/newsfirstlive-kannada/media/media_files/2025/10/13/ashwini-rr-2025-10-13-11-02-30.jpg)
ಅಶ್ವಿನಿ ಗೌಡ Photograph: (ಕಲರ್ಸ್ ಕನ್ನಡ)
ಕೊಂಕು ಮಾತಿಗೆ ಕುಗ್ಗದ ಅಶ್ವಿನಿ ಫಿನಿಕ್ಸ್‌ನಂತೆ ಎದ್ದು ಬಂದ್ರಾ? ಸುದೀಪ್ ಒಂದ್ ಕೈನಲ್ಲಿ ಗಿಲ್ಲಿ, ಇನ್ನೊಂದರಲ್ಲಿ ಅಶ್ವಿನಿ ಇರ್ತಾರಾ? ಟಾಪ್ 2 ಬಗ್ಗೆ ಭಾರೀ ಚರ್ಚೆ.. ಅವರಿಬ್ಬರ ನಡುವೆ ಬಿಗ್ ಫೈಟ್?
ಈ ಬಾರಿಯ ಬಿಗ್‌ಬಾಸ್ ಶೋ ಸಖತ್ ಹೈಪ್ ಕ್ರಿಯೆಟ್ ಮಾಡಿದೆ. ಯಾರಲ್ಲಿ ಕೇಳಿದ್ರೂ ಬಿಗ್‌ಬಾಸ್ ಸೌಂಡ್... ಸೋಷಿಯಲ್ ಮೀಡಿಯಾದಲ್ಲಿ ಅಕ್ಷರಶಃ ಬಿರುಗಾಳಿ. ಕಾರಣ, ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳು ಅಖಾಡದಲ್ಲಿರೋದು. ಆದ್ರೆ, ಈ ಶೋ ಮುಗಿಯೋದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಕಿಚ್ಚ ಸುದೀಪ್ ಅವರ ಒಂದು ಕೈನಲ್ಲಿ ಗಿಲ್ಲಿ, ಇನ್ನೊಂದು ಕೈನಲ್ಲಿ ಅಶ್ವಿನಿ ಗೌಡ ಇರುತ್ತಾರಾ? ಅನ್ನೋ ಚರ್ಚೆ ಜೋರಾಗಿದೆ. ಇದಕ್ಕೆ ಕಾರಣ, ಅಶ್ವಿನಿ ಗೌಡ ಫಿನಿಕ್ಸ್‌ನಂತೆ ಎದ್ದು ಬಂದಿರೋದು. ಆ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಬಿಗ್‌ಬಾಸ್, ಕಂಟೆಸ್ಟೆಂಟ್‌ಗಳ ಮುಖವಾಡವನ್ನ ಕಳಚುವ, ಅವರಲ್ಲಿರೋ ಮುಗ್ಧತೆಯನ್ನ ಜನರಿಗೆ ತೋರಿಸುವ ನಡೆ ನುಡಿ ಹೇಗಿರುತ್ತೆ ಅನ್ನೋದನ್ನು ಬಹಿರಂಗಪಡಿಸುವ ರಿಯಾಲಿಟಿ ಶೋ. ಈ ಬಾರಿಯ ಬಿಗ್‌ಬಾಸ್ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಇನ್ನೇನೂ ಒಂದೆರಡು ವಾರದಲ್ಲಿ ಬಿಗ್‌ಬಾಸ್ ವಿನ್ನರ್ ಯಾರು? ರನ್ನರ್ ಅಪ್ ಯಾರು? ಅನ್ನೋದ್ ಹೊರಬೀಳುತ್ತೆ. ಈ ಹಂತದಲ್ಲಿ ಪ್ರಮುಖವಾಗಿ ಚರ್ಚೆ ಆಗ್ತಾ ಇರೋದು ಎರಡೇ ವಿಷ್ಯ. ಒಂದು ಟಾಪ್ ಸಿಕ್ಸ್‌ನಲ್ಲಿ ಗಿಲ್ಲಿ, ಅಶ್ವಿನಿ, ರಘು, ರಕ್ಷಿತಾ, ಧನು ಇರ್ತಾರಾ? ಇಲ್ಲವೇ ಕಾವ್ಯಾ, ರಾಶಿ, ಧ್ರುವಂತ್ ಇವರಲ್ಲಿ ಯಾರಾದ್ರೂ ಟಾಪ್ ಸಿಕ್ಸ್‌ಗೆ ನುಗ್ತಾರಾ ಅನ್ನೋದು. ಇನ್ನೊಂದು ಬಹುದೊಡ್ಡ ಚರ್ಚೆ ಅಂದ್ರೆ, ಅಂತಿಮವಾಗಿ ಕಿಚ್ಚ ಸುದೀಪ್ ಅವರ ಒಂದು ಕೈಯಲ್ಲಿ ಗಿಲ್ಲಿ, ಇನ್ನೊಂದು ಕೈಯಲ್ಲಿ ಅಶ್ವಿನಿ ಗೌಡ ಇರುತ್ತಾರಾ ಅನ್ನೋದು... ಇದರಲ್ಲಿ ಟಾಪ್ 2 ಚರ್ಚೆಗೆ ಕಾರಣವಾಗಿದ್ದು ಕ್ಲೈಮ್ಯಾಕ್ಸ್‌ನಲ್ಲಿ ಅಶ್ವಿನಿ ಗೌಡ ಫಿನಿಕ್ಸ್ ಅಂತೆ ಎದ್ದು ಬರುತ್ತಾ ಇರೋದು.
'ತಾಕತ್ತಿದ್ದರೆ ತಡೆದುಕೋ' ಟಾಸ್ಕ್‌ನಲ್ಲಿ ಅಶ್ವಿನಿ ರಾಕ್, ಉಳಿದವ್ರು ಶಾಕ್!
ಜಗ್ಗದೆ ಬಗ್ಗದೆ ಕುಗ್ಗದೆ ಹಠ ತೋರಿಸಿದ ಬಿಗ್‌ಬಾಸ್ ಛಲಗಾರ್ತಿ!
ಇಲ್ಲಿಯವರೆಗೂ ಬಿಗ್‌ಬಾಸ್‌ನಲ್ಲಿ ನಾಮಿನೇಟ್‌ನಿಂದ ಪಾರಾಗೋದಕ್ಕೆ ಹೊಸ ಹೊಸ ಟಾಸ್ಕ್‌ಗಳನ್ನ ಕೊಡ್ತಾ ಇದ್ರು... ಅದ್ರಲ್ಲಿ ತಮ್ಮ ಶಕ್ತಿ ಸಾಮರ್ಥ್ಯ ಜಾಣ್ಮೆಯನ್ನ ತೋರಿಸಿ ಸ್ಪರ್ಧಿಗಳು ನಾಮಿನೇಟ್‌ನಿಂದ ಪಾರಾಗೋ ಅವಕಾಶ ಇರುತ್ತಿತ್ತು. ಆದರೇ, ಇದೀಗ ಬಿಗ್‌ಬಾಸ್ ಕ್ಲೈಮ್ಯಾಕ್ಸ್ ಹಂತದಲ್ಲಿ ಇರೋದ್ರಿಂದ ಈ ಬಾರಿ ಟಾಪ್ ಸಿಕ್ಸ್‌ಗೆ ಮೊದಲ ಕಂಟೆಸ್ಟೆಂಟ್ ಆಗೋದಕ್ಕೆ ಟಾಸ್ಕ್‌ಗಳನ್ನ ನೀಡಲಾಗ್ತಿದೆ. ಅದರ ಒಂದು ಭಾಗವಾಗಿಯೇ ತಾಕತ್ತಿದ್ದರೆ ತಡೆದುಕೋ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ, ಧ್ರುವಂತ್ ಒಂದು ಟೀಮ್‌ನಲ್ಲಿ ಆಡ್ತಾ ಇದ್ರೆ, ಇನ್ನೊಂದ್ ಟೀಮ್‌ನಲ್ಲಿ ರಘು ಮತ್ತು ರಾಶಿಕಾ ಅಖಾಡಕ್ಕಿಳಿದಿದ್ರು. ಈ ಸಂದರ್ಭದಲ್ಲಿ ಮೊದಲು ನೀರು ಎರಚುವ ಜವಾಬ್ದಾರಿ ತೆಗೆದ್ಕೊಂಡಿದ್ದ ಅಶ್ವಿನಿ ಟೀಮ್ ಅಕ್ಷರಶಃ ಜಾಣ್ಮೆಯನ್ನ ಪ್ರದರ್ಶಿಸಿತ್ತು.
