/newsfirstlive-kannada/media/media_files/2025/10/20/suraj-singh-2025-10-20-21-27-45.jpg)
ಹುಡುಗಿಯರ ಮನ ಗೆದ್ದ ಸೂರಜ್ ನಿಂದ ರೀವೇಂಜ್ ಆಟ
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಆಗಮಿಸಿರೋ ಸೂರಜ್ ಹುಡುಗಿಯರ ಮನಸ್ಸೇನೋ ಕದ್ದಿದ್ದಾರೆ. ಮಾತ್ರವಲ್ಲ ಮೊದಲ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ತಮ್ಮ ಟೀಂನೊಂದಿಗೆ ನಿಂತು ವಿಶಾಲ ಹೃದಯಿ ಅಂತಾನೂ ಅನಿಸಿಕೊಂಡಿದ್ರು. ಅಂತಾ ವಿಶಾಲ ಹೃದಯಿ ಸೂರಜ್ ಇದೀಗ ಅವ್ರ ಟೀಂಗೆ ಉಲ್ಟಾ ಹೊಡೆದಿದ್ದಾರೆ.
ಸೂರಜ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಎಲ್ಲರೊಂದಿಗೆ ಅಷಷ್ಟೊಂದು ಬೆರೆಯದೆ ಹೋದರೂ ತಮ್ಮನ್ನು ಗುರುತಿಸಿಕೊಳ್ಳೊ ಅವಕಾಶವನ್ನು ಮಿಸ್ ಮಾಡ್ತಿಲ್ಲ. ಕಳೆದ ವಾರ ಮಿಸ್ ಆದ ಕ್ಯಾಪ್ಟನ್ಸಿ ಪಟ್ಟ ಈ ವಾರ ಸಿಗಬಹುದು. ತನ್ನ ತಂಡದವರು ತನ್ನ ಹೆಸರನ್ನೂ ಸಜೆಸ್ಟ್ ಮಾಡಬಹುದು ಅನ್ನೋ ನಿರೀಕ್ಷೆಯಲ್ಲಿದ್ದ ಸೂರಜ್‌ಗೆ ನಿರಾಸೆಯಾಗಿದೆ. ಇದಕ್ಕೆ ಸೂರಜ್ ನೀಡಿದ ಉತ್ತರ ಮಾತ್ರ ಸೂರಜ್ ನಿಜಕ್ಕೂ ಹೃದಯವಂತನೇನಾ ಅಂತ ಪ್ರಶ್ನಿಸಿಕೊಳ್ಳೋ ಹಾಗೆ ಆಗಿದೆ.
ಸ್ಟೂಡೆಂಟ್ ಆಫ್ ದಿ ವೀಕ್‌ನ ಆಯ್ಕೆ ಟಾಸ್ಕ್‌ನಲ್ಲಿ ಅಭ್ಯರ್ಥಿಗಳು ತಮ್ಮ ಫೋಟೋ ಮುಚ್ಚಿಟ್ರೆ ಅವರ ಬೆಂಬಲಿಗರು ಉಳಿದ ಅಭ್ಯರ್ಥಿಗಳ ಫೋಟೋ ತಂದು ಫ್ರೇಮ್‌ನೊಳಕ್ಕೆ ಹಾಕಬೇಕು. ಅಭಿಷೇಕ್ ಪರ ಆಟವಾಡಿದ್ದ ದ್ರುವಂತ್ ಅವರ ಫೋಟೋ ರಕ್ಷಿಸುವ ಪ್ರಯತ್ನ ಮಾಡ್ತಿದ್ರೆ ಅವರದ್ದೇ ತಂಡದ ಸೂರಜ್ ಆಪಸಿಟ್ ಟೀಂನವರೊಂದಿಗೆ ಸೇರಿ ಫೋಟೋ ಹರಿದೇ ಹಾಕಿದ್ದಾರೆ.
ಅವತ್ತು ತಮ್ಮ ತಂಡದವರನ್ನು ಬಿಟ್ಟು ಕೊಡದೇ ಭೇಷ್ ಅನಿಸಿಕೊಂಡಿದ್ದ ಅದೇ ಸೂರಜ್ ಇವತ್ತು ತಮ್ಮ ತಂಡದವರನ್ನೇ ಸೋಲಿಸಿದ್ದಾರೆ ಮಾತ್ರವಲ್ಲ ಇದೆಲ್ಲ ಮಾಡಿದ್ದು ತಮ್ಮನ್ನು ಸ್ಟೂಡೆಂಟ್ ಆಫ್ ದಿ ವೀಕ್ ಟಾಸ್ಕ್‌ಗೆ ನಾಮಿನೇಟ್ ಮಾಡಲಿಲ್ಲ ಅನ್ನೋ ಕಾರಣಕ್ಕೆ ಎಂದು ಬಹಿರಂಗವಾಗಿ
ಹೇಳಿಕೊಂಡಿದ್ದಾರೆ. ಹಾಗದ್ರೆ ಸೂರಜ್ ಒಳ್ಳೆಯವ್ರ ಕೆಟ್ಟವರಾ?
/filters:format(webp)/newsfirstlive-kannada/media/media_files/2025/10/23/bbk12_suraj_new-2025-10-23-11-33-20.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us