮನೆಯಲ್ಲಿ ಒಬ್ಬರು ಕ್ಯಾಪ್ಟನ್ ಆಗಿದ್ದಾರೆ. ಆದರೆ ಟ್ವಿಸ್ಟ್ ಏನಂದ್ರೆ 1 ತಿಂಗಳು ಬಿಗ್​ ಬಾಸ್​ ಮನೆಯಲ್ಲಿ ಇದ್ದು, ಆಟಗಳನ್ನ ಆಡ್ತಿದ್ದವರಿಗೆ ಕ್ಯಾಪ್ಟನ್ ಪವರ್ ಸಿಕ್ಕಿಲ್ಲ ಬದಲಿಗೆ ವೈಲ್ಡ್ ಕಾರ್ಡ್​ ಎಂಟ್ರಿ ಕೊಟ್ಟಿರುವ ಕ್ವಾಟ್ಲೆ ಕಿಚನ್ ವಿನ್ನರ್ ರಘು ಮ್ಯೂಟಂಟ್ ಕನ್ನಡ ಬಿಗ್​ ಬಾಸ್​ ಸೀಸನ್ 12ರ ಮೊದಲ ಕ್ಯಾಪ್ಟನ್ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/10/25/raghu-2025-10-25-17-41-59.png)
ಪ್ರತೀ ವಾರಂತ್ಯದಲ್ಲಿ ಉತ್ತಮ & ಕಳಪೆಯನ್ನ ನಿರ್ಧರಿಸಲಾಗುತ್ತೆ ಇದೇ ವಿಚಾರಕ್ಕೆ ಇಷ್ಟು ದಿನ ಅಮ್ಮ, ಮಗನಂತೆ ಅನ್ಯೂನ್ಯವಾಗಿ ಇದ್ದ ಧ್ರುವಂತ್ & ಮಲ್ಲಮ್ಮನ ನಡುವೆ ಬಿರುಕು ಮೂಡಿದ್ದು, ಧ್ರುವಂತ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/25/dhruvanth-ashwini-2025-10-25-17-42-12.png)
ಮನೆಯವರ ಬಹುಮತದ ಅಯ್ಕೆಯ ಮೇರೆಗೆ ಈ ವಾರದ ಕಳಪೆ ಅಶ್ವಿನಿ ಗೌಡ & ಉತ್ತಮ ಧ್ರುವಂತ್ ಎಂದು ಘೋಷಿಸಲಾಗಿದೆ. ಕಾವ್ಯಾ, ಚಂದ್ರಪ್ರಭ, ಗಿಲ್ಲಿ ನಟ, ಅಭಿಷೇಕ್, ಮಲ್ಲಮ್ಮ, ರಿಷಾ, ಧನುಷ್ & ರಘು ವೋಟ್​ಗಳಿಂದ ಧ್ರುವಂತ್​ಗೆ ಉತ್ತಮ ಎಂಬ ಪದಕ ಸಿಕ್ಕಿತು. ಮೆಡಲ್ ಪಡೆದ ತಕ್ಷಣ ಧ್ರುವ್ ವಾಶ್​ ರೂಂಗೆ ಹೋಗಿ ಚಂದ್ರಪ್ರಭರನ್ನ ಹಗ್ ಮಾಡಿ ಕಣ್ಣೀರಾಕಿದ್ದಾರೆ.
/filters:format(webp)/newsfirstlive-kannada/media/media_files/2025/10/25/dhruvanth-cried-2025-10-25-17-42-54.png)
ಈ ಮೆಡಲ್ ಸಿಕ್ಕದೆ ಇದ್ರೂ ಬೇಜಾರಿಲ್ಲ, ಮಲ್ಲಮ್ಮ ಏನೇಳುದ್ರು ಗೊತ್ತಾ ? ಇಷ್ಟು ದಿನ ಅವರ ಹಿಂದೆ ನಿಂತು ಎಷ್ಟೆಲ್ಲ ಆಪಾಧನೆ ತೆಗೆದುಕೊಂಡೆ ನಾನು. ಆದ್ರೆ ಉತ್ತಮಗೆ ಮಲ್ಲಮ್ಮನ ಬಾಯಲ್ಲಿ ಮೊದಲು ಬಂದಿದ್ದು ಸೂರಜ್ ಹೆಸರು. ಬೇರೆ ಯಾರೇ ಈ ಮಾತು ಅಂದಿದ್ರೂ ನನ್ಗೆ ಬೇಜಾರಾಗ್ತಿರ್ಲಿಲ್ಲ. ಮಲ್ಲಮ್ಮನ ಮಾತು ಕೇಳಿ ಮೆಟ್ಟಲ್ಲಿ ಹೊಡೆದಂಗಾಯ್ತು ನನ್ಗೆ. ಇಷ್ಟೇನಾ ದುನಿಯಾ ? ಎಂದು ಧ್ರುವಂತ್ ಕಣ್ಣೀರಾಕಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us