ರಘು ಮತ್ತು ರಾಶಿಕ ಹಿಡ್ಕೊಂಡಿರೋ ಕಂಬವನ್ನ ಅವರ ಮುಖಕ್ಕೆ ನೀರು ಎರಚೋ ಮೂಲಕ ತಪ್ಪಿಸಬೇಕಾಗಿತ್ತು... ಹಾಗೇ ಟ್ರಿಗರ್ ಮಾಡೋ ಮೂಲಕ ಏಕಾಗ್ರತೆಯನ್ನ ತಪ್ಪಿಸಬೇಕಾಗಿತ್ತು. ಆ ಸಂದರ್ಭದಲ್ಲಿ ಅಶ್ವಿನಿ ಮತ್ತು ಧ್ರುವಂತ್ ಭಾರೀ ಜಾಣ್ಮೆ ತೋರಿಸ್ತಾರೆ. ಎಲ್ಲಿಯೂ ಎದುರಾಳಿಗಳನ್ನ ಟ್ರಿಗರ್ ಮಾಡೋದಕ್ಕೆ ಹೋಗೋದಿಲ್ಲ. ಕೊಂಕು ನುಡಿಗಳನ್ನ ನುಡಿಯೋದಿಲ್ಲ. ಗೌರವಯುತವಾಗಿಯೇ ಕಾಲೆಳೆಯೋ ಪ್ರಯತ್ನ ಮಾಡ್ತಾರೆ. ಹಾಗೇ ಅರ್ಧ ಗೇಮ್ ಮುಗಿದ್ಮೇಲೆ ಅಶ್ವಿನಿ ಗೌಡ ಹತ್ರ ಈ ಗೇಮ್ ಆಡೋದಕ್ಕೆ ಸಾಧ್ಯವಿಲ್ಲ ಅನ್ನೋದನ್ನ ರಘು ಹೇಳಿರುತ್ತಾರೆ.
ಕೊಂಕು ಮಾತಿಗೆ ಕುಗ್ಗದ ಅಶ್ವಿನಿ ಫಿನಿಕ್ಸ್‌ನಂತೆ ಎದ್ದು ಬಂದ್ರಾ?
ತಾಳ್ಮೆ ಕಳೆದುಕೊಳ್ಳದೇ ಜಾಣ್ಮೆಯಿಂದ ಆಡಿದ ಅಶ್ವಿನಿ!
