ಗೆಳೆಯರೇ ಶತ್ರುಗಳು! ಬಿಗ್ ಬಾಸ್ ನಲ್ಲಿ ಒಂಟಿ ತಂಡದ ಸದಸ್ಯರಲ್ಲೇ ಜಗಳ ಏಕೆ?

ಬಿಗ್ ಬಾಸ್ ನಲ್ಲಿ ಗೆಳೆಯರೇ ಶತ್ರುಗಳಾಗುತ್ತಿದ್ದಾರೆ. ಒಂಟಿ ತಂಡದ ಸದಸ್ಯರಲ್ಲೇ ಪರಸ್ಪರ ಜಗಳ ಶುರುವಾಗಿದೆ. ಧನುಷ್ ಮತ್ತು ಕಾಕ್ರೋಚ್ ಸುಧಿ ನಡುವೆ ಟಾಕ್ ಫೈಟ್ ನಡೆದಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬ ಕುತೂಹಲ ಇದೆ. ಒಂದೇ ತಂಡದವರೇ ಪರಸ್ಪರ ಕಿತ್ತಾಡುತ್ತಿದ್ದಾರೆ.

author-image
Chandramohan
dhanush gowda and sudhi

ಕಾಕ್ರೋಚ್ ಸುಧಿ ಮತ್ತು ಧನುಷ್ ನಡುವೆ ಜಗಳ

Advertisment
  • ಕಾಕ್ರೋಚ್ ಸುಧಿ ಮತ್ತು ಧನುಷ್ ನಡುವೆ ಜಗಳ
  • ಬಿಗ್ ಬಾಸ್‌ನ ಒಂಟಿ ತಂಡದ ಸದಸ್ಯರ ನಡುವೆ ಕಿತ್ತಾಟ

ಬಿಗ್‌ಬಾಸ್‌ನ ಮೊದಲ ವಾರದ ಫೈನಲಿಸ್ಟ್‌ ಆಗೋ ಆಸೆಯಲ್ಲಿ ನ್ಯಾಯ ಅನ್ಯಾಯ ಅನ್ನೋ ಮೇರೆಯನ್ನೇ ಮೀರಿ ಯೋಚಿಸೋಕೆ ಮುಂದಾದ ಕಂಟೆಂಡರ್‌ಗಳು. ಇದು ಒಂದೇ ತಂಡದ ನಡುವೆ ಅಂತರ್ಯುದ್ಧಕ್ಕೆ ಕಾರಣವಾಗುತ್ತಾ? 

