/newsfirstlive-kannada/media/media_files/2025/11/16/kiccha-sudeep-1-2025-11-16-09-29-39.jpg)
ನಿನ್ನೆಯ ಎಪಿಸೋಡ್​​ನಲ್ಲಿ ಕಿಚ್ಚ ಸುದೀಪ್ ತುಂಬಾನೇ ಗರಂ ಆಗಿದ್ದರು. ಆದರೆ ಇವತ್ತು ಅಂದರೆ ಸಂಡೆ ವಿತ್ ಬಾದ್​ ಷಾ ಸುದೀಪ್ ಎಪಿಸೋಡ್​ನಲ್ಲಿ ತುಂಬಾನೇ ಜಾಲಿ ಜಾಲಿಯಾಗಿದ್ದು, ವೀಕ್ಷಕರಿಗೆ ನಗುವಿನ ಟಾನಿಕ್ ಸಿಗಲಿದೆ.
ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಗೆ ಸಂಬಂಧಿಸಿ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಅದರಲ್ಲಿ ಸುದೀಪ್ ಅವರು, ಗಿಲ್ಲಿಯಾಗಿದ್ದು.. ಗಿಲ್ಲಿ ಸುದೀಪ್ ಆಗಿ ಗೆಟಪ್ ಚೇಂಜ್ ಮಾಡಿದ್ದಾರೆ. ಅಂತೆಯೇ ಗಿಲ್ಲಿ ಸುದೀಪ್ ಆಗಿ ಅನುಕರಣೆ ಮಾಡಿದ್ದಾರೆ.
ಗಿಲ್ಲಿ ಸುದೀಪ್ ಆಗಿ ನಗಿಸಿದ್ದು ಹೇಗೆ..?
ಗಿಲ್ಲಿಯವರು ಸುದೀಪ್ ಸ್ಟೈಲ್​ನಲ್ಲಿ ಡೈಲಾಗ್ ಹೊಡೆದು ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡಿದ್ದಾರೆ. ‘ರಾಶಿಕಾ ಅವರೇ, ಈ ಮನೆಯಲ್ಲಿ ಕೂಗಾಡೋದ್ರಿಂದ ಮಾತ್ರ ಪ್ರಾಬ್ಲಂ ಆಗಲ್ಲ. ವಾಮಿಟ್ ಮಾಡೋದ್ರಿಂದ, ಚಪ್ಪಾಳೆ ತಟ್ಟೋದ್ರಿಂದಲೂ ಪ್ರಾಬ್ಲಂ ಆಗುತ್ತೆ’ ಎಂದು ಡೈಲಾಗ್ ಹೊಡೆದಿದ್ದಾರೆ.
ನಂತರ ಕಾವ್ಯ ಬಗ್ಗೆ ಮಾತನಾಡಿ.. ಬಿಗ್​ ಬಾಸ್​ ಮನೆಯಲ್ಲಿ ಕಾಣುವಂಥ ಅಪ್ಸರಾ.. ಅವಳ ಕಣ್ಣುಗಳೇ ನೋಡೋದಕ್ಕೆ ಸುಂದರ.. ಎಂದು ಹಾಡಿನ ಮೂಲಕ ಡೈಲಾಗ್ ಹೊಡೆದಿದ್ದಾರೆ. ಆಗ ಸುದೀಪ್, ‘ಇದ್ಯಾಕೋ ನಾನು ಹೇಳ್ತ ಇದ್ದಂಗೆ ಇದ್ಯಲ್ಲ ಅಣ್ಣ.. ಇದು..’ ಅಂತಾ ಗಿಲ್ಲಿಯನ್ನು ಇಮಿಟೇಟ್ ಮಾಡಿದ್ದಾರೆ. ಅದಕ್ಕೆ ಗಿಲ್ಲಿ, ಸುದೀಪ್ ಸ್ಟೈಲ್​​ನಲ್ಲಿ.. ‘ಹೇಳಬೇಕು ಅನಿಸ್ತು.. ಹೇಳ್ದೆ..’ ಎಂದು ಹಾಸ್ಯ ಮಾಡಿದ್ದಾರೆ.
ಇದನ್ನೂ ಓದಿ: TV TRP: ಈ ವಾರ ಬಿಗ್​ಬಾಸ್​ಗೆ ಜನರು ಕೊಟ್ಟ ರೇಟ್ ಎಷ್ಟು..?
ಗಿಲ್ಲಿ ಮಾಡಿದ ನಕಲಿಗೆ ಎಷ್ಟು ಮಾರ್ಕ್ಸ್?
— Colors Kannada (@ColorsKannada) November 16, 2025
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/qmsO8wDZ4s
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us