ಬಿಗ್ ಬಾಸ್ ಮನೆಯಲ್ಲಿ ಯಾರೂ ಶಾಶ್ವತ ಮಿತ್ರರೂ ಇರೋದಿಲ್ಲ, ಶತ್ರುಗಳು ಇರೋದಿಲ್ಲ. ಸಮಯ ಸಂದರ್ಭಕ್ಕೆ ತಕ್ಕ ಹಾಗೇ ಬದಲಾಗ್ತಾ ಇರುತ್ತಾರೆ. ಆ ಮನೆಯಲ್ಲಿ ಸ್ಪರ್ಧಿಗಳಿಗೆ ತಾವು ಏನು ಅನ್ನೋದನ್ನ ತೋರಿಸ್ಬೇಕು? ಗೆದ್ದು ಬರಬೇಕು ಅಂದ್ರೆ ಅದೆಲ್ಲವೂ ಅನಿವಾರ್ಯ ಸಹ ಆಗಿರುತ್ತೆ. ನಾವು ಈ ಮಾತನ್ನ ಯಾಕೆ ಹೇಳ್ತಿದ್ದೇವೆ ಅಂದ್ರೆ, ಇದೇ ಒಂದೆರಡು ವಾರದ ಹಿಂದೆ ಅಶ್ವಿನಿ ಗೌಡಗೂ ರಾಶಿಕಾಗೂ ತುಂಬಾ ಒಳ್ಳೆಯ ರೀತಿಯ ಸ್ನೇಹ ಕಾಣಿಸಿಕೊಳ್ಳುತ್ತೆ. ಆದ್ರೆ,ವೀಕ್ ಎಂಡ್ ಮುಗೀದು ಟಾಪ್ ಸಿಕ್ಸ್ ಕಂಟೆಸ್ಟೆಂಟ್ ರೇಸ್ ಶುರುವಾಗ್ತಾ ಇದ್ದಂತೆ ಇಬ್ಬರು ನಾನಾ ನೀನಾ ಅನ್ನೋ ಫೈಟ್ ಶುರು ಮಾಡಿದ್ದಾರೆ. ಅದರ ಭಾಗವಾಗಿಯೇ ಅಶ್ವಿನಿ ಗೌಡ ರನ್ನು ಟಾಸ್ಕ್‌ನಲ್ಲಿ ಟ್ರಿಗರ್ ಮಾಡೋ ಪ್ರಯತ್ನ ನಡೆಯುತ್ತೆ.
ಯಾವ ಕೊಂಕು ಮಾತಿಗೂ ಅಶ್ವಿನಿ ಗೌಡ ಜಗ್ಗೋದಿಲ್ಲ ಬಗ್ಗೋದಿಲ್ಲ ಕುಗ್ಗೋದಿಲ್ಲ. ತನ್ನ ಗಮನವನ್ನ ಸಂಪೂರ್ಣವಾಗಿ ತನ್ನ ಆಟದತ್ತ ದೃಷ್ಟಿ ಹರಿಸುತ್ತಾರೆ. ಸಾಮಾನ್ಯವಾಗಿ ಅಶ್ವಿನಿ ಗೌಡಗೆ ಕೋಪ ಜಾಸ್ತಿ. ಸ್ವಲ್ಪ ಕೀ ಕೊಟ್ಟರೂ ಸಾಕು ಟ್ರಿಗರ್ ಆಗಿ ಬಿಡ್ತಾರೆ. ಅಂತಾದ್ರಲ್ಲಿ ತಾಕತ್ತಿದ್ದರೆ ತಡೆದುಕೋ ಟಾಸ್ಕ್‌ನಲ್ಲಿ ತಾಳ್ಮೆಯನ್ನೂ ತೋರಿಸಿದ್ರು... ಸಾಮರ್ಥ್ಯವನ್ನ ಸಾಬೀತು ಮಾಡಿದ್ರು. ಅಂತಿಮವಾಗಿ ಗೆದ್ದು ಟಾಪ್ ಸಿಕ್ಸ್ ಸ್ಪರ್ಧಿಗಳ ರೇಸ್‌ಗೆ ಹೋದ್ರು.
ಅಶ್ವಿನಿ ಆಟ ನೋಡಿ ಮನೆ ಮಂದಿ ಎಲ್ಲಾ ಶಾಕ್!
ಅಶ್ವಿನಿ ಆಟಕ್ಕೆ ಬಿಗ್‌ಬಾಸ್ ವೀಕ್ಷಕರು ಫುಲ್ ಫಿದಾ!