ಮೊದಲ ವಾರದ ಫೈನಲಿಸ್ಟ್‌ ಆಗೋಕೆ ಬಿಗ್‌ಬಾಸ್‌ ಟಾಸ್ಕ್‌ವೊಂದನ್ನು ನೀಡಿದ್ರು. ಇದನ್ನು ಸ್ಪರ್ಧಿಗಳಾಗಲಿ, ಉಸ್ತುವಾರಿಗಳಾಗಲಿ ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಪ್ಪು ಮಾಡಿದ್ರು. ಧನುಷ್‌ ಎಲ್ಲರಿಗಿಂತಲೂ ಮೊದಲು ಆಟ ಕಂಪ್ಲೀಟ್‌ ಮಾಡಿದ್ರೂ ಅವರು ನಿಯಮ ಫಾಲೋ ಮಾಡದ ಕಾರಣ ಫೈನಲಿಸ್ಟ್‌ ಆಗಲಿಲ್ಲ. ಇಲ್ಲಿಯವರೆಗೆ ಎಲ್ಲವೂ ಸರಿಯಾಗೇ ಇತ್ತು. ಇಲ್ಲಿಂದ ಮುಂದೆ ಶುರುವಾಗಿದ್ದೇ ಹೊಸ ಆಟ. 
ಆಟವನ್ನು ಸ್ಪರ್ಧಿಗಳು ಮತ್ತು ಉಸ್ತುವಾರಿಗಳು ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪು ಮಾಡಿದ್ದರು. ಈಗ ಮುಂದೇನು ಮಾಡೋದು ಅನ್ನೋ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಉಸ್ತುವಾರಿಗಳಿಗೆ ನೀಡಲಾಗಿತ್ತು. ಈ ವೇಳೆ ಉಳಿದ ಕಂಟೆಂಡರ್‌ಗಳು ಧನುಷ್‌ ಆಟದಲ್ಲಿ ಸೋತಾಗಿದೆ ನಾವೀಗ ಆಟ ಮುಂದುವರಿಸುವ ಎಂದು ಹೇಳೋಕೆ ಶುರು ಮಾಡಿದ್ರು. ಆದರೆ ಧನುಷ್‌ ಇದನ್ನು ಒಪ್ಪಿಕೊಳ್ಳೋಕೆ ಸಿದ್ಧರಿರಲಿಲ್ಲ. ಎಲ್ಲರೂ ಟಾಸ್ಕ್‌ನ ನಿಯಮ ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪು ಮಾಡಿದ್ದಾರೆ. ನಂದೊಬ್ಬನದ್ದೇ ತಪ್ಪಿಲ್ಲ. ಹೀಗಿರುವಾಗ ನಾನು ಇಷ್ಟು ಚೆನ್ನಾಗಿ ಆಡಿಯೂ ಸೋತೆ ಅನ್ನುವುದಾದರೆ ನನಗೆ ಮೋಸ ಮಾಡಿದ ಹಾಗೆ ಆಗುತ್ತಲ್ಲ ಎಂದು ಹೇಳಿದ್ರು. 
ಇದು ಕಾಕ್ರೋಚ್‌ ಸುಧಿಯನ್ನು ಕೆರಳಿಸಿಯೇ ಬಿಡ್ತು, ಧನುಷ್‌ ಆಡಿ ಘಂಟೆ ಹೊಡೆದು ಸೋತೂ ಆಗಿದೆ. ಹೀಗಿರುವಾಗ ನಾವು ನಮ್ಮ ಚಾನ್ಸ್‌ನ್ನು ಯಾಕೆ ಬಿಟ್ಟು ಕೊಡಬೇಕು. ನಮಗಿನ್ನೂ ಅವಕಾಶ ಇದ್ಯಲ್ಲ ಅಂತ ಫುಲ್‌ ರೇಗಾಡೋಕೆ ಶುರು ಮಾಡಿದ್ರು. ಧನುಷ್‌ನ್ನು ಹೊರಗಿಟ್ಟು ಆಟ ಮುಂದುವರಿಸೋಣ ಅಂತಿದ್ರೆ ಧನುಷ್‌ ಮಾತ್ರ ತಮ್ಮ ನಿರ್ಧಾರಕ್ಕೆ ಬದ್ದವಾಗಿದ್ರು. 
ಚರ್ಚೆ ಯಾವ ಮಟ್ಟಕ್ಕೆ ಮುಂದುವರೆದಿದೆಯೆಂದ್ರೆ ಸುಧಿ ಮತ್ತು ಧನುಷ್‌ ನಡುವೆ ಭಾರಿ ವಾಗ್ವಾದವೇ ಆಗುತ್ತೆ. ಒಂದೇ ತಂಡದಲ್ಲಿದ್ದು ಗೆಳೆಯರಂತೆ ಜೊತೆಯಾಗಿ ಸ್ಪರ್ಧಿಸುತ್ತಿದ್ದ ಸುಧಿ ಮತ್ತು ಧನುಷ್‌ ನಡುವೆಯೇ ಭಾರಿ ವಾಗ್ಯುದ್ಧ ನಡೆದಿದೆ. ಹತ್ತನೇ ಕ್ಲಾಸ್‌ ನಂತ್ರ ಯೂನಿಫಾರ್ಮ್‌ ತೆಗೆದು ಫೀಲ್ಡ್‌ಗೆ ಬಂದ್ರೆ ಹೀಗೆ ಆಗೋದು ಅನ್ನುವ ಮಟ್ಟಕ್ಕೆ ಮಾತು ಮುಂದುವರಿದಿದೆ. 
ಈ ಜಗಳ ಎಲ್ಲಿ ತನಕ ಹೋಗುತ್ತೆ? ಇಲ್ಲಿವರೆಗೂ ಒಂದಾಗಿದ್ದ ಒಂಟಿ ತಂಡ ಈ ಒಂದು ಟಾಸ್ಕ್‌ನಿಂದ ಮುರಿದ ಮನೆಯಾಗುತ್ತಾ ಅನ್ನೋದು ಬಿಗ್‌ ಟ್ವಿಸ್ಟ್‌. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Big boss dhanush gowda
Advertisment