/newsfirstlive-kannada/media/media_files/2025/10/14/bbk-12-2025-10-14-11-35-40.jpg)
Photograph: (colors kannada)
ಬಿಗ್‌ಬಾಸ್ ಸೀಸನ್ ೧೨ ಕಳೆದ ಸೀಸನ್‌ಗಳಿಗಿಂತ ತುಂಬಾ ಭಿನ್ನ. ಇಲ್ಲಿ ಮೂರನೇ ವಾರವೇ ಮೊದಲ ಫೈನಲ್ ನಡೆಯಲಿದೆ. ಇಷ್ಟು ಮಾತ್ರವಲ್ಲ ಈ ವಾರವೇ ಮನೆಯೊಳಗಿರುವ ಅರ್ಧಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಹೊರಕ್ಕೆ ಹೋಗುವ ಸಾಧ್ಯತೆಯೂ ಇದೆ.
ಬಿಗ್‌ಬಾಸ್‌ನ ಮೊದಲ ಮಿಡ್ ಸೀಸನ್ ಫೈನಲ್‌ನ ಫೈನಲಿಸ್ಟ್‌ಗಳಾಗಿ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಂಪನಾಳ, ಸ್ಪಂದನಾ ಆಯ್ಕೆಯಾಗಿದ್ದಾರೆ. ಇವರನ್ನು ಹೊರತು ಪಡಿಸಿದರೆ ಈ ವಾರ ಯಾರೂ ಸೇಫಾಗಿ ಉಳಿದಿಲ್ಲ. ಫೈನಲಿಸ್ಟ್ ಗಳಾಗಿ ಆಯ್ಕೆಯಾದ ನಾಲ್ವರನ್ನು ಹೊರತುಪಡಿಸಿ ಉಳಿದವರೆಲ್ಲಾ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದೀರಿ ಎಂದು ಬಿಗ್ ಬಾಸ್ ನಿನ್ನೆ ರಾತ್ರಿ ಘೋಷಿಸಿದೆ. ಹೀಗಾಗಿ ಕಾಕ್ರೋಚ್ ಸುಧಿ, ಅಶ್ವಿನಿಗೌಡ, ಮಾಳು ನಿಂಪನಾಳ, ಸ್ಪಂದನಾ ಪೈಕಿ ಒಬ್ಬರು ಮಿಡ್ ಸೀಸನ್ ಫಿನಾಲೆಯಲ್ಲಿ ವಿಜೇತರಾಗಿ ಆಯ್ಕೆ ಆಗುವರು.
ಕಳೆದ ವಾರವೇ ಸುದೀಪ್ ಕೂಡ ಮುಂದಿನ ವಾರ ಮಾಸ್ ಎವಿಕ್ಷನ್ ನಡೆಯಲಿದ್ದು, ಆಟವನ್ನು ಸೀರಿಯಸ್ ಆಗಿ ತೆಗೆದುಕೊಳ್ಳಿ ಎಂದು ಎಚ್ಚರಿಕೆ ಬೇರೆ ನೀಡಿದ್ದಾರೆ.