ಮುಖಕ್ಕೆ ನೀರು ಪಟಾಪಟ್ ಅಂತ ರಘು ಮತ್ತು ರಾಶಿಕಾ ಎರಚುತ್ತಾ ಇದ್ರೆ ಕಂಬವನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು ಸುಲಭವಾಗಿರಲಿಲ್ಲ. ಅದ್ರಲ್ಲಿಯೂ ರಘು ಯಾವುದೇ ಕಾರಣಕ್ಕೂ ಅಶ್ವಿನಿ ಹತ್ರ ಈ ಗೇಮ್‌ನಲ್ಲಿ ಆಡೋದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಿರುತ್ತಾರೆ. ಇನ್ನು ಟಾಸ್ಕ್‌ನಲ್ಲಿ ಸ್ಟ್ರಾಂಗ್ ಆಗಿ ಕಾಣಿಸ್ಕೊಳ್ತಾ ಇದ್ದ ರಾಶಿಕ ಸಹ 29 ನಿಮಿಷಕ್ಕೆ ಔಟ್ ಆಗಿರ್ತಾಳೆ. ಅಂತಾದ್ರಲ್ಲಿ ಅಶ್ವಿನಿ ಗೌಡ 70 ನಿಮಿಷಕ್ಕೂ ಹೆಚ್ಚಿನ ಕಾಲ ಕಂಬವನ್ನ ಹಿಡಿದಿಟ್ಟುಕೊಂಡಿರುತ್ತಾರೆ.
ಅಶ್ವಿನಿ ಗೌಡ ಆಟವನ್ನ ನೋಡಿ ಬಿಗ್‌ಬಾಸ್‌ನ ಬೇರೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಅಬ್ಬಾ ಏನ್ ಆಟ ಆಡಿದ್ರು ಅಂತ ಗುಣಗಾನ ಮಾಡಿದ್ದಾರೆ. ಹಾಗೇ ಬಿಗ್ ಬಾಸ್ ವೀಕ್ಷಕರು ಸಹ ಅಶ್ವಿನಿ ಗೌಡಗೆ ಭಲೇ ಬೇಷ್ ಅಂದಿದ್ದಾರೆ.
/filters:format(webp)/newsfirstlive-kannada/media/media_files/2026/01/09/big-boss-ashwini-gowda-2026-01-09-14-18-38.jpg)
ಬಿಗ್‌ಬಾಸ್ ಶೋ ವ್ಯಕ್ತಿತ್ವದ ಆಟ. ಅಲ್ಲಿ ಯಾರ ವ್ಯಕ್ತಿತ್ವ ಜನರಿಗೆ ಇಷ್ಟವಾಗುತ್ತೋ ಅವರೇ ವಿಜಯ ಪತಾಕೆ ಹಾರಿಸೋದು. ಆದ್ರೆ, ಈಗ ಟಾಪ್ ಟು ರೇಸ್‌ನಲ್ಲಿ ಕೇಳಿಬರುತ್ತಾ ಇರೋದು ಗಿಲ್ಲಿ ಮತ್ತು ಅಶ್ವಿನಿ ಹೆಸರು? ಅದ್ಯಾಕೆ ಅವರಿಬ್ಬರ ಹೆಸರು ಮಾತ್ರ ರೇಸ್‌ನಲ್ಲಿದೆ? ಬಿಗ್‌ಬಾಸ್ ವೀಕ್ಷಕರು ಯಾರಿಗೆ ಬಹುಪರಾಕ್ ಹೇಳ್ತಾರೆ? ಅನ್ನೋದೇ ಈಗಿರುವ ಕುತೂಹಲ.
ಬಿಗ್‌ಬಾಸ್ ಶೋದಲ್ಲಿ ವೀಕ್ಷಕರೇ ಪ್ರಭುಗಳು ಅಂದ್ರೆ ಖಂಡಿತ ತಪ್ಪಾಗದು. ಯಾಕಂದ್ರೆ, ಅವರು ಯಾರಿಗೆ ಜಾಸ್ತಿ ವೋಟ್ ಮಾಡಿರುತ್ತಾರೋ ಅವರೇ ವಿನ್ನರ್ ಆಗೋದು. ಆದ್ರೆ, ಸ್ಪರ್ಧಿಗಳು ವೀಕ್ಷಕರ ಮನಸ್ಸು ಗೆಲ್ಲಬೇಕು. ಅವರ ನಡೆ ನುಡಿ ಜನರ ಮನಕ್ಕೆ ಮುಟ್ಟುವಂತೆ ಇರಬೇಕು. ಈ ನಿಟ್ಟಿನಲ್ಲಿ ಗಿಲ್ಲಿ, ಅಶ್ವಿನಿ ಟಾಪ್ 2 ರೇಸ್‌ನಲ್ಲಿದ್ದಾರಾ? ಜನ ಹೇಳೋದು ಏನು? ಅಂತ ನೋಡೋಣ.
