/newsfirstlive-kannada/media/media_files/2025/10/09/gilli-kavya-ashwini-gowda-2025-10-09-16-01-09.png)
Photograph: (colors kannada)
ಬಿಗ್​ ಬಾಸ್​ ಸೀಸನ್​ 12ರಲ್ಲಿ ಅಸುರ ಕಾಕ್ರೋಚ್ ಸುಧಿಯ ಅಟ್ಟಹಾಸ ಶುರುವಾಗಿದೆ. ಎಲ್ಲರು ಅಸುರ ಹೇಳಿದಂತೆಯೇ ಕೇಳಬೇಕು. ಕೇಳದೆ ಇರುವವರಿಗೆ ಅಸುರ ತನ್ನಿಚ್ಚೆಯಂತೆ ಅವರಿಗೆ ಶಿಕ್ಷೆ ನೀಡುವ ಅಧಿಕಾರವನ್ನ ಬಿಗ್​ ಬಾಸ್ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/10/09/bbk-sudhi-2025-10-09-16-04-32.png)
ನಿನ್ನೆ ನಡೆದ ಸಂಚಿಕೆಯಲ್ಲಿ ಅಸುರ ಕಾಕ್ರೋಚ್ ಅಣತಿಯಂತೆ ಧ್ರುವಂತ್ & ಅಶ್ವಿನಿ S.N, ಅಶ್ವಿನಿ ಗೌಡರ ಮೇಕಪ್ ಬಾಕ್ಸನ್ನು ಬೆಡ್​ ರೂಂನಲ್ಲಿ ಬಚ್ಚಿಡುತ್ತಾರೆ. ಸ್ನಾನ ಮುಗಿಸಿ ಬಂದ ಅಶ್ವಿನಿ ಗೌಡ ಕಿಚನ್ ಸೇರಿದಂತೆ ಎಲ್ಲೆಡೆ ತಮ್ಮ ಮೇಕಪ್​ ಕಿಟ್ ಹುಡುಕಿ ಹುಡುಕಿ ಸುಸ್ತಾಗುತ್ತಾರೆ. ಎಲ್ಲಿಯೂ ಸಿಗದೆ ಇದ್ದಾಗ ಸಿಟ್ಟಾದ ​ಅಶ್ವಿನಿ ಗೌಡ ಮೇಕಪ್ ಕಿಟ್​ಗೆ ಅದರದ್ದೇ ಆದ ಗೌರವ ಇದೆ. ಅಕಸ್ಮಾತಾಗಿ ಅದನ್ನ ಎಲ್ಲೆಂದರಲ್ಲಿ ಇಟ್ಟಿದ್ದರೆ ಸರಿಯಾಗಿ ಗ್ರಹಚಾರ ಬಿಡುಸುತ್ತೇನೆ ಎಂದು ಬಚ್ಚಿಟ್ಟವರಿಗೆ ವಾರ್ನಿಂಗ್ ಕೊಡುತ್ತಾರೆ.
/filters:format(webp)/newsfirstlive-kannada/media/media_files/2025/10/09/bbk-ashwini-gowda-2025-10-09-16-06-08.png)
ನನ್ನ ಮೇಕಪ್ ಕಿಟ್ ಬಚ್ಚಿಟ್ಟಿದ್ದಾರೆ. ನನ್ನ ಡೈಮಂಡ್ ರಿಂಗನ್ನೂ ಕೂಡ ಕಳೆದಾಕಿದ್ದಾರೆ ಎಂದು ಜಾಹ್ನವಿಗೆ ಅಶ್ವಿನಿ ಗೌಡ ಕಂಪ್ಲೆಂಟ್ ಮಾಡಿದ್ದಾರೆ. ಇದೇ ವೇಳೆ ಕಿಚನ್​ನಲ್ಲಿಯೇ ಇದ್ದ ಗಿಲ್ಲಿ ನಟ ಅಲ್ಲಿ ಡೈಮಂಡ್ ರಿಂಗ್ ಇರ್ಲಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ಗೌಡ ನಾನು ಹಾಕೋದೆಲ್ಲ ಡೈಮಂಡೇ, ನಾನ್ಯಾವುದೂ ಆರ್ಟಿಫಿಷಿಯಲ್ ಹಾಕಿಲ್ಲ. ನಾನು ತಂದಿರೋದೆಲ್ಲ ಡೈಮಂಡ್. ಮೇಕಪ್ ಬಾಕ್ಸಿಂದ ಓಲೆ & ಉಂಗುರ ಬೀಳ್ಸಿದ್ದೀರಾ. ಓಲೆ ಸಿಕ್ಕಿದೆ ಉಂಗುರ ಸಿಕ್ಕಿಲ್ಲ ಎಂದು ಗಿಲ್ಲಿ ವಿರುದ್ಧ ಅಶ್ವಿನಿ ಗರಂ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/10/09/dhruvanth-ashwini-2025-10-09-16-06-35.png)
ಯಾರೋ ಕೋತಿ ಆಟ ಆಡುಸ್ತಾರೆ ಅಂತ ಆಡೋದಲ್ಲ. ನನ್ನ ಡೈಮಂಡ್ ರಿಂಗ್ ಸಿಗಲಿಲ್ಲ ಅಂದ್ರೆ ನಾನಂತು ಸುಮ್ನೆ ಇರಲ್ಲ ಎಂದು ಅಶ್ವಿನಿ ಗೌಡ ಎಚ್ಚರಿಕೆ ನೀಡಿದ್ದು, ಅಶ್ವಿನಿ ಮಾತು ಕೇಳಿ ಅಬ್ಬ ರಿಚ್ ಕಿಡ್ ಎಂದು ಕಾವ್ಯಾ, ಗಿಲ್ಲಿ ಶಾಕ್ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/10/09/ashwini-gowda-2025-10-09-16-07-01.png)
ಇನ್ನು ಅಶ್ವಿನಿ ಗೌಡ ಮಾತಿಗೆ ಭಯ ಪಟ್ಟು ಗಿಲ್ಲಿ ನಟ ಮೇಕಪ್ ಬಾಕ್ಸ್​ನಲ್ಲಿ ಡೈಮೆಂಡ್ ರಿಂಗ್ ಇತ್ತಂತೆ ಅಂತ ಅಸುರ ಕಾಕ್ರೋಚ್ ಸುಧಿಗೆ ಹೇಳಿದ್ದಾರೆ. ಇದು ಅವರ ಕುತಂತ್ರ ಇದ್ದರೂ ಇರಬಹುದು ಎಂದ ಕಾಕ್ರೋಚ್ ಸುಧಿ ಅಶ್ವಿನಿ ಗೌಡರ ಮೇಕಪ್ ಕಿಟ್ ವಾಪಸ್ ಕೊಡಲು ನಿರಾಕರಿಸಿದ್ದಾರೆ.