/newsfirstlive-kannada/media/media_files/2025/10/13/kichcha-sudeep-2025-10-13-11-42-11.png)
Photograph: (colors kannada)
ಬಿಗ್​ ಬಾಸ್​ ಕನ್ನಡ ಶೋಗೆ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ದೇಶಾದ್ಯಂತ ಮಾತ್ರವಲ್ಲದೆ ಹೊರ ದೇಶಗಳಲ್ಲೂ ಅನೇಕರ ಈ ಕಾರ್ಯಕ್ರಮವನ್ನ ನೋಡ್ತಾರೆ. ಕೆಲವರಂತು ತಮ್ಮ ನೆಚ್ಚಿನ ನಾಯಕ ನಟ ಕಿಚ್ಚನನ್ನ ನೋಡೋದಕ್ಕಾಗಿಯೇ ಈ ಕಾರ್ಯಕ್ರಮವನ್ನ ಫಾಲೋ ಮಾಡ್ತಾರೆ. ಇನ್ನು ಕಿಚ್ಚನ ಲುಕ್ ಪ್ರತೀ ಸೀಸನ್​ಗೂ ಬದಲಾಗುತ್ತಲೇ ಇದೆ. ಸುದೀಪ್​ ಹೇರ್ ಸ್ಟೈಲ್, ಡಿಫರೆಂಟ್ ಡಿಫರೆಂಟ್ ಕಾಸ್ಟ್ಯೂಮ್ಸ್​ & ಅವರ ಮ್ಯಾನರಿಸಿಂಗ್ ಅವರೇ ಸಾಟಿ.
/filters:format(webp)/newsfirstlive-kannada/media/media_files/2025/10/13/bigg-boss-sudeep-2025-10-13-11-34-48.png)
ಬಾದ್​ಷಾ ಸುದೀಪ್​ ಕಾಸ್ಟ್ಯೂಮ್​ ಡಿಸೈನ್ ಮಾಡೋದು ಅವರ ಮನಸ್ಸು ಗೆಲ್ಲೋದು ಅಷ್ಟು ಸುಲಭದ ಮಾತಲ್ಲ. ಸುದೀಪ್​ಗೆ ಕಾಸ್ಟ್ಯೂಮ್​ ಡಿಸೈನ್ ಮಾಡ್ಬೇಕು ಅವರ ಮೆಚ್ಚುಗೆ ಪಡಿಬೇಕು ಅನ್ನೋದು ಅನೇಕ ಕಾಸ್ಟ್ಯೂಮ್ ಡಿಸೈನರ್​ಗಳ ಕನಸಾಗಿರುತ್ತೆ. ಬಟ್ಟೆಗಳ ವಿಷಯದಲ್ಲಿ ಇಷ್ಟೊಂದು ಪರ್ಟಿಕ್ಯುಲರ್ ಆಗಿರುವ ಕಿಚ್ಚ ಜಾಹ್ನವಿ ಡ್ರೆಸ್​ ನೋಡಿ ಹೇಳಿದ್ದೇನು ಗೊತ್ತಾ ? ನಾವ್ ಹೇಳ್ತೀವಿ ಈ ಸ್ಟೋರಿ ಓದಿ.
/filters:format(webp)/newsfirstlive-kannada/media/media_files/2025/10/13/jhanavi-2025-10-13-11-35-40.png)
​
ನಿನ್ನೆ ನಡೆದ ಸೂಪರ್ ಸಂಡೆ ವಿಥ್ ಬಾದ್​ಷಾ ಸುದೀಪ ಎಪಿಸೋಡ್​ ಶುರುವಾದ ತಕ್ಷಣ ಕಿಚ್ಚ ಜಾಹ್ನವಿ ಲುಕ್​ ನೋಡಿ ಸ್ಪೈಡರ್ ಮ್ಯಾನ್ ರೀತಿ ಕಾಣ್ತಿದ್ದೀರಲ್ಲ ಅಂತ ಕಾಲೆಳೆದಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರ ಕೊಟ್ಟ ಜಾಹ್ನವಿ ಸ್ವಲ್ಪ ಚೇಂಜ್ ಇರ್ಲಿ ಅಂತ ಸರ್ ಎಂದಿದ್ದಾರೆ. ಈ ರೇಂಜಿಗಾ ? ಎಂದ ಕಿಚ್ಚನ ಬಳಿಯೇ ಜಾಹ್ನವಿ ನನ್ನ ಡ್ರೆಸ್ ಚೆನ್ನಾಗಿದೆ ಸರ್ ? ಎಂದು ಕೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/13/bbk-jhanavi-2025-10-13-11-35-56.png)
ಸತ್ಯ ಹೇಳ್ಲಾ ? ಸುಳ್ಳು ಹೇಳ್ಲಾ ? ಸುಳ್ಳು ಹೇಳ್ಬೇಕಂದ್ರೆ.. ಎಕ್ಸ್​ಟ್ರಾಡಿನರಿ, ಮೈಂಡ್ ಬ್ಲೋಯಿಂಗ್, ಗಾರ್ಜಿಯಸ್ ಎಂದು ಕಿಚ್ಚ ಹೊಗಳಿದ ಮಾತಿಗೆ ಕೈ ಮುಗಿದು ನಿಜ ಹೇಳೋದು ಬೇಡ ಎಂದು ಜಾಹ್ನವಿ ಕೈ ಮುಗಿದಿದ್ದಾರೆ. ಇಲ್ಲ ನಿಜನೂ ಕೇಳ್ಬಿಡಿ ಎಂದು ಚೆನ್ನಾಗಿದೆ ಅಂತ ಜಾಹ್ನವಿ ಅವರ ಲುಕ್​ಗೆ ಸುದೀಪ್ ಕಾಂಪ್ಲಿಮೆಂಟ್ ಮಾಡಿದ್ದಾರೆ.