ಈ ಬಾರಿ ಬಿಗ್‌ಬಾಸ್ ಶೋ ಸ್ಟಾರ್ಟ್ ಆದಾಗಿಂದ ಇಲ್ಲಿಯವರೆಗೂ ಗಿಲ್ಲಿ ಇಟ್ಟಿದ್ದೇ ಹೆಜ್ಜೆ... ನಡೆದಿದ್ದೇ ದಾರಿ ಅನ್ನೋ ರೀತಿಯಲ್ಲಿ ಒನ್ ಮ್ಯಾನ್ ಶೋ ಹಾಗಿತ್ತು. ಹೀಗಾಗಿ ಯಾರೇ ಕೇಳಿದ್ರೂ ಗಿಲ್ಲಿ ಗಿಲ್ಲಿ ಅಂತಿದ್ರು. ಮನೆಯಿಂದ ಹೊರಬಂದ ಕಂಟೆಸ್ಟೆಂಟ್‌ಗಳು ಸಹ ಗೆಲ್ಲೋ ಸ್ಪರ್ಧಿ ಯಾರು ಅಂತ ಕೇಳಿದ್ರೆ ಪಟ್ ಅಂತ ಗಿಲ್ಲಿ ಹೆಸರು ಹೇಳ್ತಿದ್ರು. ಕಾರಣ, ಗಿಲ್ಲಿ ಮಾಡೋ ಕಾಮಿಡಿ ಜನರಲ್ಲಿ ನಗು ತರಿಸುತ್ತಿತ್ತು. ಆತ ಬೇರೆ ಸ್ಪರ್ಧಿಗಳಿಗೆ ಕೊಡುತ್ತಾ ಇದ್ದ ಕೌಂಟರ್ ವೀಕ್ಷಕನ ಹೃದಯಕ್ಕೆ ತಟ್ಟಿತ್ತು. ಎಂಥಾ ಸೀರಿಯಸ್ ಗೇಮ್ ಆಗಿದ್ರೂ ಅಲ್ಲಿಯೂ ಸಹ ಸ್ಪರ್ಧಿಗಳಲ್ಲಿ ನಗು ತರಿಸಿದ, ವೀಕ್ಷಕರಿಗೆ ಮನರಂಜನೆ ನೀಡಿದ ಖ್ಯಾತಿ ಗಿಲ್ಲಿಗೆ ಇದೆ. ಆದ್ರೆ, ಇದೀಗ ಕ್ಲೈಮ್ಯಾಕ್ಸ್ ಹಂತದಲ್ಲಿ ಅಶ್ವಿನಿ ಗೌಡ ಫೀನಿಕ್ಸ್ ನಂತೆ ಎದ್ದು ಬರ್ತಾ ಇರೋದು ಇಬ್ಬರ ನಡುವೆ ಬಿಗ್ ಫೈಟ್ ಗ್ಯಾರಂಟಿ ಅನ್ನೋದನ್ನ ಸಾರಿ ಸಾರಿ ಹೇಳ್ತಾ ಇದೆ.
ಗಿಲ್ಲಿ, ಅಶ್ವಿನಿ ನಡುವೆ ಬಿಗ್‌ಬಾಸ್ ಟ್ರೋಫಿ ಫೈಟ್ ಆಗುತ್ತಾ?
ಜನ ಗಿಲ್ಲಿ ನಟನಿಗೆ ಜೈ ಅಂತಾರಾ? ಅಶ್ವಿನಿ ಗೌಡಗಾ?
