/newsfirstlive-kannada/media/media_files/2025/10/02/ashwini-gowda-2025-10-02-08-49-37.jpg)
ನಟಿ ಅಶ್ವಿನಿ ಗೌಡ ಹಾಗೂ ಗಿಲ್ಲಿ, ಕಾವ್ಯಾ
ನಟಿ ಅಶ್ವಿನಿ ಗೌಡ ಬಿಗ್‌ಬಾಸ್ ಮನೆಯಲ್ಲಿ ರಾಜಮಾತೆಯಾಗಿ ತಮ್ಮ ಹವಾ ತೋರಿಸೋಕೆ ಸಜ್ಜಾಗಿದ್ರೆ ಗಿಲ್ಲಿ ಮತ್ತು ಕಾವ್ಯ ಜೋಡಿ ರಾಜಮಾತೆ ಕೆಂಗಣ್ಣಿಗೆ ಗುರಿಯಾಗಿದೆ. ರಾಜಮಾತೆ ಅಬ್ಬರಕ್ಕೂ ಬೆದರದ ಗಿಲ್ಲಿ ರಾಜಮಾತೆಯನ್ನೇ ಕಾಲೆಳೆಯುತ್ತಿದ್ದಾರೆ.
ಬಿಗ್‌ಬಾಸ್ ಆರಂಭವಾಗಿ ಒಂದು ವಾರವೂ ಆಗಿಲ್ಲ. ಅಷ್ಟರಲ್ಲೇ ಬಿಗ್‌ಬಾಸ್ ಮನೆಯಲ್ಲಿ ಒಂಟಿ ತಂಡದ ಸದಸ್ಯರು ಮತ್ತು ಜಂಟಿ ತಂಡದ ಸದಸ್ಯರ ನಡುವೆ ಜಗಳ ಆರಂಭವಾಗಿದೆ. ಒಂಟಿ ತಂಡದಿಂದ ರಾಜಮಾತೆಯಾಗಿರುವ ಅಶ್ವಿನಿ ಗೌಡ ತಮ್ಮ ಅಧಿಕಾರ ಚಲಾಯಿಸುವ ಭರದಲ್ಲಿ ಗಿಲ್ಲಿ ಮತ್ತು ಕಾವ್ಯರನ್ನು ಟಾರ್ಗೆಟ್ ಮಾಡಿದ್ರೆ ಇದನ್ನು ಕ್ಯಾರೆ ಅನ್ನದ ಗಿಲ್ಲಿ ರಾಜಮಾತೆಯನ್ನೇ ಕಾಲೆಳೆಯುತ್ತಿದ್ದಾರೆ.
ಬಿಗ್‌ಬಾಸ್ ಅರಮನೆಯಲ್ಲಿ ಜಂಟಿ ತಂಡದವರು ತಮ್ಮ ಊಟ ತಿಂಡಿಯ ತಟ್ಟೆಯನ್ನೂ ತೊಳೆದಿಡುತ್ತಿಲ್ಲ ಅನ್ನೋ ವಿಚಾರಕ್ಕೆ ಚರ್ಚೆ ಶುರುವಾಗಿತ್ತು. ಇದರ ಬಗ್ಗೆಯೇ ಮಾತಾಡೋಕೆ ಅಶ್ವಿನಿ ಗೌಡ ಎಲ್ಲರನ್ನೂ ಸೇರಿಸಿದ್ರು. ಅವರು ಮಾತನಾಡುತ್ತಿರೋದನ್ನ ಕಾವ್ಯ ಸರಿಯಾಗಿ ಕೇಳಿಸಿಕೊಳ್ಳುತ್ತಿಲ್ಲ ಅನ್ನೋ ವಿಚಾರಕ್ಕೆ ಅಶ್ವಿನಿ ಮತ್ತು ಕಾವ್ಯ ನಡುವೆ ಚರ್ಚೆ ಶುರುವಾಗುತ್ತದೆ. ನಂತರ ಗಿಲ್ಲಿಯೂ ಈ ಚರ್ಚೆಯಲ್ಲಿ ಸೇರಿಕೊಳ್ಳುತ್ತಾರೆ. ಅಲ್ಲಿಂದ ಗಿಲ್ಲಿ ಅಶ್ವಿನಿಯ ಟಾರ್ಗೆಟ್ ಆಗುತ್ತಾರೆ. ಅವರಿಗಿದ್ದ ಡ್ಯೂಟಿಯನ್ನು ಬದಲಿಸಿ ಬಾತ್‌ರೂಂ ಕ್ಲೀನ್ ಮಾಡೋ ಕೆಲಸ ಕೊಡ್ತಾರೆ.
ಅಶ್ವಿನಿಯ ದರ್ಪಕ್ಕೆ ಗಿಲ್ಲಿ ಕ್ಯಾರೆ ಮಾಡಲ್ಲ, ಬಾತ್‌ರೂಂ ಕ್ಲೀನ್ ಮಾಡೋವಾಗ ಅಶ್ವಿನಿ ಬಂದು ನಿಂತ್ರೆ ವಾಚ್‌ಮನ್ ಅನ್ನೋದು, ಬೇಕು ಬೇಕಂತಲೇ ಅವರ ಕಾಲೆಳೆಯೋ ಪ್ರಯತ್ನ ಮಾಡ್ತಾರೆ. ಇಷ್ಟಕ್ಕೇ ಸುಮ್ಮನಾಗದ ಗಿಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಶ್ವಿನಿ ಅಭಿನಯಿಸಿದ್ದ ರಾಜಾಹುಲಿ ಫಿಲಂನ ಡೈಲಾಗ್‌ನ್ನು ಪದೇಪದೆ ಹೇಳಿ ರೇಗಿಸ್ತಾರೆ. ನಾನು ನಮ್ಮ ಅತ್ತೆ ಮಗಳಿಗೆ ಕೊನೆಯವರೆಗೂ ಕಣ್ಣು ಹೊಡೆಯುತ್ತೇನೆ ಎಂದು ಹೇಳುತ್ತಾರೆ. ಇಷ್ಟೂ ಸಾಲದು ಅನ್ನುವಂತೆ ಒಂಟಿ ತಂಡದ ಸದಸ್ಯರಿಗೆ ಟೀ ಮಾಡಿ ಅದರಲ್ಲಿ ಅಶ್ವಿನಿ ಟೀಗೆ ಮಾತ್ರ ಉಪ್ಪು ಬೆರೆಸಿ ಕೊಡ್ತಾರೆ. ಇದಕ್ಕೆ ಸ್ವಿಮ್ಮಿಂಗ್ ಫೂಲ್‌ನಲ್ಲಿ ಮುಳುಗೋ ಪನಿಶ್‌ಮೆಂಟ್ ಕೂಡ ಅನುಭವಿಸ್ತಾರೆ.
ಈ ಕೋಳಿ ಜಗಳ ಮುಂದಿನ ದಿನಗಳಲ್ಲಿ ಹೇಗೆ ಟ್ವಿಸ್ಟ್ ಪಡೆಯುತ್ತೆ. ಗಿಲ್ಲಿ, ಅಶ್ವಿನಿ ಮನಸ್ಸನ್ನು ಗೆಲ್ಲೋದಿಕ್ಕೆ ಸಾಧ್ಯವಾಗುತ್ತಾ ಅನ್ನೋದನ್ನು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.