/newsfirstlive-kannada/media/media_files/2025/10/24/gilli-style-2025-10-24-09-25-26.jpg)
ಗಿಲ್ಲಿ ನಟ Photograph: (ಕಲರ್ಸ್ ಕನ್ನಡ)
ದೊಡ್ಮನೆಯಲ್ಲಿ ಕಾವ್ಯ-ಗಿಲ್ಲಿ ಜಂಟಿಯಾಗಿ ಬಂದಾಗಿನಿಂದ ಸುದ್ದಿಯಲ್ಲಿ ಇರ್ತಾರೆ. ತಮ್ಮದೆ ಆದ ಕ್ಯೂಟ್​ ಮಾತುಗಳಿಂದ ಪ್ರೇಕ್ಷಕರನ್ನ ಸೆಳೆಯುತ್ತಾರೆ.ಈ ಮಧ್ಯೆ ಗಿಲ್ಲಿ, ಕಾವ್ಯಳ ಬಿಟ್ಟು ಈ ವಾರ ಮನೆಗೆ ಎಂಟ್ರಿ ಕೊಟ್ಟ ರಿಷಾ ಗೌಡ ಹಿಂದೆ ಬಿದ್ದಿದ್ದ. ಇದ್ರಿಂದ ಮುನಿಸಿಕೊಂಡಿದ್ದ ಕಾವ್ಯ, ಸರಿಯಾಗಿ ಮಾತಾಡ್ತಿರಲಿಲ್ಲ.
ಗಿಲ್ಲಿ ಪ್ಲೀಸ್ ಕಾವು ಮಾತನಾಡು ಅಂತಾ ರಿಕ್ವೇಸ್ಟ್ ಮಾಡಿದ್ದು, ತನ್ನನ್ನು ಕ್ಷಮಿಸಿ, ಮಾತನಾಡು ಅಂತಾ ಕಾವ್ಯಗೆ ಗಿಲ್ಲಿ ಅಂಗಲಾಚಿದ್ದು ಇದೆ. ನಿನ್ನ ಜೊತೆ ಮಾತಾಡಬೇಕು ಅಂದ್ರೆ ನಾನೊಂದು ಹೇಳ್ತೀನಿ, ಅದನ್ನು ಮಾಡಿದ್ರೆ ಮಾತ್ರ ಮಾತಾಡ್ತೀನಿ ಎಂದು ಕಾವ್ಯ ಷರತ್ತು ಇಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/10/24/gilli-new-look-2025-10-24-09-27-13.jpg)
ಅದು ಏನಾಪ್ಪ ಅಂದ್ರೆ ಕಾವ್ಯ ಕ್ಲೀನ್​ ಶೇವ್​ ಮಾಡಿಕೊಂಡು ಬಾ ಅಂದಿದ್ದಾರೆ. ಕ್ಲೀನ್ ಶೇವ್ ನನಗೆ ಚೆನ್ನಾಗಿ ಕಾಣಲ್ಲ ಅಂತಿದ್ದ ಗಿಲ್ಲಿ ನಿನ್ನೆಯ ಎಪಿಸೋಡಿನಲ್ಲಿ ಶೇವ್​ ಮಾಡಿ ಕೆಂಪೇಗೌಡ ಆಗಿ ಲುಕ್​ ಚೇಂಜ್​ ಮಾಡಿಕೊಂಡಿದ್ದಾರೆ. ಕಾವ್ಯ ಗೈಡ್​ ಮಾಡಿದ ಹಾಗೇ ಚಂದ್ರಪ್ರಭ ಹಾಗೂ ಧ್ರುವಂತ್​ ಸೇರಿ ಗಿಲ್ಲಿಗೆ ಶೇವ್​ ಮಾಡಿದ್ದು, ಆ ವೇಳೆ ಟ್ರಿಮ್ಮರ್​ ಚಾರ್ಜ್​​ ಖಾಲಿ ಆಗ್ಬಿಟ್ಟಿದೆ. ಈ ಮಾತುಕತೆ ಗಿಲ್ಲಿ ಗೋಳಾಟ ಪ್ರೇಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿದೆ. ನಮ್ಮೂರ ಗೌಡರೆಂದು ರಾಜಗಂಭೀರ ಎಂದು ಪಂಚೆ ಧರಿಸಿ ಗಾರ್ಡನ್​ ಏರಿಯಾಗೆ ಎಂಟ್ರಿ ಕೊಟ್ಟಿದ್ದು ಮನೆ ಮಂದಿ ಶಾಕ್​ ಆಗಿದ್ದಾರೆ.
ಸದ್ಯ ಕಾವ್ಯ ಹಾಗೂ ಗಿಲ್ಲಿ ಕ್ಯೂಟ್ ಲವ್ವಾಟ ವೀಕ್ಷಕರ ಎದೆಗೂ ಕಚಗುಳಿಯನ್ನ ಇಡ್ತಿದೆ. ತರ್ಲೆ ಮಾತುಗಳ ಮೂಲಕ ವೀಕ್ಷಕರ ಹೃದಯ ಗೆಲ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us