ಹೀಗಾಗಿ ಸ್ಪರ್ಧಿಗಳ ಅಳಿವು ಉಳಿವು ಈಗ ಪ್ರೇಕ್ಷಕರ ಕೈಯಲ್ಲಿದ್ದು, ಈಗಾಗಲೇ ವೋಟಿಂಗ್ ಲೈನ್‌ಗಳು ಓಪನ್ ಆಗಿವೆ. ಪ್ರೇಕ್ಷಕರು ಜಿಯೋ ಹಾಟ್‌ಸ್ಟಾರ್‌ನ ಮೂಲಕ ತಮ್ಮ ನೆಚ್ಚಿನ ಆಟಗಾರನಿಗೆ ವೋಟ್ ಮಾಡಲು ಅವಕಾಶವಿದ್ದು, ಈ ಮೂಲಕ ಅವರನ್ನು ಮನೆಯಲ್ಲೇ ಉಳಿಸಿಕೊಳ್ಳಬಹುದು. ಬಿಗ್ ಬಾಸ್ ಮನೆಯಲ್ಲಿರುವವರ ಪೈಕಿ ಅರ್ಧದಷ್ಟು ಮಂದಿಯನ್ನು ಎಲಿಮಿನೇಟ್ ಮಾಡಿ, ಅವರ ಸ್ಥಾನಕ್ಕೆ ಹೊಸಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ಗೆ ಎಂಟ್ರಿಯಾಗುವ ಸಾಧ್ಯತೆಯೂ ಇದೆ. ಇದನ್ನು ಈಗಾಗಲೇ ಕಿಚ್ಚ ಸುದೀಪ್ ಹೇಳಿದ್ದಾರೆ. ಮಾಸ್ ಎವಿಕ್ಷನ್ ನಡೆಯುವುದು ಈಗ ಪಕ್ಕಾ ಆಗುತ್ತಿದೆ. ಕನಿಷ್ಠ ಅರ್ಧದಷ್ಟು ಸ್ಪರ್ಧಿಗಳಾದರೂ, ಈ ವಾರಾಂತ್ಯದಲ್ಲಿ ಬಿಗ್ ಬಾಸ್ ನಿಂದ ಹೊರಬರುವ ಸಾಧ್ಯತೆ ಇದೆ. ಹೀಗಾಗಿ ಬಿಗ್ ಬಾಸ್ ನಲ್ಲಿ ಇದೇ ಮೊದಲ ಭಾರಿಗೆ ಮೂರು ನಾಲ್ಕು ವಾರಕ್ಕೆ ಫಿನಾಲೆ ನಡೆಯುತ್ತಿದೆ. 9 ವಾರಗಳವರೆಗೂ ಫಿನಾಲೆಗಾಗಿ ಕಾಯುವ ಅಗತ್ಯತೆಯೇ ಈ ಭಾರಿ ಇಲ್ಲ! ಇದೇ ಈ ಭಾರಿಯ ಸ್ಪೆಷಾಲಿಟಿ.
/filters:format(webp)/newsfirstlive-kannada/media/media_files/2025/10/13/jhanavi-2025-10-13-11-35-40.png)
ಇನ್ನೂ ನಾಲ್ವರು ಫೈನಲಿಸ್ಟ್ ಗಳನ್ನು ವೇದಿಕೆಯಲ್ಲಿ ನಿಲ್ಲಿಸಿ, ಉಳಿದ ಸ್ಪರ್ಧಿಗಳು ಫಿನಾಲೆಗೆ ಯಾರು ಅರ್ಹರಲ್ಲವೋ ಅವರ ಮುಂದಿರುವ ಕೇಕ್ ಅನ್ನು ಕತ್ತರಿಸಿ ತಿನ್ನುತ್ತಾ ಅವರ ಏಕೆ ಫಿನಾಲೆಗೆ ಅರ್ಹರಲ್ಲ ಎಂದು ಮಾತನಾಡುವ ಅವಕಾಶ ಕೊಟ್ಟಿತ್ತು. ಇದರಲ್ಲೂ ಕಾಕ್ರೋಚ್ ಸುಧೀ, ಅಶ್ವಿನಿಗೌಡ, ಸ್ಪಂದನಾ ವಿರುದ್ಧ ಉಳಿದ ಸ್ಪರ್ಧಿಗಳು ಮಾತನಾಡಿದ್ದು ಜಗಳಕ್ಕೆ ಕಾರಣವಾಗಿತ್ತು.
ಅಶ್ವಿನಿಗೌಡ ಅರ್ಹತೆಯಿಂದ ಫೈನಲಿಸ್ಟ್ ಆಗಿ ಫಿನಾಲೆಗೆ ಆಯ್ಕೆಯಾಗಿಲ್ಲ. ಬೇರೆಯವರ ಗೆದ್ದ ಟಾಸ್ಕ್ ನಿಂದ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ ಎಂದು ಕಾವ್ಯಾ ಹೇಳಿದರೇ, ನೀನು ಯಾವುದೇ ಟಾಸ್ಕ್ ಗೆದ್ದಿಲ್ಲ ಎಂದು ಅಶ್ವಿನಿಗೌಡ ಸ್ಥಳದಲ್ಲೇ ತಿರುಗೇಟು ಕೊಟ್ಟರು.
ಇನ್ನೂ ಕಾಕ್ರೋಚ್ ಸುಧೀ ಕೂಡ ಅಸುರನ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ, ಹೀಗಾಗಿ ಫೈನಲಿಸ್ಟ್ ಆಗಲು ಅರ್ಹರಲ್ಲ ಎಂಬ ಟೀಕೆ ಕೇಳಿ ಬಂತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.