/newsfirstlive-kannada/media/media_files/2025/11/21/manasa-and-shivu-1-2025-11-21-09-57-40.jpg)
/newsfirstlive-kannada/media/media_files/2025/11/21/manasa-and-shivu-5-2025-11-21-09-58-29.jpg)
ಗಿಚ್ಚಿ-ಗಿಲಿಗಿಲಿ ಜೋಡಿ
ಇಲ್ಲ ಇಲ್ಲ.. ಆಗೋದಿಲ್ಲ.. ನಮ್ಮ ನಡುವೆ ಏನೂ ಇಲ್ಲ. ಜಸ್ಟ್ ಫ್ರೆಂಡ್ಸ್ ಅಂತಿದ್ದ ಗಿಚ್ಚಿ-ಗಿಲಿಗಿಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.
/newsfirstlive-kannada/media/media_files/2025/11/21/manasa-and-shivu-2025-11-21-09-58-55.jpg)
ಶಿವು ಮತ್ತು ಮಾನಸ
ಗಿಚ್ಚಿ ಗಿಲಿಗಿಲಿ ಮೂಲಕ ಈ ಇಬ್ಬರು ಫೇಮಸ್ ಆದ್ರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಇವ್ರ ಪ್ರೀತಿ ವಿಚಾರ ಓಡಾಡ್ತಾನೆ ಇತ್ತು. ಅವ್ರೇ ಶಿವು-ಮಾನಸ.
/newsfirstlive-kannada/media/media_files/2025/11/21/manasa-and-shivu-6-2025-11-21-10-02-24.jpg)
ಅಧಿಕೃತ ಮುದ್ರೆ
ಗಿಚ್ಚಿ ಗಿಲಿಗಿಲಿ ಮಾನಸ ಹಾಗೂ ಶಿವಕುಮಾರ್ ಜೋಡಿ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ಇವ್ರ ಪ್ರೀತಿ ವಿಚಾರ ಸ್ನೇಹ ಬಳಗಕ್ಕೆ ಗೊತ್ತಿತ್ತು. ಆಗಾಗ ಕಾಲ್ ಎಳಿಯುತ್ತಿದ್ದರು ಗೆಳೆಯರು. ಈಗ ಅಧಿಕೃತವಾಗಿಯೇ ಅನೌನ್ಸ್ ಮಾಡಿದೆ ಜೋಡಿ.
/newsfirstlive-kannada/media/media_files/2025/11/21/manasa-and-shivu-3-2025-11-21-10-03-00.jpg)
ನವೆಂಬರ್ 27ಕ್ಕೆ ಎಂಗೇಜ್ಮೆಮಟ್
ಕಳೆದ ವರ್ಷ ಶಿವು ಮನೆ ಕಟ್ಟಿ ಗೃಹಪ್ರವೇಶ ಮಾಡಿದ್ರು. ಶೀಘ್ರದಲ್ಲೇ ಗೃಹಲಕ್ಷ್ಮೀ ಮಾನಸರನ್ನ ಮನೆ ತುಂಬಿಸಿಕೊಳ್ತಿದ್ದಾರೆ. ಇದೇ ನವೆಂಬರ್ 27 ರಂದು ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿ ಜೋಡಿ ನಿಶ್ಚಿತಾರ್ಥ ಜರುಗಲಿದೆ.
/newsfirstlive-kannada/media/media_files/2025/11/21/manasa-and-shivu-2-2025-11-21-10-03-47.jpg)
ಈ ಕುರಿತು ಶಿವು ಅಣ್ಣನ ಪುಟಾಣಿ ತಂಗಿ ವಂಶಿಕಾ ಕೂಡ ರಿಯ್ಯಾಕ್ಟ್ ಮಾಡಿದ್ದು, ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗೋಕೆ ರೆಡಿಯಾಗಿದ್ದಾಳೆ. ನಮ್ಮ ಕಡೆಯಿಂದಲೂ ಶಿವು ಮಾನಸ ಜೋಡಿಗೆ ಶುಭಾಶಯಗಳು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us