ಸದ್ಯ ಬಿಗ್ ಬಾಸ್ ಮನೆಯಲ್ಲಿರೋದು ಸ್ಟ್ರಾಂಗ್ ಸ್ಪರ್ಧಿಗಳು ಮಾತ್ರ. ವೀಕ್ ಸ್ಪರ್ಧಿಗಳು ಈಗಾಗಲೇ ಹೊರಹೋಗಿದ್ದಾರೆ. ಗಿಲ್ಲಿ, ರಘು, ರಕ್ಷಿತಾ, ಅಶ್ವಿನಿ, ರಾಶಿಕಾ, ಧ್ರುವಂತ್, ಕಾವ್ಯ, ಧನುಷ್ ಮನೆಯಲ್ಲಿದ್ದಾರೆ. ಇವರಲ್ಲಿ ಇಬ್ಬರು ಸ್ಪರ್ಧಿಗಳು ಈ ವಾರ ಮನೆಯಿಂದ ಹೊರಹೋಗುವುದು ಫಿಕ್ಸ್. ಯಾರೇ ಹೊರ ಹೋದ್ರೂ ವೀಕ್ಷಕರಿಗೆ ಶಾಕ್ ಆಗೋದು ಗ್ಯಾರಂಟಿ. ಹಾಗೇ ಈಗ ದೊಡ್ಮನೆಯಲ್ಲಿರೋ ಸ್ಪರ್ಧಿಗಳಲ್ಲಿ ಟಾಪ್ ಟು ರೇಸ್‌ನಲ್ಲಿದ್ದವರು ಯಾರು ಅಂತ ಕೇಳಿದ್ರೆ ಗಿಲ್ಲಿ ಮತ್ತು ಅಶ್ವಿನಿ ಹೆಸ್ರು ಕೇಳಿಬರುತ್ತಿದೆ. ಇದನ್ನ ನಾವು ಹೇಳ್ತಾ ಇರೋದಲ್ಲ. ಪ್ರತಿನಿತ್ಯ ಬಿಗ್‌ಬಾಸ್ ವೀಕ್ಷಿಸುವ ವೀಕ್ಷಕರು ಹೇಳ್ತಿರೋ ಮಾತು.
ವೀಕ್ಷಕರು ಗಿಲ್ಲಿ ಮತ್ತು ಅಶ್ವಿನಿ ಫೈನಲ್‌ಗೆ ಬರುತ್ತಾರೆ ಅಂತ ಹೇಳಿದ ತಕ್ಷಣವೇ ಹಾಗೇ ಆಗುತ್ತೆ ಅನ್ನೋದಲ್ಲ. ಇನ್ನೂ ಒಂದೆರಡು ವಾರ ಇರೋದ್ರಿಂದ ಗೇಮ್‌ಗಳು ಇನ್ನೂ ಬಾಕಿ ಇವೆ. ಯಾವ ಸ್ಪರ್ಧಿಯ ಮುಖವಾಡ ಇನ್ನು ಹೊರಬರುತ್ತೋ ಗೊತ್ತಿಲ್ಲ. ಒಂದೇ ಒಂದು ಮಾತು ರಾತ್ರಿ ಬೆಳಗಾಗೋದ್ರಲ್ಲಿ ಹೇಗೆ ಹೀರೋ ಮಾಡುತ್ತೋ? ಹಾಗೇ ಎಲುಬಿಲ್ಲದ ನಾಲಿಗೆ ಮಾತು ರಾತ್ರಿ ಬೆಳಗಾಗೋದ್ರಲ್ಲಿ ಜೀರೋ ಮಾಡಿ ಬಿಡುತ್ತೆ. ಹೀಗಾಗಿ ಬಿಗ್ ಬಾಸ್ ವಿಜೇತರು ಯಾರು ಅನ್ನೋದನ್ನು ಕೊನೆಯ ಕ್ಷಣದವರೆಗೂ ಕಾದು ನೋಡಬೇಕು.
ಗಿಲ್ಲಿ-ಅಶ್ವಿನಿಗೆ ರಕ್ಷಿತಾ, ಧನು ಬಿಗ್‌ಫೈಟ್ ಕೊಡ್ತಾರಾ?
