/newsfirstlive-kannada/media/media_files/2025/10/23/gilli-kavya-2025-10-23-10-51-18.png)
Photograph: (colors kannada)
ಮನರಂಜನೆಗಾಗಿ ನಿನ್ನೆ ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳು ಸ್ಕಿಟ್ ಮಾಡುತ್ತಿದ್ದರು. ಮಾಳು-ಜಾಹ್ನವಿ, ಕಾವ್ಯಾ-ಗಿಲ್ಲಿ & ಸೂರಜ್-ರಾಶಿಕಾ. ಈ ವೇಳೆ ಗಿಲ್ಲಿ ನಟ ಕಾವ್ಯಾಗೆ I Love You.. You Must Love Me.. ಎಂದು ಪ್ರಪೋಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
/filters:format(webp)/newsfirstlive-kannada/media/media_files/2025/10/23/gilli-nata-2025-10-23-10-52-08.png)
ಶಿವಣ್ಣ-ಪ್ರೇಮಾ ಅಭಿನಯದ ಸೂಪರ್ ಹಿಟ್ ಸಿನಿಮಾ 'ಓಂ' ಸಿನಿಮಾದ ತುಣಕನ್ನ ಕಾವ್ಯಾ-ಗಿಲ್ಲಿ ಅಭಿನಯಿಸುತ್ತಿದ್ದರು. ಮಧು ತಗೊ ಈ ಸೀರೆ ಉಟ್ಕೊಂಡು ಬಾ, ಈ ಸೀರೆಯಲ್ಲಿ ನೀನು ಎಷ್ಟು ಚೆನ್ನಾಗಿ ಕಾಣ್ತೀಯಾ ಗೊತ್ತಾ? ಎಂದು ಗಿಲ್ಲಿ ಪ್ರೇಮ ನಿವೇದನೆ ಮಾಡಿದ್ದಾರೆ. ನೀನಂದ್ರೆ ನನ್ಗೆ ಇಷ್ಟ ಇಲ್ಲ.. ಇಷ್ಟ ಇಲ್ಲ.. ಇಷ್ಟ ಇಲ್ಲ.. ಇಷ್ಟ ಇಲ್ಲ ಅಂದ್ರು ಯಾಕಿಷ್ಟು ಪೀಡುಸ್ತೀಯಾ ಎಂದು ಕಾವ್ಯಾ ಕೌಂಟರ್ ಡೈಲಾಗ್ ಹೊಡೆದಿದ್ದಾರೆ.
/filters:format(webp)/newsfirstlive-kannada/media/media_files/2025/10/23/bigg-boss-12-2025-10-23-10-52-46.png)
ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ ಏಯ್.. ಯಾಕೆ ಲವ್ ಮಾಡಲ್ಲ ? ಯಾಕಿಷ್ಟ ಇಲ್ಲ ? ನನ್ಗೇನು ಅಂದ ಇಲ್ವಾ? ಚಂದ ಇಲ್ವಾ ? ಕಣ್ಣಿಲ್ವಾ ? ಬಾಯಿ ಇಲ್ವಾ ? ಎಂದಿದ್ದು ಗಿಲ್ಲಿಯಾ ಡೈಲಾಗ್​ಗೆ ಕಾವ್ಯಾ ಸೇರಿದಂತೆ ಮನೆಯ ಇತರೆ ಸ್ಪರ್ಧಿಗಳು ಜೋರಾಗಿ ನಕ್ಕಿದ್ದಾರೆ.
/filters:format(webp)/newsfirstlive-kannada/media/media_files/2025/10/23/bigg-boss-kavya-2025-10-23-10-53-26.png)
ನಿನ್ನ ಲವ್ ಮಾಡ್ಬೇಡ ಅಂತ ಹೇಳೋಕೆ ನಿನ್ಗೆ ಯಾವ ರೈಟ್ಸ್ ಕೂಡ ಇಲ್ಲ. ಅಷ್ಟೇ ಅಲ್ಲ ಈ ಪ್ರಪಂಚದಲ್ಲಿ ಯಾವ ಹುಡುಗಿ ಯಾವ ಹುಡಗನಿಗೂ ಲವ್ ಮಾಡ್ಬೇಡ ಅಂತ ಹೇಳೋಕೆ ರೈಟ್ಸ್ ಇಲ್ಲ. ನೀನ್ ಲವ್ ಮಾಡ್ಬೇಕು ಅಂತ ಲವ್ ಮಾಡೋದು ಸ್ವಾರ್ಥದ ಲವ್, ನೀನ್ ನನ್ನ ಲವ್ ಮಾಡು ಬಿಡು, ನಾನು ನಿನ್ನ ಲವ್ ಮಾಡ್ತೀನಿ. ನನ್ನದು ನಿಸ್ವಾರ್ಥದ ಪ್ರೀತಿ. ಅರ್ಥ ಮಾಡ್ಕೊ ನಾನು ನಿನ್ನನ್ನ ಲವ್ ಮಾಡ್ತಿದ್ದೀನಿ. I Love You.. You Must Love Me ಎಂದ ಕಾವ್ಯಾ ಕಣ್ಣನ್ನ ನೋಡ್ಕೊಂಡು ಗಿಲ್ಲಿ ಲವ್ ಬಾಣ ಬಿಟ್ಟಿದ್ದು, ಗಿಲ್ಲಿ ಮಾಡಿದ ಪ್ರಪೋಸ್ ಬಿಗ್​ಬಾಸ್ ಮಂದಿ ಫಿದಾ ಆಗಿದ್ದಾರೆ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us