ವೀಕ್ಷಕರ ಮೆಚ್ಚಿನ ಸ್ಪರ್ಧಿ ಗಿಲ್ಲಿನಾ? ಅಶ್ವಿನಿನಾ? ರಕ್ಷಿತಾನಾ?
ಬಿಗ್‌ಬಾಸ್‌ನಲ್ಲಿ ಗೇಮ್ ಚೆನ್ನಾಗಿ ಆಡಿದ ಮಾತ್ರಕ್ಕೆ ಟ್ರೋಫಿ ಸಿಗೋದಿಲ್ಲ. ಆದ್ರೆ, ಯಾರು ತಮ್ಮ ವ್ಯಕ್ತಿತ್ವವನ್ನ ಚೆನ್ನಾಗಿ ತೋರಿಸಿರುತ್ತಾರೋ ಯಾರ ವ್ಯಕ್ತಿತ್ವ ಜನರಿಗೆ ಇಷ್ಟವಾಗಿರುತ್ತೋ? ಅವರು ವಿನ್ ಆಗೋದು ಪಕ್ಕಾ. ಯಾಕಂದ್ರೆ, ಜನರ ವೋಟ್ ಮೂಲಕವೇ ವಿನ್ನರ್ ಘೋಷಣೆ ನಡೆಯುತ್ತೆ. ಸದ್ಯ ಗಿಲ್ಲಿ ನಟನ ಹವಾ ಜೋರಾಗಿದೆ ಅನ್ನೋದು ಸೋಷಿಯಲ್ ಮೀಡಿಯಾದಿಂದ ಕಾಣಿಸಿಕೊಳ್ಳುತ್ತಿದೆ. ಹಾಗೇ ಅಶ್ವಿನಿ ಗೌಡ ಸಹ ತಾನು ಸ್ಪರ್ಧಿ, ತಾನು ಗೆಲ್ಲೋ ರೇಸ್‌ನಲ್ಲಿದ್ದೀನಿ ಅನ್ನೋದನ್ನ ತೋರಿಸಿದ್ದಾಳೆ. ಈ ನಡುವೆ ರಕ್ಷಿತಾ, ಧನು ಕೈ ಕಟ್ಟಿಕುಳಿತಿಲ್ಲ. ಅವ್ರು ಗೆಲ್ಲೋ ರೇಸ್‌ನಲ್ಲಿದ್ದೇವೆ ಅನ್ನೋದನ್ನ ಸಾಬೀತು ಮಾಡ್ತಿದ್ದಾರೆ.
ಗಿಲ್ಲಿ ಮತ್ತು ಅಶ್ವಿನಿಗೆ ಟಫ್ ಫೈಟ್ ಕೊಟ್ಟರೇ ರಕ್ಷಿತಾ, ಧನು ಮಾತ್ರ ಅನ್ನೋ ಮಾತುಗಳು ಕೇಳಿಬರುತ್ತಾ ಇವೆ. ರಕ್ಷಿತಾ ತನ್ನ ಮಾತಿನ ಶೈಲಿಯಿಂದ, ಮುಗ್ಧ ಮನಸ್ಸಿನಿಂದ ಜನರ ಮನಸ್ಸಿಗೆ ಹತ್ತಿರವಾಗಿ ಬಿಟ್ಟಿದ್ದಾಳೆ. ಧನು ಟಾಸ್ಕ್ ಮಾಸ್ಟರ್ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಅವರ ಬಗ್ಗೆಯೂ ಜನರಿಗೆ ಒಲವು ಇದೆ. ಹೀಗಾಗಿ ಫೈನಲ್‌ನಲ್ಲಿ ಕಿಚ್ಚ ಸುದೀಪ್ ಅವರ ಎರಡು ಕೈಗಳಲ್ಲಿ ಯಾರು ಇರುತ್ತಾರೆ ಅನ್ನೋದನ್ನ ಕಾದು ನೋಡೋಣ.
/filters:format(webp)/newsfirstlive-kannada/media/media_files/2026/01/09/big-boss-ashwini-gowda-1-2026-01-09-14-22-29.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us